ಬೆಳಗಾವಿ : ಕೆಲಸದ ವೇಳೆ ವಿದ್ಯುತ್ ತಗುಲಿ ಹೆಸ್ಕಾಂ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಆಲರವಾಡದಲ್ಲಿ ನಡೆದಿದೆ.
ತಾಲೂಕಿನ ಆಲರವಾಡದ ರಾಚಯ್ಯ ಕೇರಿಮಠ ಮೃತ ದುರ್ದೈವಿ. ಈತ ಆಲರವಾಡ ಆಶ್ರಯ ಕಾಲೋನಿಯ ಟ್ರಾನ್ಸ್ಫಾರ್ಮರ್ಸ್ ಸರಿಪಡಿಸುವ ವೇಳೆ ವಿದ್ಯುತ್ ತಗುಲಿ ಸಾವನ್ನಪ್ಪಿರುವುದಾಗಿ ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ರಾಚಯ್ಯನಿಗೆ ನಾಲ್ವರು ಸಹೋದರಿಯರು ಇದ್ದು, ತಂದೆ ತಾಯಿ ಸಾವನ್ನಪ್ಪಿದ್ದಾರೆ. ಇನ್ನು ಕುಟುಂಬದ ಜವಾಬ್ದಾರಿ ರಾಚಯ್ಯನ ಮೇಲಿದ್ದು, ಸದ್ಯ ರಾಚಯ್ಯನ ಸಾವಿನಿಂದ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ
ಈತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಹಾಗೂ ಸಕಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಸಂಬಂಧಿಕರು ಹಾಗೂ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.