ETV Bharat / state

ಸತೀಶ ಜಾರಕಿಹೊಳಿ ಸೇರಿ ಮೂವರು ಸಚಿವರಿಗೆ ಜೀವ ಬೆದರಿಕೆ ಪತ್ರ: ಒಟ್ಟು 61 ಜನರಿಗೆ ಬೆದರಿಕೆ

ಕಳೆದ ತಿಂಗಳಷ್ಟೇ ನಿಜಗುಣಾನಂದ ಸ್ವಾಮೀಜಿ ಸೇರಿ 15 ಜನರ ಹೆಸರು ಉಲ್ಲೇಖಿಸಿ ಜೀವ ಬೆದರಿಕೆ ಪತ್ರ ಬಂದಿತ್ತು.

Threatening letter to 3 ministers including Satish Jarakiholi
ಸತೀಶ ಜಾರಕಿಹೊಳಿ ಸೇರಿ ಮೂವರು ಸಚಿವರಿಗೆ ಜೀವ ಬೆದರಿಕೆ ಪತ್ರ
author img

By ETV Bharat Karnataka Team

Published : Sep 30, 2023, 12:20 PM IST

Updated : Sep 30, 2023, 7:35 PM IST

ಬೆಳಗಾವಿ: ಚೆನ್ನಮ್ಮ ಕಿತ್ತೂರು ತಾಲ್ಲೂಕಿನ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಸೇರಿ ರಾಜ್ಯದ ಮೂವರು ಸಚಿವರು, ಸಾಹಿತಿಗಳು ಮತ್ತು ಚಿತ್ರ ನಟರಿಗೆ ಜೀವ ಬೆದರಿಕೆ ಹಾಕಿರುವ ಅನಾಮಧೇಯ ಪತ್ರವೊಂದು ಬಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪತ್ರದಲ್ಲಿ ಹಲವು ಪ್ರಗತಿಪರರು, ವಿಚಾರವಾದಿಗಳಿಗೂ, ಸಾಹಿತಿಗಳು, ನಟರು, ಸಚಿವರ ಹೆಸರುಗಳನ್ನು ಉಲ್ಲೇಖಿಸಿ ಆರೋಪಿಯು ಜೀವ ಬೆದರಿಕೆ ಹಾಕಿದ್ದಾನೆ

ಸೆಪ್ಟೆಂಬರ್​ 20 ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ನಿಷ್ಕಲ ಮಂಟಪ ಆಶ್ರಮಕ್ಕೆ ಬೆದರಿಕೆ ಪತ್ರ ಬಂದಿದೆ. ಕಳೆದ ತಿಂಗಳಷ್ಟೇ ನಿಜಗುಣಾನಂದ ಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಈಗ ಮತ್ತೆ ನಿಷ್ಕಲ ಮಂಟಪಕ್ಕೆ ಜೀವ ಬೆದರಿಕೆ ಪತ್ರ ಬಂದಿದೆ.

ಸಚಿವ ಸತೀಶ ಜಾರಕಿಹೊಳಿ ಸೇರಿ ಒಟ್ಟು 61 ಪ್ರಗತಿಪರ ಸಾಹಿತಿಗಳು, ನಟರಿಗೆ ಅನಾಮಧೇಯ ವ್ಯಕ್ತಿ ಜೀವ ಬೆದರಿಕೆ ಹಾಕಲಾಗಿದೆ. ಸಾಹಿತಿಗಳಾದ ಎಸ್ ಜಿ ಸಿದ್ದರಾಮಯ್ಯ, ಕೆ ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಭಾಸ್ಕರ್ ಪ್ರಸಾದ್, ಪ್ರೊ. ಭಗವಾನ್, ಪ್ರೊ. ಮಹೇಶ್ ಚಂದ್ರ, ಬಿಟಿ ಲಲಿತಾನಾಯಕ್, ನಟ ಚೇತನ್, ನಟ ಪ್ರಕಾಶ್​ ರಾಜ್, ಸಚಿವರಾದ ಪ್ರಿಯಾಂಕ್ ಖರ್ಗೆ, ಸತೀಶ ಜಾರಕಿಹೊಳಿ, ದಿನೇಶ್​ ಗುಂಡೂರಾವ್, ದ್ವಾರಕಾನಾಥ, ದೇವನೂರು ಮಹದೇಪ್ಪ, ಬಿ. ಎಲ್. ವೇಣು ಅವರಿಗೆ ಅನಾಮಧೇಯ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾನೆ.

