ಅಥಣಿ: ಕ್ಷೇತ್ರದ ಜನರು ಜ್ಯೋತಿ ಬೆಳಗಿಸುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಬೆಳಕಿನ ಹೋರಾಟಕ್ಕೆ ಜನರು ಬೆಂಬಲಿಸಬೇಕು ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಮನವಿ ಮಾಡಿದರು.
![support to modi calls](https://etvbharatimages.akamaized.net/etvbharat/prod-images/6673075_1042_6673075_1586091968285.png)
ಲಾಕ್ಡೌನ್ಗೆ ಸಹಕರಿಸಿದ ಜನರು ಚಪ್ಪಾಳೆ ತಟ್ಟಿ ನಾಡಿನಾದ್ಯಂತ ಅಭೂತಪೂರ್ವ ಬೆಂಬಲ ನೀಡಿದ್ದರು. ಈಗ ಧನಾತ್ಮಕ ಶಕ್ತಿಗಾಗಿ ದೀಪ ಬೆಳಗುವ ಭರವಸೆ ಇದೆ ಎಂದರು.
ತಬ್ಲಿಘಿ ಜಮಾತ್ ಕುರಿತು ಮಾತನಾಡಿದ ಅವರು, ಕೆಲವರು ಮಾಡುವ ತಪ್ಪಿಗೆ ಎಲ್ಲರನ್ನೂ ದ್ವೇಷಿಸುವುದು ಅಥವಾ ಸಮುದಾಯವನ್ನು ಖಂಡಿಸುವುದು ಸರಿಯಲ್ಲ. ಉದ್ದೇಶ ಪೂರ್ವಕವಾಗಿ ತಪ್ಪು ಯಾರೇ ಮಾಡಿದರೂ ಅವರಿಗೆ ಶಿಕ್ಷೆ ಆಗಲಿದೆ. ಅಥಣಿ ಮತಕ್ಷೇತ್ರದ ಜನರು ಮನೆಯಲ್ಲಿ ಉಳಿಯುವ ಮೂಲಕ ಪ್ರಧಾನಿ ಮೋದಿ ಕರೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.