ETV Bharat / state

2022ನೇ ವರ್ಷದ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಆಯ್ಕೆ! - Best MLA Award 2022

ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ 2022ನೇ ವರ್ಷದ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.

Senior Congress leader RV Deshpande
Senior Congress leader RV Deshpande
author img

By

Published : Dec 28, 2022, 4:24 PM IST

ಬೆಳಗಾವಿ : 2022ನೇ ವರ್ಷದ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಅವರು ಆಯ್ಕೆಯಾಗಿದ್ದಾರೆ. ವಿಧಾನಸಭೆ ಕಲಾಪ ಇಂದು ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆರ್ ವಿ ದೇಶಪಾಂಡೆ ಅವರು ಆಯ್ಕೆಯಾಗಿರುವುದನ್ನು ಘೋಷಣೆ ಮಾಡಿದರು. ಕಳೆದ ವರ್ಷದಿಂದ ಆರಂಭವಾಗಿರುವ ಈ ಪ್ರಶಸ್ತಿ ಪಡೆದಿರುವ ಎರಡನೇ ಶಾಸಕರು ಇವರಾಗಿದ್ದು, ಮೊದಲ ಪ್ರಶಸ್ತಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಪಡೆದುಕೊಂಡಿದ್ದರು.

ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಸದನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.

1947, ಮಾರ್ಚ್ 16 ರಂದು ಜನಿಸಿದ 75 ವರ್ಷದ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಅವರು 1983 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದರು. ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವರು ಜನತಾ ಪರಿವಾರದೊಂದಿಗೆ ವಿಧಾನಸಭೆ ಪ್ರವೇಶಿಸಿದರು. 8 ಬಾರಿ ಶಾಸಕರಾಗಿ ಕೆಲಸ ಮಾಡಿದ್ದು, ಒಂದು ಬಾರಿ ಅವರು ಚುನಾವಣೆಯಲ್ಲಿ ಸೋತಿದ್ದರು.

ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರು, ಎಸ್ ಎಂ ಕೃಷ್ಣ ಹಾಗೂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ದೀರ್ಘಾವಧಿ ಕೈಗಾರಿಕಾ ಸಚಿವರಾಗಿದ್ದರು. ಪ್ರತಿಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ, ಸ್ಪೀಕರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ಮಾತನಾಡಿ ದೇಶಪಾಂಡೆ ಅವರಿಗೆ ಅಭಿನಂದಿಸಿದರು.

ದೇಶಪಾಂಡೆ ವಯಸ್ಸಿನ ಬಗ್ಗೆ ತನಿಖೆ ಆಗಲಿ : ಈ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ದೇಶಪಾಂಡೆ ಬರ್ತ್ ಸರ್ಟಿಫಿಕೇಟ್ ಬಗ್ಗೆಯೇ ಅನುಮಾನ ಇದೆ. ರಾಹುಲ್ ಗಾಂಧಿ ಅವರು ಸಹ ದೇಶಪಾಂಡೆ ಅವರಿಗೆ ನಿಜಕ್ಕೂ 75 ವರ್ಷ ಆಗಿದೆಯಾ? ಎಂದು ಕೇಳಿದ್ದರು ಎಂದು ಕೃಷ್ಣಭೈರೇಗೌಡ ಹೇಳಿದರು. ದೇಶಪಾಂಡೆ ವಯಸ್ಸಿನ ಬಗ್ಗೆ ತನಿಖೆ ಆಗಲಿ. ಬೇಕಿದ್ದರೆ ಸದನ ಸಮಿತಿ ರಚನೆ ಮಾಡಿ ಎಂದು ಹಾಸ್ಯವಾಗಿ ಕಾಲೆಳೆದರು.

ನಮ್ಮಪ್ಪ ಹೊಲ ಉಳುವಾಗ ದೇಶಪಾಂಡೆ ತಂದೆ ಲಾಯರ್ ಆಗಿದ್ದರು ಎಂದು ಹೇಳುತ್ತಿದ್ದರು ಎಂದು ಸಿದ್ದರಾಮಯ್ಯ ಹೇಳಿದರು. ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೀವು (ಸಿದ್ದರಾಮಯ್ಯ) ಬಹಳ ಫಾಸ್ಟ್, ದೇಶಪಾಂಡೆ ಅವರನ್ನು ಓವರ್ ಟೇಕ್ ಮಾಡಿ ಮುಖ್ಯಮಂತ್ರಿಯಾಗಿ ಬಿಟ್ಟಿರಿ ಎಂದರು.

ಈಗಾಗಲೇ ಚುನಾವಣೆಯಿಂದ ನಿವೃತ್ತನಾಗುವ ಬಗ್ಗೆ ಹಲವು ಬಾರಿ ದೇಶಪಾಂಡೆ ಹೇಳಿದ್ದರು ಎಂದರು ಸಿದ್ದರಾಮಯ್ಯ. ಸಿದ್ದರಾಮಯ್ಯ ಹೇಳಿದ್ದು ನಿಜ ಎಂದು ದೇಶಪಾಂಡೆ ತಲೆದೂಗಿದರು. ನಾನು ಇನ್ನೊಂದು ಚುನಾವಣೆಗೆ ಸ್ಪರ್ಧಿಸಿ, ನಿವೃತ್ತಿ ಆಗಬೇಕು ಅಂತಿದ್ದೀನಿ. ನನ್ನ ಜೊತೆ ದೇಶಪಾಂಡೆ ಇರಬೇಕು. ಇನ್ನೊಂದು ಚುನಾವಣೆಗೆ ಸ್ಪರ್ಧೆ ಮಾಡಿ ನೀನು (ದೇಶಪಾಂಡೆ) ನಿವೃತ್ತನಾಗಿಬಿಡು ಎಂದು ಸಿದ್ದರಾಮಯ್ಯ ಕಿಚಾಯಿಸಿದರು.

ಇದನ್ನೂ ಓದಿ: ಪ್ರಧಾನಿ ಕರೆ ಮಾಡಿದ್ದರು, ನಾವು ಚೆನ್ನಾಗಿದ್ದೇವೆ.. ಪ್ರಹ್ಲಾದ್ ದಾಮೋದರ್ ದಾಸ್ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.