ETV Bharat / state

ಶೀಘ್ರದಲ್ಲೇ ತಳವಾರ ಸಮುದಾಯ ಎಸ್​ಟಿಗೆ ಸೇರ್ಪಡೆ: ಸಚಿವ ಕೋಟ - ತಳವಾರ ಸಮಾಜ ಎಸ್​ಟಿಗೆ ಸೇರ್ಪಡೆ

ಶೀಘ್ರದಲ್ಲೇ ತಳವಾರ ಸಮುದಾಯವನ್ನು ಎಸ್​ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ministerKota Shrinivas Poojary
ಸಚಿವ ಕೋಟ ಶ್ರೀನಿವಾಸ ಪೂಜಾರಿ
author img

By

Published : May 28, 2022, 9:04 AM IST

ಅಥಣಿ(ಬೆಳಗಾವಿ): ತಾಂತ್ರಿಕ ಅಡಚಣೆಗಳಿಂದ ಈವರೆಗೆ ತಳವಾರ ಸಮುದಾಯಕ್ಕೆ ಎಸ್​​ಟಿ ಪ್ರಮಾಣ ಪತ್ರ ನೀಡಲು ಸಾಧ್ಯವಾಗಿಲ್ಲ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗವು ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಈ ಸಮುದಾಯಕ್ಕೆ ಪ್ರಮಾಣಪತ್ರ ನೀಡುವ ಮೂಲಕ ತಳವಾರರಿಗೆ ನ್ಯಾಯ ಒದಗಿಸುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಳವಾರ ಸಮಾಜ ಬಾಂಧವರಿಗೆ ಸಿಹಿ ಸುದ್ದಿ ನೀಡಿದ್ರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ

ಶುಕ್ರವಾರದಂದು ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ತಳವಾರ ಸಮುದಾಯವನ್ನು ಎಸ್​ಟಿಗೆ ಸೇರ್ಪಡೆ ಕುರಿತು ಕೇಂದ್ರ ಸರ್ಕಾರದ ನಿರ್ದೇಶನವೂ ಇದೆ. ಆದರೆ ಆಡಳಿತಾತ್ಮಕ ಸಮಸ್ಯೆಗಳಿಂದ ಸ್ವಲ್ಪ ಹಿನ್ನೆಡೆಯಾಗಿದೆ. ಅಲ್ಲದೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಪರಿಷತ್ ಸದಸ್ಯರಾದ ರವಿಕುಮಾರ್ ಸೇರಿದಂತೆ ಎಲ್ಲ ನಾಯಕರ ಶ್ರಮದಿಂದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಳಲಿ ಮಸೀದಿಯ ಒಂದು ಹಿಡಿ ಮರಳನ್ನು ಸಹ ಬಿಟ್ಟು ಕೊಡುವುದಿಲ್ಲ.. ಅಬ್ದುಲ್‌ ಮಜೀದ್‌ ಸವಾಲು

ಪ್ರವರ್ಗ ಒಂದರಿಂದ ತೆಗೆದು ತಳವಾರ ಸಮುದಾಯವನ್ನು ಎಸ್​ಟಿಗೆ ಸೇರಿಸುವುದಕ್ಕೆ ಕಾಲಾವಕಾಶ ಬೇಕು. ಹೀಗಾಗಿ ಶೀಘ್ರದಲ್ಲೇ ತಳವಾರ ಸಮಾಜವನ್ನು ಎಸ್​ಟಿಗೆ ಸೇರ್ಪಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೇರೆ ಬೇರೆ ಸಮುದಾಯದ ತಮ್ಮ ಬೇಡಿಕೆಗಳ ಕುರಿತು ಮನವಿ ಮಾಡಿದ್ದಾರೆ. ಕಾಲಾನುಕ್ರಮದಲ್ಲಿ ಎಲ್ಲ ಮನವಿಗಳಿಗೆ ಸ್ಪಂದಿಸುವ ಕೆಲಸವಾಗುತ್ತದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.