ಬೆಳಗಾವಿ: ರೈತನ ಬಾಳಿಗೆ ಸಿಹಿ ನೀಡಬೇಕಿದ್ದ ಕಬ್ಬು, ಕೃಷ್ಣಾ ನದಿ ಪ್ರವಾಹದಿಂದ ಈಗ ಕಹಿಯಾಗಿ ಪರಿಣಮಿಸಿದ್ದು, ರೈತರು ಕಂಗಾಲಾಗಿದ್ದಾರೆ.
ಅಥಣಿ ಭಾಗದ ಸಾವಿರಾರು ಎಕರೆಯಷ್ಟು ಕಬ್ಬು ಪ್ರವಾದಿಂದ ನೆಲಸಮವಾಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತರ ಪರಿಸ್ಥಿತಿ. ಕೃಷ್ಣೆಯ ಒಡಲಲ್ಲಿ ಅದರಲ್ಲೂ ಕಪ್ಪು ಮಣ್ಣಿನಿಂದ ಕೂಡಿದ ಫಲವತ್ತಾದ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದು ರೈತರು ತಮ್ಮ ಜೀವನ ಬಂಡಿ ಸಾಗಿಸುತ್ತಿದ್ದರು. ಬೆಳೆದ ಬೆಳೆಯಿಂದ ವರ್ಷಕ್ಕೆ ಆದಾಯ ಗಳಿಸುತ್ತಿದ್ದ ರೈತರು ಈಗ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ತಮ್ಮ ಮುಂದಿನ ಜೀವನಕ್ಕೆ ಏನಾದರೂ ಪರಿಹಾರ ನೀಡಬೇಕು ಎಂದು ಇಲ್ಲಿನ ರೈತರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.