ಬೆಳಗಾವಿ: ರಾಷ್ಟ್ರಧ್ವಜ ಬಿಟ್ಟು ಬೇರೆ ಧ್ವಜವನ್ನು ಹಾರಿಸಬಾರದು ಎಂದು ಕೋರ್ಟ್ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಹೇಳಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರಿಗೆ ಧ್ವಜಸ್ತಂಭ ಅಳವಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ನಮ್ಮ ನಾಡಿನ ಕನ್ನಡ ಬಾವುಟವನ್ನು ಮಹಾನಗರ ಪಾಲಿಕೆ ಮುಂದೆ ಹಾರಿಸಲು ಪ್ರಯತ್ನಿಸಿದ್ದೇವೆ. ಆದ್ರೆ ಅಧಿಕಾರಿಗಳು ಇದನ್ನು ತಡೆಯುವ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರಧ್ವಜ ಬಿಟ್ಟು ಬೇರೆ ಧ್ವಜವನ್ನು ಹಾರಿಸಬಾರದು ಎಂದು ಕೋರ್ಟ್ ಎಲ್ಲಿಯೂ ಉಲ್ಲೇಖಿಸಿಲ್ಲ.
ಆದ್ರೆ ರಾಷ್ಟ್ರಧ್ವಜಕ್ಕೆ ಸಮನಾಗಿ ಯಾವುದೇ ಧ್ವಜಗಳನ್ನು ಹಾರಿಸಬಾರದು ಎಂದು ಉಲ್ಲೇಖವಿದೆ. ಹೀಗಾಗಿ ರಾಷ್ಟ್ರದ ವಿಚಾರ ಬಂದಾಗ ನಾವೆಲ್ಲರೂ ರಾಷ್ಟ್ರಧ್ವಜಕ್ಕೆ ಗೌರವ ನೀಡುತ್ತೇವೆ. ಇದರ ಜೊತೆಗೆ ನಾಡು ನುಡಿ ವಿಚಾರ ಬಂದಾಗಲೂ ನಾಡಧ್ವಜಕ್ಕೆ ಗೌರವ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ರೆ ರಾಷ್ಟ್ರಧ್ವಜಕ್ಕೆ ಚುತಿ ಬಾರದಂತೆ ಕನ್ನಡ ನಾಡಧ್ವಜವನ್ನು ಹಾರಿಸಲಿಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೈಕೋರ್ಟ್ ಅಡ್ವಕೇಟ್ ಜನರಲ್ ಲಿಖಿತ ಅಭಿಪ್ರಾಯದಲ್ಲಿ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಈ ಹಿಂದೆಯೂ ಇಲ್ಲಿನ ಹಳೇ ಮಹಾನಗರ ಪಾಲಿಕೆ ಕಟ್ಟಡದ ಮೇಲೆ ರಾಷ್ಟ್ರಧ್ವಜದ ಸಮನಾಂತರವಾಗಿ ಭಾಗವಧ್ವಜ ಇರಿಸಲಾಗಿತ್ತು. ಆಗ ಭಾಗವಧ್ವಜದಿಂದ ರಾಷ್ಟ್ರಧ್ವಜದ ಗೌರವಕ್ಕೆ ಚುತಿ ಬರುವಂತಿತ್ತು. ಹೀಗಾಗಿ ಅದನ್ನು ತೆರವುಗೊಳಿಸುವಂತೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ ಹೋರಾಟ ಮಾಡಿ ತೆರವುಗೊಳಿಸಲಾಗಿತ್ತು ಎಂದರು.