ಬೆಳಗಾವಿ, ಚಿಕ್ಕೋಡಿ: ನಗರದ ವಿವಿಧೆಡೆ ಮೂವರು ರೈತರು ಆತ್ಮಹತ್ಯೆ (Farmers Suicide) ಮಾಡಿಕೊಂಡಿದ್ದಾರೆ. ಸಾಲಬಾಧೆ ತಾಳಲಾರದೇ ಮೇಖಳಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಡಗಾವಿಯಲ್ಲಿ ಇನ್ನಿಬ್ಬರು ಸಾವಿಗೆ ಶರಣಾಗಿದ್ದಾರೆ.
ಮೇಖಳಿ ಗ್ರಾಮದ ರೈತ ಕಡ್ಯಾಗೋಳ (58) ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಮೃತಪಟ್ಟ ರೈತ ನಗರದ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿ (Primary Agricultural Cooperative Credit Society), ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಸಂಘ ಸಂಸ್ಥೆಗಳು ಹಾಗೂ ಫೈನಾನ್ಸ್ಗಳಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಇದರ ಜೊತೆ ಗ್ರಾಮದಲ್ಲಿ 2 ಲಕ್ಷ ರೂ.ಗೂ ಹೆಚ್ಚು ಕೈಸಾಲ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಲ, ಬಡ್ಡಿ ಸೇರಿ ಹೆಚ್ಚಿಗೆ ಆಗಿದ್ದರಿಂದ ಅವರ ಜಮೀನನ್ನು ಬೇರೆಯವರಿಗೆ ಕರಾರು ಮಾಡಿ ಸಾಲ ತೀರಿಸಿದ್ದಾರೆ. ಅಷ್ಟಾದರೂ ತಾವು ಮಾಡಿಕೊಂಡ ಸಾಲ ಇನ್ನೂ ಬಾಕಿ ಉಳಿದ ಪರಿಣಾಮ ಜಮೀನಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ರಾಯಬಾಗ ಪೊಲೀಸ್ ಠಾಣೆ (Rayabhaga Police Station)ಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ನೇಕಾರಾಗಿದ್ದ ರೈತ ಗಣಪತಿ ಸಂಗಮನವರ (45), ಗಣಪತಿ ಬುಚಡಿ (60) ಸಾಲ ತೀರಿಸಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಕ್ಡೌನ್ನಿಂದಾಗಿ ಇಬ್ಬರು ಸಾಲದ ಸುಳಿಯಲ್ಲಿ ಸಿಲುಕಿದ್ದರು. ಬ್ಯಾಂಕ್ ಹಾಗೂ ಕೈಸಾಲ ಮಾಡಿಕೊಂಡಿದ್ದರು. ವಿದ್ಯುತ್ ಮಗ್ಗ (Electric Loom) ಅಳವಡಿಸಿಕೊಂಡಿದ್ದ ಇವರು ಬಗೆಬಗೆಯ ಸೀರೆ ತಯಾರಿಸಿ ಮಾರುಕಟ್ಟೆಗೆ ಪೂರೈಸುತ್ತಿದ್ದರು. ಆದರೆ, ಕೋವಿಡ್ ಹೊಡೆತದಿಂದ ಜವಳಿ ಉದ್ಯಮ (Textile Industry)ನೆಲಕಚ್ಚಿತ್ತು. ಹೀಗಾಗಿ ಇಲ್ಲಿನ ನೇಕಾರರ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಸೀರೆಗಳು ಮಾರಾಟವಾಗದೇ ಉಳಿದಿತ್ತು. ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: RAIN ALERT: ಮುಂದಿನ 48 ಗಂಟೆ ಮುಂದುವರಿಯಲಿದೆ ಮಳೆ