ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯ ಮತವನ್ನ ಮರು ಎಣಿಕೆ ನಡೆಸಲು ಕಳೆದ ತಿಂಗಳ ನ್ಯಾಯಾಲಯ ಆದೇಶ ಹೊರಡಿಸಿದ್ದು, ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ಮರುಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಕಳೆದ 2020 ಡಿಸೆಂಬರ್ 23ರಂದು ಚುನಾವಣಾ ನಡೆದಿತ್ತು ಡಿ.30ರಂದು ಫಲಿತಾಂಶ ಪ್ರಕಟವಾಗಿತ್ತು. ಇನ್ನೂ ಈ ಚುನಾವಣೆ ಮತ ಎಣಿಕೆ ವೇಳೆ ಗೆದ್ದ ಅಭ್ಯರ್ಥಿಯೊಬ್ಬ 506 ಮತ ಪಡೆದಿದ್ದರು. ಪರಾಜಿತ ಅಭ್ಯರ್ಥಿ ರಾವಸಾಹೇಬ್ ಪಾಟೀಲ್ 505 ಮತಗಳನ್ನು ಪಡೆದು ಒಂದು ಮತಗಳಿಂದ ಸೋತಿದ್ದರು. ಬಳಿಕ ಚುನಾವಣಾ ಅಧಿಕಾರಿಗಳಿಗೆ ಮರು ಮತ ಎಣಿಕೆ ನಡೆಸುವಂತೆ ರಾವಸಾಹೇಬ ಮನವಿ ಮಾಡಿದ್ದರೂ ಅಧಿಕಾರಿಗಳು ಗೆದ್ದ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದರು.
ಇದರಿಂದ ಅಸಮಾಧಾನಗೊಂಡಿದ್ದ ರಾವಸಾಹೇಬ ಪಾಟೀಲ್ ಕೋರ್ಟ್ ಮೊರೆ ಹೋಗಿದ್ದು, ಇಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್.ರೊಟ್ಟೇರ್ ಸಮ್ಮುಖದಲ್ಲಿ ಮರು ಮತ ಎಣಿಕೆ ಕಾರ್ಯ ನಡೆಯಲಿದೆ.
ಇದನ್ನೂ ಓದಿ: ಎಫ್ಐಆರ್ ವರ್ಗಾಯಿಸಿದ ಬಳಿಕ ನ್ಯಾಯಾಲಯಕ್ಕೆ ತಿಳಿಸಿ: ಗೃಹ ಇಲಾಖೆಗೆ ಹೈಕೋರ್ಟ್ ಸೂಚನೆ