ETV Bharat / state

ಬೆಳಗಾವಿ ನಿವಾಸಿಗಳ ಮನೆ ಬಾಗಿಲಿಗೆ ಬರಲಿದೆ ದಿನಸಿ, ತರಕಾರಿ: ಡಿಸಿ ಮಾಹಿತಿ - ಬೆಳಗಾವಿ ಡಿ.ಸಿ ಬೊಮ್ಮನಹಳ್ಳಿ

ದೇಶವ್ಯಾಪಿ ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗದಂತೆ ದಿನ ಬಳಕೆಯ ಸರಕು ಸಾಮಾಗ್ರಿಯನ್ನು ಬೆಳಗಾವಿ ಜನರ ಮನೆಗಳಿಗೆ ತಲುಪಿಸಲು ಡಿಸಿ ಬೊಮ್ಮನಹಳ್ಳಿ ಸೂಚಿಸಿದ್ದಾರೆ.

Belguam
ಬೆಳಗಾವಿ ಡಿ.ಸಿ ಬೊಮ್ಮನಹಳ್ಳಿ
author img

By

Published : Mar 25, 2020, 9:55 PM IST

ಬೆಳಗಾವಿ: ರಾಷ್ಟ್ರದಾದ್ಯಂತ ಲಾಕ್​​ಡೌನ್ ಘೋಷಿಸಿರುವುದರಿಂದ ನಾಗರಿಕರಿಗೆ ದೈನಂದಿನ ಅಗತ್ಯ ಸಾಮಗ್ರಿಗಳಾದ ದಿನಸಿ, ತರಕಾರಿ ಮತ್ತಿತರ ವಸ್ತುಗಳನ್ನು ಮನೆ ಬಾಗಿಲಿಗೆ ಕಳುಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನಸಿ, ತರಕಾರಿ ವ್ಯಾಪಾರಸ್ಥರು ಹಾಗೂ ಹೋಟೆಲ್ ಮಾಲೀಕರ ಜತೆ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್-19 ವೈರಾಣು ಹರಡುವಿಕೆ ತಡೆಗಟ್ಟಲು ವಾಹನಗಳ ಸಂಚಾರ ಸೇರಿದಂತೆ ಅನೇಕ ನಿರ್ಬಂಧ ವಿಧಿಸಲಾಗಿರುವುದರಿಂದ ನಾಗರಿಕರಿಗೆ ದಿನ ಬಳಕೆಯ ವಸ್ತುಗಳ ಕೊರತೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ದಿನಸಿ ಅಂಗಡಿಗಳು ಯಥಾ ಪ್ರಕಾರ ತಮ್ಮ ವ್ಯಾಪಾರ-ವಹಿವಾಟು ನಡೆಸಬಹುದು. ಇದಲ್ಲದೇ ಜನರು ದೂರವಾಣಿ ಮೂಲಕ ತಮಗೆ ಅಗತ್ಯವಿರುವ ವಸ್ತುಗಳ ಪಟ್ಟಿ ನೀಡಿದರೆ ಆಯಾ ಪ್ರದೇಶದಲ್ಲಿರುವ ಸಂಬಂಧಿಸಿದ ಅಂಗಡಿಯವರು ಗ್ರಾಹಕರ ಮನೆ ಬಾಗಿಲಿಗೆ ದಿನಸಿ‌ ಸಾಮಗ್ರಿಗಳನ್ನು ತಲುಪಿಸಲಿದ್ದಾರೆ ಎಂದರು.

ತಳ್ಳುವ ಗಾಡಿ ಮೂಲಕ ತರಕಾರಿ ಪೂರೈಕೆ:

ತರಕಾರಿ ಮಾರಾಟ ಸ್ಥಳಗಳಲ್ಲಿ ಜನರು ಗುಂಪುಗೂಡುವುದನ್ನು ತಡೆಗಟ್ಟುವ ಉದ್ದೇಶದಿಂದ ಒಂದು ನಿಗದಿತ ಸ್ಥಳದಲ್ಲಿ ತರಕಾರಿ ಮಾರಾಟ ನಿರ್ಬಂಧಿಸಲಾಗಿದೆ. ತಳ್ಳು ಗಾಡಿಗಳು ಅಥವಾ ಇತರೆ ಸರಕು ಸಾಗಾಣಿಕೆ ವಾಹನಗಳ ಮೂಲಕ ಪ್ರತಿಯೊಂದು ಬಡಾವಣೆ, ನಗರ ಹಾಗೂ ಮೊಹಲ್ಲಾಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ. ಇದಕ್ಕೆ ಅನೇಕ ವ್ಯಾಪಾರಸ್ಥರು ಕೂಡ ಮುಂದಾಗಿದ್ದಾರೆ. ಅದೇ ರೀತಿ ರಿಲಯನ್ಸ್ ಫ್ರೆಷ್, ಮೋರ್ ಮತ್ತಿತರ ಡಿಪಾರ್ಟಮೆಂಟಲ್ ಸ್ಟೋರ್ಸ್​ಗಳಲ್ಲಿ ಕೇವಲ ದಿನಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರ‌ ಕಾಯ್ದುಕೊಳ್ಳುವ ಮೂಲಕ ಈ‌ ಮಳಿಗೆಗಳಲ್ಲೂ ದಿನಸಿ ಖರೀದಿಸಬಹುದು.

ಹೋಟೆಲ್​ಗಳಲ್ಲಿ ಪಾರ್ಸಲ್ ಸೇವೆ ನಿರಾತಂಕ:

ನಗರದ ಎಲ್ಲಾ ಹೋಟೆಲ್​ಗಳಲ್ಲೂ ಪಾರ್ಸಲ್ ಸೇವೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ವ್ಯವಹಾರಕ್ಕೆ ನಿರ್ಬಂಧ ವಿಧಿಸಿಲ್ಲ. ಆದರೆ ಸ್ಥಳದಲ್ಲಿಯೇ ಆಹಾರ ಸೇವನೆಗೆ ಅವಕಾಶವಿಲ್ಲ. ಗ್ರಾಹಕರು ಪಾರ್ಸಲ್ ತೆಗೆದುಕೊಂಡು ಹೋಗಬಹುದು. ನಾಳೆಯಿಂದ ಎಲ್ಲಾ ಹೋಟೆಲ್​ಗಳಲ್ಲಿ ಪಾರ್ಸಲ್ ಸೇವೆ ಒದಗಿಸಲು‌ ಹೋಟೆಲ್ ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.