ETV Bharat / state

ಬೆಳಗಾವಿಯಲ್ಲಿ ಮತ್ತೆ ವರುಣಾರ್ಭಟ... ಹಲವು ಮನೆಗಳು ಜಲಾವೃತ

ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಅಲ್ಲದೆ ಹಲವು ಗ್ರಾಮಗಳು ಜಲಾವೃತಗೊಂಡಿವೆ.

ಬೆಳಗಾವಿಯಲ್ಲಿ ವರುಣನ ಅಬ್ಬರ
author img

By

Published : Oct 21, 2019, 10:48 AM IST

Updated : Oct 21, 2019, 10:55 AM IST

ಬೆಳಗಾವಿ/ಅಥಣಿ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬಹುತೇಕ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಮಲಪ್ರಭಾ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆ ರಾಮದುರ್ಗ ತಾಲೂಕಿನ ಅನೇಕ ಹಳ್ಳಿಗಳು ಜಲಾವೃತವಾಗಿವೆ.

ಭಾರೀ ಮಳೆಯಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ಮಲಪ್ರಭಾ ಜಲಾಶಯದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರ ಬಿಡಲಾಗುತ್ತಿದೆ. ಹೀಗಾಗಿ ರಾಮದುರ್ಗ ತಾಲೂಕಿನ ಹಲವು ಗ್ರಾಮಗಳಿಗೆ ಮೂರನೇ ಬಾರಿಗೆ ಪ್ರವಾಹ ಭೀತಿ ಎದುರಾಗಿದೆ. ನವಿಲುತೀರ್ಥ ಡ್ಯಾಂನಿಂದ 22 ಸಾವಿರ ಕ್ಯೂಸೆಕ್ ನೀರನ್ನು ಮಲಪ್ರಭಾ ನದಿಗೆ ಹರಿಬಿಟ್ಟ ಹಿನ್ನೆಲೆ ರಾಮದುರ್ಗ ಪಟ್ಟಣ ಮತ್ತು ಹಲವು ಗ್ರಾಮಗಳು ಜಲಾವೃತಗೊಂಡಿವೆ. ರಾಮದುರ್ಗದ ಪಟ್ಟಣದ ಹೊರ ವಲಯದ ಪ್ರೇರಣಾ ಶಾಲೆಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ. ಸುರೇಬಾನ್ ಗ್ರಾಮದ ಪೊಲೀಸ್ ಠಾಣೆ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ತಾಲೂಕಿನ ಸುರೇಬಾನ್, ಹಂಪಿಹೊಳಿ, ಸುನ್ನಾಳ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ.

ಬೆಳಗಾವಿಯಲ್ಲಿ ವರುಣನ ಅಬ್ಬರ

ಅಥಣಿ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಪರಿಣಾಮವಾಗಿ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಎಲ್ಲಮ್ಮ ದೇವಾಲಯ ಮುಂಭಾಗದಲ್ಲೇ ಹರಿಯುವ ಹಿರೇಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಎಲ್ಲಮ್ಮವಾಡಿ ದೇವಸ್ಥಾನ ಜಲಾವೃತಗೊಂಡಿದೆ.

Intro:ಅಥಣಿ ಭಾರಿ ಮಳೆಗೆ ಯಲ್ಲಮ್ಮವಾಡಿ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿದೆBody:ಅಥಣಿ exclusive

ಅಥಣಿ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಪರಿಣಾಮವಾಗಿ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿದೆ

ಹಿರೇಹಳ್ಳ ಎಲ್ಲಮ್ಮ ದೇವಿ ಮುಂಭಾಗದಲ್ಲೇ ಹರಿಯುವುದರಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರು ಹಿರೇಹಳ್ಳ

ಬಾಡಿಗೆ ಅಟ್ಯಾಳ ಕೋಕಟನೂರ , ಯಂಕಚಿ ಬಡಚಿ, ಹಾಗೂ ಪಕ್ಕದ ಮಹಾರಾಷ್ಟ್ರದಿಂದ
, ಸುತ್ತಮುತ್ತ ಬಿದ್ದ ಮಳೆನೀರು ಹಿರೇಹಳ್ಳ ಮುಖಾಂತರವಾಗಿ ಹರಿಯುತ್ತದೆ

ಅಟ್ಯಾಳ ಮತ್ತು ಯಲ್ಲಮ್ಮವಾಡಿ ಕೆರೆಗಳ ತುಂಬಿದ ಪರಿಣಾಮವಾಗಿ ಅಪಾಯ ಮಟ್ಟ ಮೀರಿ ಹರಿಯುತ್ತಿರು ನೀರು

ಸದ್ಯ ಎಲ್ಲಮವಾಡಿ ದೇವಸ್ಥಾನ ಜಲಾವೃತಗೊಂಡಿದೆ ಯಾವುದೇ ಪೂಜೆ ವೈಖರಿಗಳು ಸದ್ಯಕ್ಕೆ ಸಾಧ್ಯವಿಲ್ಲವೆಂದು ಹಾಗೂ ದೇವಸ್ಥಾನ ಹಿಂದಿನ ಬಾಜು ಮೂರ್ತಿಗೆ ಪೂಜಾ ವಿಧಾನಗಳನ್ನು ಸಲ್ಲಿಸಲಾಗುವುದು ಎಂದು ರಾಹುಲ್ ಪೂಜಾರಿ ಈಟೀವಿ ಭಾರತಿ ಪ್ರತಿಕ್ರಿಯೆ ನೀಡಿದ್ದಾರೆ

ಸದ್ಯ ಮಹಾರಾಷ್ಟ್ರ ಮತ್ತು ಕರ್ನಾಟಕ ಸಾವಿರಾರು ಭಕ್ತ ಗಣಕ್ಕೆ ದೇವಿಯ ದರ್ಶನ ಮಾಡುವುದು ಅಸಾಧ್ಯವಾಗಿದೆ..

Conclusion:ಶಿವರಾಜ್ ನೇಸರಿಗೆ ,ಅಥಣಿ
Last Updated : Oct 21, 2019, 10:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.