ETV Bharat / state

ಹಂತ ಹಂತವಾಗಿ ಜೂ.30 ರೊಳಗೆ ಸಂಪೂರ್ಣ ಲಾಕ್​ಡೌನ್ ತೆಗೆದುಹಾಕಬೇಕು: ಸತೀಶ ಜಾರಕಿಹೊಳಿ - should be removed by June 30th

ಮೂರನೇ ಅಲೆ ಬಂದಾಗ ಎಲ್ಲವೂ ಸರಿ ಹೋಗಬೇಕು, ಈಗಿನಿಂದಲೇ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ. ಮುಂದೆ ಮತ್ತೆ ಸರ್ಕಾರ ಲಾಕ್​ಡೌನ್ ವಿಸ್ತರಣೆ ಮಾಡದೇ ಹಂತ ಹಂತವಾಗಿ ಕೆಲ ಮಾರ್ಗಸೂಚಿಗಳನ್ನು ಜಾರಿ ಮಾಡಡಬೇಕು. ಜೂನ್ 30ರೊಳಗಾಗಿ ಸಂಪೂರ್ಣ ಲಾಕ್​ಡೌನ್ ತೆರವು ಮಾಡಬೇಕು ಎಂದು ಸರ್ಕಾರಕ್ಕೆ ಹೇಳಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.

ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ
author img

By

Published : Jun 2, 2021, 11:07 PM IST

ಚಿಕ್ಕೋಡಿ : ಬರುವ 7 ರಂದು ಲಾಕ್​ಡೌನ್ ಮುಕ್ತಾಯವಾಗುತ್ತಿದ್ದು, ಹಂತ ಹಂತವಾಗಿ ಜೂನ್ 30 ರೊಳಗಾಗಿ ಸಂಪೂರ್ಣ ಲಾಕ್​ಡೌನ್ ತೆಗೆದುಹಾಕಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ನಿರ್ವಹಣೆ ಕುರಿತು ವೈದ್ಯರು ಹಾಗೂ ತಾಲೂಕಾಡಳಿತದ ಜೊತೆ ಸಭೆ ನಡೆಸಿ ಕೊರೊ‌ನಾ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ತಾಲೂಕಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು.

ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿದ್ದ ವೇಳೆ ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿತ್ತು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆ ಎಲ್ಲೆಡೆಯೂ ಸಮಸ್ಯೆ ಆಗಿತ್ತು. ಆದರೆ, ಈಗ ಪರಿಸ್ಥಿತಿ ಸದ್ಯ ಹತೋಟಿಗೆ ಬಂದಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಮೂರನೇ ಅಲೆ ಬಂದಾಗ ಎಲ್ಲವೂ ಸರಿ ಹೋಗಬೇಕು, ಈಗಿನಿಂದಲೇ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ. ಮುಂದೆ ಮತ್ತೆ ಸರ್ಕಾರ ಲಾಕ್​ಡೌನ್ ವಿಸ್ತರಣೆ ಮಾಡಬಾರದು. ಹಂತ ಹಂತವಾಗಿ ಕೆಲ ಮಾರ್ಗಸೂಚಿಗಳನ್ನು ಜಾರಿ ಮಾಡಿ, ಜೂನ್ 30 ರೊಳಗಾಗಿ ಸಂಪೂರ್ಣ ಲಾಕ್​ಡೌನ್ ತೆರುವು ಮಾಡಬೇಕು ಎಂದಿದ್ದಾರೆ.

ಕೊರೊನಾದಿಂದಾಗಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಬಿಲ್​ಗಳನ್ನು ಸರ್ಕಾರವೇ ಭರಿಸಬೇಕು ಎಂದು ಹೇಳಿದರು.

ಕೊರೊನಾ ನಿಯಮ ಗಾಳಿಗೆ ತೂರಿ ಶಾಸಕರ ಭೇಟಿಗೆ ಬಂದ ಕಾರ್ಯಕರ್ತರು:
ಇದೇ ವೇಳೆ ತಾಲೂಕು ಆಸ್ಪತ್ರೆಗೆ ಆಗಮಿಸಿದ್ದ ಸತೀಶ್ ಜಾರಕಿಹೋಳಿ ಭೇಟಿ ಮಾಡಲು ನೂರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಕಣ್ಣು ಮುಂದೆಯೇ ಸಾಮಾಜಿಕ ಅಂತರ ಮರೆತ ಕಾರ್ಯಕರ್ತರಿಗೆ ಬುದ್ಧಿ ಹೇಳದೆ ಸತೀಶ್​ ಜಾರಕಿಹೊಳಿ ಕೂಡ ಸುಮ್ಮನಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.