ETV Bharat / state

ಕೊಲೆ ಪ್ರಕರಣದಲ್ಲಿ ಇಡೀ ಕುಟುಂಬ ಅರೆಸ್ಟ್.. ಪೊಲೀಸರ ಕ್ರಮ ಖಂಡಿಸಿ ವಿಷಸೇವಿಸಿದ್ದ ವ್ಯಕ್ತಿ ಸಾವು - ಬೆಳಗಾವಿಯಲ್ಲಿ ವಿಷ ಸೇವಿಸಿದ್ದ ವ್ಯಕ್ತಿ ಸಾವು

ಪ್ರಕರಣ ಸಂಬಂಧ ಸಹೋದರನ ಜತೆಗೆ ತಂದೆ-ತಾಯಿ,‌ ಸಹೋದರಿಯನ್ನು ಬಂಧಿಸಿದ್ದ ಪೊಲೀಸರ ಕ್ರಮ ಖಂಡಿಸಿ ಸಂಜು ನಾಯ್ಕರ್ ನಿನ್ನೆ ವಿಷ ಸೇವಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು..

The whole family Arrest in Belgaum murder case
ಪೊಲೀಸರ ಕ್ರಮ ಖಂಡಿಸಿ ವಿಷಸೇವಿಸಿದ್ದ ವ್ಯಕ್ತಿ ಸಾವು
author img

By

Published : Jun 26, 2020, 6:59 PM IST

ಬೆಳಗಾವಿ : ಕೊಲೆ ಪ್ರಕರಣದಲ್ಲಿ ಇಡೀ ಕುಟುಂಬವನ್ನೇ ಬಂಧಿಸಿದ್ದ ಪೊಲೀಸರ ಕ್ರಮ ಖಂಡಿಸಿ ನಿನ್ನೆ ವಿಷ ಸೇವಿಸಿ ಪ್ರತಿಭಟನೆ ನಡೆಸುತ್ತಿದ್ದ ಆರೋಪಿ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಬೈಲಹೊಂಗಲ ತಾಲೂಕಿನ ಹೊಸಕುರಗುಂದ ಗ್ರಾಮದ ಸಂಜು ನಾಯ್ಕರ್ ಮೃತ ದುರ್ದೈವಿ. ಮೃತ ಸಂಜು ಅಣ್ಣ ಈರಪ್ಪ ನಾಯ್ಕರ್ ಪತ್ನಿಗೆ, ಅದೇ ಗ್ರಾಮದ ದ್ಯಾಮಪ್ಪ ವಣ್ಣೂರ ಎಂಬ ವ್ಯಕ್ತಿ ಚುಡಾಯಿಸುತ್ತಿದ್ದನಂತೆ. ಈ ವಿಚಾರವಾಗಿ ನಾಯ್ಕರ್ ಕುಟುಂಬ ದ್ಯಾಮಣ್ಣನಿಗೆ ಹಲವು ಸಲ ವಾರ್ನ್ ಮಾಡಿದ್ದರು. ಆದರೂ ಆತ ನಿತ್ಯ ತನ್ನ ಆಟ ಬಿಟ್ಟಿರಲಿಲ್ಲ. ಇದರಿಂದ ಕೋಪಗೊಂಡ ಈರಪ್ಪ ಎರಡು ದಿನಗಳ ಹಿಂದೆ ದ್ಯಾಮಣ್ಣನನ್ನು ಕೊಡ್ಲಿಯಿಂದ ಹೊಡೆದು ಹತ್ಯೆಗೈದಿದ್ದರು.

ಪೊಲೀಸರ ಕ್ರಮ ಖಂಡಿಸಿ ವಿಷಸೇವಿಸಿದ್ದ ವ್ಯಕ್ತಿ ಸಾವು

ಪ್ರಕರಣ ಸಂಬಂಧ ಬೈಲಹೊಂಗಲ ಪೊಲೀಸರು ಈರಪ್ಪನ ಜೊತೆಗೆ ತಂದೆ ಯಲ್ಲಪ್ಪ, ತಾಯಿ ತಂಗೆವ್ವ, ಸಹೋದರಿ ರೇಣುಕಾರನ್ನು ಬಂಧಿಸಿದ್ದಾರೆ. ಘಟನೆ ನಡೆದಾಗ ನನ್ನ ತಂದೆ-ತಾಯಿ ಜಮೀನಿಗೆ ಹೋಗಿದ್ದರು.‌ ಕೊಲೆ ಪ್ರಕರಣ ಸಂಬಂಧ ಸಹೋದರನ ಜತೆಗೆ ತಂದೆ-ತಾಯಿ,‌ ಸಹೋದರಿಯನ್ನು ಬಂಧಿಸಿದ್ದ ಪೊಲೀಸರ ಕ್ರಮ ಖಂಡಿಸಿ ಸಂಜು ನಾಯ್ಕರ್ ನಿನ್ನೆ ವಿಷ ಸೇವಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು.

ತಕ್ಷಣವೇ ‌ನಗರ ಪೊಲೀಸರು ಸಂಜುನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ‌ಫಲಿಸದೇ ಸಂಜು ನಾಯ್ಕರ್ ಇಂದು ಮೃತಪಟ್ಟಿದ್ದಾನೆ. ಜಿಲ್ಲಾಸ್ಪತ್ರೆ ಆವರದಣದಲ್ಲಿ ಸಂಜು ನಾಯ್ಕರ್ ಪತ್ನಿ ಭಾಗ್ಯಶ್ರೀ ಹಾಗೂ ಎರಡು ವರ್ಷದ ಪುತ್ರಿ ಭಾವನಾಳ ಆಕ್ರಂದಣ ಮುಗಿಲು ಮುಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.