ETV Bharat / state

ಮೋದಿ ಸಮಾವೇಶದಲ್ಲಿ ರಮೇಶ್​ ‌ಜಾರಕಿಹೊಳಿ ಹೆಸರು ಜಪಿಸಿದ ಸುರೇಶ ಅಂಗಡಿ - kannada news

ಚಿಕ್ಕೋಡಿಯಲ್ಲಿ ನಡೆದ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್​ ಅಂಗಡಿ ಅವರು ಕಾಂಗ್ರೆಸ್ ಮಾಜಿ ಸಚಿವ ರಮೇಶ್​ ರಕಿಹೊಳಿ ಹೆಸರನ್ನು ಜಪಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮೋದಿ ಸಭೆಯಲ್ಲಿ ರಮೇಶ ‌ಜಾರಕಿಹೊಳಿ ಹೆಸರು ಜಪಿಸಿದ ಸುರೇಶ ಅಂಗಡಿ
author img

By

Published : Apr 18, 2019, 11:22 PM IST

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್​ ಅಂಗಡಿ ಅವರು ಕಾಂಗ್ರೆಸ್ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೆಸರು ಜಪಿಸಿ ಅಚ್ಚರಿ ಮೂಡಿಸಿದರು.

ಚಿಕ್ಕೋಡಿ ‌ಪಟ್ಟಣದಲ್ಲಿ ನಡೆದ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶದಲ್ಲಿ ವೇದಿಕೆಗೆ ಮೋದಿ ಆಗಮಿಸುವುದಕ್ಕಿಂತ ಮುನ್ನವೇ ಸುರೇಶ್​ ಅಂಗಡಿ ಭಾಷಣ ಆರಂಭಿಸಿದ್ದರು. ಈ ವೇಳೆ, ವೇದಿಕೆ ಮೇಲಿದ್ದ ಮಾಜಿ ಸಂಸದ ರಮೇಶ್​ ಕತ್ತಿ ಅವರನ್ನು ನೆನಪಿಸಿಕೊಳ್ಳುವ ಭರದಲ್ಲಿ, ರಮೇಶ್​ ಜಾರಕಿಹೊಳಿ ಎಂದರು. ಅದಕ್ಕೆ ಪ್ರತಿಯಾಗಿ ರಮೇಶ್​ ಕತ್ತಿ ಕೂಡ ಎದ್ದು ನಿಂತು ಅಂಗಡಿ ಅವರಿಗೆ ನಮಸ್ಕರಿಸಿದರು.

ಮೋದಿ ಸಭೆಯಲ್ಲಿ ರಮೇಶ್​ ‌ಜಾರಕಿಹೊಳಿ ಹೆಸರು ಜಪಿಸಿದ ಸುರೇಶ ಅಂಗಡಿ
ಈ ವೇಳೆ ಕೆಲಹೊತ್ತು ನೆರೆದಿದ್ದ ಸಹಸ್ರಾರು ಜನರು ಹಾಗೂ ವೇದಿಕೆ ಮೇಲಿದ್ದ ನಾಯಕರು ಮುಗುಳ್ನಗೆ ಬೀರಿದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ ರಮೇಶ್​ ಜಾರಕಿಹೊಳಿ ಕಾಂಗ್ರೆಸ್​ನೊಂದಿಗೆ ‌ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಪಿ ಪರವೂ ಪರೋಕ್ಷವಾಗಿ ಲೋಕಸಭೆ ‌ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವೂ ರಮೇಶ್​ ಜಾರಕಿಹೊಳಿ ವಿರುದ್ಧ ಕೇಳಿ ಬಂದಿದೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.