ಪತ್ರದಲ್ಲಿ, "ನಿಜಗುಣಾನಂದ ನಾನು ಬರೆದಿರುವ ಪತ್ರ ಪ್ರೇಮ ಪತ್ರ ಅಂತಾದರೂ ತಿಳಿ, ಅಥವಾ ಸಾವಿನ ಪತ್ರವಂತಾದರೂ ತಿಳಿ, ನಾನು ನಿನ್ನ ಜತೆ ತಮಾಷೆ‌ ಮಾಡುತ್ತಿಲ್ಲ, ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೇ ನಿನ್ನ ಕಣ್ಣೆದುರಿಗೆ ನಿನ್ನ ಸಾವು ಬರುತ್ತೆ" ಎಂದು ಉಲ್ಲೇಖಿಸಲಾಗಿದೆ.

"ಹಿಂದೂ ಧರ್ಮದ ದೇವತೆಗಳನ್ನು ನಿಂದಿಸುವ ನೀನು ನಿನ್ನ ಜೀವನದ‌ ಕೊನೆಯ ಘಟ್ಟದಲ್ಲಿ ನೀನು ನಿಂತಿದ್ದೀಯಾ, ನಿನ್ನ ಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ" ಎಂದು ಪತ್ರದಲ್ಲಿ ಬರೆದಿದ್ದು, ಹಲವು ವಿಚಾರವಾದಿಗಳು ಹಾಗೂ ಪ್ರಗತಿಪರರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

"ಎಸ್ ಜಿ ಸಿದ್ದರಾಮಯ್ಯ, ಕೆ ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಭಾಸ್ಕರ್ ಪ್ರಸಾದ್, ಪ್ರೊ. ಭಗವಾನ್, ಪ್ರೊ. ಮಹೇಶ್ ಚಂದ್ರ, ಬಿಟಿ ಲಲಿತಾ ನಾಯಕ್, ನಟ ಚೇತನ್, ನಟ ಪ್ರಕಾಶ್​ ರಾಜ್, ಪ್ರಿಯಾಂಕ್ ಖರ್ಗೆ, ಜಾರಕಿಹೊಳಿ, ದಿನೇಶ್ ಗುಂಡೂರಾವ್, ಧ್ವಾರಕಾನಾಥ, ದೇವನೂರು ಮಹದೇವ, ಬಿ ಎಲ್ ವೇಣು, ನೀವು ನಾನು ಕೇಳುವ ಪ್ರಶ್ನೆಗೆ ಉತ್ತರ ಕೊಡಿ" ಎಂದು ಸಚಿವರು, ಸ್ವಾಮೀಜಿಗಳು, ನಟರು, ಸಾಹಿತಿಗಳು, ಪ್ರಗತಿಪರರ ಹೆಸರುಗಳನ್ನು ಉಲ್ಲೇಖಿಸಿ ಜೀವ ಬೆದರಿಕೆ ಹಾಕಿದ್ದಾನೆ.

ಬೆದರಿಕೆ ಪ್ರಕರಣದ ಬಗ್ಗೆ ಬೆಳಗಾವಿ ಎಸ್​ಪಿ ಮಾಹಿತಿ

ಎಸ್​ಪಿ ಪ್ರತಿಕ್ರಿಯೆ: ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಎಸ್​ಪಿ ಭೀಮಾಶಂಕರ ಗುಳೇದ, ''ಚನ್ನಮ್ಮ ಕಿತ್ತೂರು ತಾಲೂಕಿನ ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಶಿವಾಜಿ ರಾವ್​ ಜಾಧವ್ ಎಂಬಾತನೆ ಬಂಧಿತ ಆರೋಪಿ. ಒಂದೂವರೆ ತಿಂಗಳ ಹಿಂದೆ ನಿಜಗುಣಾನಂದ ಸ್ವಾಮೀಜಿಗೆ ಬೆದರಿಕೆ ಪತ್ರ ಬಂದ ಕಾರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಜೊತೆಗೆ ಕಳೆದ ಒಂದು ವಾರದ ಹಿಂದೆ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ಈ ಬಗ್ಗೆಯೂ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೆವು. ಈ ಎಲ್ಲ ಬೆದರಿಕೆ ಪತ್ರಗಳನ್ನು ಬರೆದಿರುವುದು ಇದೇ ಆರೋಪಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ'' ಎಂದು ತಿಳಿಸಿದರು.

ಇದನ್ನೂ ಓದಿ : ಹೆಚ್​​ಡಿಕೆ, ಭಗವಾನ್, ನಿಜಗುಣಾನಂದ ಶ್ರೀ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೆದರಿಕೆ ಪತ್ರ!

Last Updated : Sep 30, 2023, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.