ಬೆಳಗಾವಿ: ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಬಾಣಂತಿ ಕುಟುಂಬ ಸ್ವಗ್ರಾಮಕ್ಕೆ ತೆರಳಲು, ಬಸ್ ಇಲ್ಲದೇ ಪರದಾಡಿದ ಘಟನೆ ಜಿಲ್ಲೆಯಲ್ಲಿ ಕಂಡುಬಂತು.
ನಗರದ ಮಾರ್ಕೆಟ್ ಠಾಣೆ ಎದುರು ಕುಳಿತಿದ್ದ ಬಾಣಂತಿ ಗೋಕಾಕ್ ಮೂಲದ ಗೀತಾ ದಳವಾಯಿ. ಇವರು ಕಳೆದ ನಾಲ್ಕು ದಿನಗಳ ಹಿಂದೆ ಅನಾರೋಗ್ಯ ಸಮಸ್ಯೆ ಹಿನ್ನೆಲೆ ತನ್ನ ಮಗು ಹಾಗೂ ತಾಯಿಯೊಂದಿಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಆಗಮಿಸಿದ್ರು.
![ಬಸ್ ಇಲ್ಲದೇ ಪರದಾಡುತ್ತಿದ್ದ ಬಾಣಂತಿ](https://etvbharatimages.akamaized.net/etvbharat/prod-images/kn-bgm-01-05-bannanti-mahile-01-ka10029_05042020140145_0504f_1586075505_711.jpg)
ನಂತರ ನಾಲ್ಕುದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ಚಿಕಿತ್ಸೆ ಪಡೆದ ಗೀತಾ ಅವರನ್ನು ಬಿಮ್ಸ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿ, ಭಾನುವಾರ ಡಿಸ್ಚಾರ್ಜ್ ಮಾಡಿದ್ದರು. ಆದರೆ, ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಆಗಿದ್ದರ ಪರಿಣಾಮ ಬಸ್ ಸೇವೆ ಸ್ಥಗಿತವಾಗಿತ್ತು.
ಹಾಗಾಗಿ ಬಾಣಂತಿ ಸಹಾಯಕ್ಕೆ ನಗರದ ಸಮಾಜ ಸೇವಕ ಸುರೇಂದ್ರ ಅನಗೋಳಕರ್ ಅವರು ಆಗಮಿಸಿ, ತಮ್ಮ ಸ್ವಂತ ವಾಹನದಲ್ಲಿ ಕುಳಿರಿಸಿಕೊಂಡು ಗೋಕಾಕ್‌ಗೆ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆ ಮರೆದಿದ್ದಾರೆ.