ETV Bharat / state

ಚಿಕ್ಕೋಡಿ: ಆರ್‌ಟಿಇ ಸೀಟಿಗೆ ಅರ್ಜಿ ಸಲ್ಲಿಕೆ ಪ್ರಮಾಣ ಇಳಿಕೆ! - Free and Compulsory Education Act RTE

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿ‌ಇ) ಅಡಿಯಲ್ಲಿ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ವರ್ಷ ದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ
ಸಾರ್ವಜನಿಕ ಶಿಕ್ಷಣ ಇಲಾಖೆ
author img

By

Published : Aug 5, 2020, 5:25 PM IST

ಚಿಕ್ಕೋಡಿ: ಸರ್ಕಾರದ ಹೊಸ ಶಿಕ್ಷಣ ನೀತಿಯಿಂದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬೇಕೆಂಬ ಮಕ್ಕಳ ಕನಸು ನನಸಾಗುತ್ತಿಲ್ಲ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿ‌ಇ) ಅಡಿಯಲ್ಲಿ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ.

ಹೌದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಮೂಡಲಗಿ, ಗೋಕಾಕ್, ಅಥಣಿ, ಕಾಗವಾಡ ಹೀಗೆ ಎಂಟು ತಾಲೂಕುಗಳಲ್ಲಿ ಒಟ್ಟು 1,430 ಸೀಟುಗಳಿಗೆ 644 ಅರ್ಜಿ ಸಲ್ಲಿಕೆಯಾಗಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ
ಸಾರ್ವಜನಿಕ ಶಿಕ್ಷಣ ಇಲಾಖೆ

ಕಳೆದೆರಡು ವರ್ಷದಿಂದ ಸರ್ಕಾರ ಆರ್‌ಟಿಇ ಯೋಜನೆಯಲ್ಲಿ ಕೆಲವೊಂದು ಬದಲಾವಣೆ ತಂದಿದೆ‌. ಇಂತಿಷ್ಟೇ ವರ್ಷದ ಮಗು ಈ ದಿನಾಂಕದಿಂದ ಈ ದಿನಾಂಕದ ಒಳಗಡೆ ಹುಟ್ಟಿರಬೇಕು. ತಾವು ಇರುವ ಪ್ರದೇಶದಿಂದ ಒಂದು ಕಿ.ಮೀ ಅಂತರದಲ್ಲಿ ಸರ್ಕಾರಿ ಶಾಲೆ ಇದ್ದರೆ ಆ ಮಗು ಸರ್ಕಾರಿ ಶಾಲೆಗೆ ಹೋಗಬೇಕು. ಗ್ರಾಮೀಣ ಪ್ರದೇಶದಲ್ಲಿ ಇದ್ದ ಮಗು ತಾಲೂಕು ಪ್ರದೇಶ ಶಾಲೆಗಳಲ್ಲಿ ಆರ್‌ಟಿಇ ಮೂಲಕ ಕಲಿಯಲು ಅವಕಾಶವಿಲ್ಲ. ಹೀಗೆ ಹಲವಾರು ಬದಲಾವಣೆ ಮಾಡಿದ್ದರಿಂದ ಕೆಲ ಪಾಲಕರು ಆರ್‌ಟಿಇ ಸೀಟುಗಳಿಗೆ ಅರ್ಜಿ ಸಲ್ಲಿಕೆ ಮಾಡುತ್ತಿಲ್ಲ.

ಈ ಬಾರಿ ಕೊರೊನಾ ಹಿನ್ನೆಲೆ ಕೆಲ ಪಾಲಕರು ಶಾಲೆಗಳ ಕಡೆ ಮುಖ ಮಾಡುತ್ತಿಲ್ಲ. ಹೀಗಾಗಿ ಈ ಬಾರಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬೇಕೆಂಬ ಮಕ್ಕಳ ಕನಸು ನನಸಾಗುತ್ತಿಲ್ಲ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಆರ್‌ಟಿಇ ನಲ್ಲಿ ಹಂಚಿಕೆಯಾದ ಸೀಟುಗಳ ಬಗ್ಗೆ ಚಿಕ್ಕೋಡಿ ಡಿಡಿಪಿಐ ಗಜಾನನ ಮಣ್ಣಿಕೇರಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.

‌‌ಸೀಟುಗಳಿಗೆ ಸಲ್ಲಿಕೆಯಾದ ಅರ್ಜಿ ವಿವರ ಇಂತಿದೆ:

ಚಿಕ್ಕೋಡಿ 183 (ಒಟ್ಟು ಸೀಟುಗಳು) - 110 (ಸಲ್ಲಿಕೆಯಾದ ಅರ್ಜಿ)
ಗೋಕಾಕ 113 -138
ಹುಕ್ಕೇರಿ ‌‌‌ 177- ‌‌113
ನಿಪ್ಪಾಣಿ 58- 04
ಮೂಡಲಗಿ 214- 42
ಕಾಗವಾಡ 95 -46
ಅಥಣಿ 157 -106
ರಾಯಬಾಗ 433- ‌‌‌‌‌‌85

ಒಟ್ಟು 1430 ಸೀಟುಗಳಿಗೆ ‌‌‌‌‌ಕೇವಲ 644 ಅರ್ಜಿ ಸಲ್ಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.