ETV Bharat / state

ಕೆಲವು ಕಾಂಗ್ರೆಸ್ ನಾಯಕರಿಂದ ಸಿಡಿ ಬ್ಲಾಕ್‌ಮೇಲ್ ರಾಜಕಾರಣ: ರಮೇಶ್ ಜಾರಕಿಹೊಳಿ

author img

By

Published : Mar 13, 2023, 12:04 PM IST

Updated : Mar 13, 2023, 1:05 PM IST

ಸಿಡಿ ಇಟ್ಟುಕೊಂಡು ಕೆಲವು ಕೈ ನಾಯಕರು ಬ್ಲಾಕ್​ ಮೇಲ್​ ಮಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.

MLA Ramesh Jarakiholi
ಶಾಸಕ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಆರೋಪ

ಬೆಳಗಾವಿ : ಕಾಂಗ್ರೆಸ್ ಪಕ್ಷದ ಕಥೆ ಸಂಪೂರ್ಣವಾಗಿ ಮುಗಿದಿದೆ. ಅಲ್ಲಿ ಕೆಲವರು ಬ್ಲಾಕ್‌ಮೇಲ್ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎಂದು ಮತ್ತೊಮ್ಮೆ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹರಿಹಾಯ್ದರು. ಗೋಕಾಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ರಮೇಶ್​ ಜಾರಕಿಹೊಳಿ, ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೇರಲು ನಾನು ಬಿಡುವುದಿಲ್ಲ ಎಂದು ಶಪಥ ಮಾಡಿದ್ದೇನೆ ಎಂದು ಹೇಳಿದರು.

ಎಷ್ಟೇ ತೊಂದರೆ ಆದರೂ ಸರಿ, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ. ಯಾವ ರೀತಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಬಹಿರಂಗವಾಗಿ ಹೇಳಲಾಗದು. ಆದರೆ 2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬರೋದು ಶತಸಿದ್ದ. 140 ಸ್ಥಾನಗಳು ಬರುವುದು ಪಕ್ಕಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೆ. ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ. ಆಗ ವಿಶ್ವದ ದೊಡ್ಡಣ್ಣ ಭಾರತವಾಗುತ್ತದೆ. ಮೋದಿ ಪ್ರಧಾನಿಯಾದ ನಂತರದಲ್ಲಿ ಹೊರದೇಶಗಳಲ್ಲಿ ಭಾರತೀಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ ಎಂದರು.

ಬೇರೆಯವರ ವೈಯಕ್ತಿಕ ವಿಚಾರವನ್ನು ಸಿಡಿ ಮಾಡುವುದೇ ಡಿ.ಕೆ.ಶಿವಕುಮಾರ್ ಅವರು ತಮ್ಮ​ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ನನ್ನ ಸಿಡಿ ಪ್ರಕರಣದಲ್ಲಿ ಮಹಾ ನಾಯಕ ನನ್ನ ಮಗನ ಮುಂದೆ ಸತ್ಯ ಬಾಯಿ ಬಿಟ್ಟಿದ್ದಾನೆ. ನನ್ನ ಉದ್ಯೋಗವೇ ಅದು, ನಾನೇನು ಮಾಡಲಿ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಕೆಲವು ನಾಯಕರು ಬ್ಲಾಕ್‌ಮೇಲ್ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದು ಇದರಿಂದ ತಿಳಿಯುತ್ತದೆ. ನಾನು ಸುಳ್ಳು ಹೇಳಿದ್ರೆ ಆ ಲಕ್ಷ್ಮಿ ತಾಯಿ ಮೇಲೆ ಆಣೆ ಮಾಡುತ್ತೇನೆ ಎಂದು ಹೇಳಿದರು.

ನನ್ನ ಹತ್ತಿರ ಕಾಂಗ್ರೆಸ್​ನ ಕೆಲ ಶಾಸಕರು ಬಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧ ಮಾತನಾಡಿದರೆ ಸಿಡಿ ತೋರಿಸಿ ಹೆದರಿಸುತ್ತಿದ್ದಾರಂತೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ನನ್ನ ಸಿಡಿ ಮಾಡಿದರು. ನಮ್ಮ ಧರ್ಮಪತ್ನಿ, ನನ್ನ ಸಹೋದರರು ನನ್ನ ಮಕ್ಕಳು ನನಗೆ ನೈತಿಕ ಬೆಂಬಲ ನೀಡಿದರು. ಆದರೆ ಬೇರೆಯವರ ಕಥೆ ಏನು? ಎಂದು ಕೇಳಿದರು.

ಕಾಂಗ್ರೆಸ್ ನಾಯಕರು ಮಹಾ ನಾಯಕನ ಮುಂದೆ ಕೈಕಟ್ಟಿ ಕೂರುತ್ತಾರೆ. ಇದಕ್ಕೆ ಕಾರಣ ಸಿಡಿ. ನಾನು ಇದಕ್ಕೆ ಬಗ್ಗಲಿಲ್ಲ. ಅದಕ್ಕೆ ಬಹಿರಂಗಪಡಿಸಿದ್ರು ಎಂದರು. ಸಿದ್ದರಾಮಯ್ಯ, ಪರಮೇಶ್ವರ್ ಒಳ್ಳೆಯವರು ಆದರೆ ಮಹಾ ನಾಯಕ ಸಿಡಿ ತೋರಿಸಿ ಅವರನ್ನೂ ಹೆದರಿಸುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಮಹೇಶ್​ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ರಮೇಶ್​ ಜಾರಕಿಹೊಳಿ

Last Updated : Mar 13, 2023, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.