ETV Bharat / state

ಬರ್ತ್‌ಡೇ ದಿನ ಸಿಬಿಐ ಬಲೆಯೊಳಗೆ ವಿನಯ ಕುಲಕರ್ಣಿ.. ವಶಕ್ಕೆ ಪಡೆಯಲು ಜೈಲಿಗೆ ಬಂದ ಅಧಿಕಾರಿಗಳ ತಂಡ!! - belgavi hindalaga jail

ಇಂದು ವಿನಯ ಕುಲಕರ್ಣಿ ಅವರ ಜನ್ಮ ದಿನ. ಧಾರವಾಡದಲ್ಲಿ ಈ ಬಾರಿ ಅವರ ಜನ್ಮ ದಿನವನ್ನು ಅದ್ದೂರಿಯಾಗಿ ನಡೆಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರು. ನಗರದಲ್ಲಿ ಕಟೌಟ್, ಪೋಸ್ಟರ್​​ಗಳನ್ನು ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ, ವಿನಯ್‌ ಕುಲಕರ್ಣಿ ಸಿಬಿಐ ವಿಚಾರಣೆಯ ಬಲೆಯೊಳಗೆ ಸಿಲುಕಿದ್ದಾರೆ..

vinaya kulkarni arrested:  CBI officials came to hindalaga jail
ವಿನಯ ಕುಲಕರ್ಣಿಗೆ 3 ದಿನಗಳ ಕಾಲ ಸಿಬಿಐ ಕಸ್ಟಡಿ; ಬೆಳ್ಳಂಬೆಳಗ್ಗೆ ಜೈಲಿಗೆ ಬಂದ ಸಿಬಿಐ ಅಧಿಕಾರಿಗಳು
author img

By

Published : Nov 7, 2020, 7:55 AM IST

Updated : Nov 7, 2020, 8:22 AM IST

ಬೆಳಗಾವಿ : ಜಿಲ್ಲಾ ಪಂಚಾಯತ್​​​ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿ ಹಿಂಡಲಗಾ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ವಶಕ್ಕೆ ಪಡೆಯಲು ಸಿಬಿಐ ಅಧಿಕಾರಿಗಳ ತಂಡ ಆಗಮಿಸಿದೆ. 3 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿರೋ ಹಿನ್ನೆಲೆ, ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಬೆಳಗಾವಿಯ ಹಿಂಡಲಗಾ ಜೈಲಿಗೆ ಆಗಮಿಸಿದ್ದಾರೆ.

ಬೆಳಗಾವಿಯ ಹಿಂಡಲಗಾ ಜೈಲು

ವಿನಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಲು ಹಿಂಡಲಗಾ ಜೈಲಿನಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಧಾರವಾಡದಲ್ಲಿ ಇಡೀ ದಿನ ವಿಚಾರಣೆ ನಡೆಸಿದ ಬಳಿಕ ನಿನ್ನೆ ಸಂಜೆ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ, ಹಿಂಡಲಗಾ ಜೈಲಿಗೆ ಕಳಿಸಲಾಗಿತ್ತು. ನಿನ್ನೆ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಬಳಿಕ 3 ದಿನ ಸಿಬಿಐ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿತ್ತು.

ಇಂದು ವಿನಯ ಕುಲಕರ್ಣಿ ಅವರ ಜನ್ಮ ದಿನ. ಧಾರವಾಡದಲ್ಲಿ ಈ ಬಾರಿ ಅವರ ಜನ್ಮ ದಿನವನ್ನು ಅದ್ದೂರಿಯಾಗಿ ನಡೆಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರು. ನಗರದಲ್ಲಿ ಕಟೌಟ್, ಪೋಸ್ಟರ್​​ಗಳನ್ನು ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ, ವಿನಯ್‌ ಕುಲಕರ್ಣಿ ಜೈಲಿನಿಂದ ಸಿಬಿಐ ಕಸ್ಟಡಿಗೆ ಹೋಗುತ್ತಿದ್ದಾರೆ. ಸಿಬಿಐ 3 ದಿನಗಳ ಕಾಲ ಅವರನ್ನ ವಿಚಾರಣೆ ನಡೆಸಲಿದೆ.

Last Updated : Nov 7, 2020, 8:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.