ETV Bharat / state

ಚುನಾವಣೆ ಬರುತ್ತಿದ್ದಂತೆ ಮೋದಿ 2 ಬಾಂಬ್ ಇಟ್ಟುಕೊಳ್ತಾರೆ, ಎಲ್ಲಿ ಹಾಕ್ತಾರೋ ಗೊತ್ತಿಲ್ಲ: ಜಾರಕಿಹೊಳಿ‌ - belagavi news

ಬಿಜೆಪಿ ಗೆಲ್ಲಲು ಸಾಕಷ್ಟು ತಂತ್ರಗಳನ್ನು ಮಾಡುತ್ತದೆ- ನಮ್ಮ ಕಾರ್ಯಕರ್ತರು ಸಹ ಗಟ್ಟಿಯಾಗಿರಬೇಕು- ಎಂಥಹ ಶಕ್ತಿ ಬಂದರೂ ಅದನ್ನು ಕಾರ್ಯಕರ್ತರು ಎದುರಿಸಬೇಕು- ಸತೀಶ್ ಜಾರಕಿಹೊಳಿ ಸಲಹೆ

satish jarakiholi criticize on PM Modi
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
author img

By

Published : Jul 17, 2022, 8:09 PM IST

Updated : Jul 17, 2022, 9:04 PM IST

ಚಿಕ್ಕೋಡಿ(ಬೆಳಗಾವಿ): ಚುನಾವಣೆ ಬಂದಾಗ ಪ್ರಧಾನಿ ಮೋದಿ ಅವರು ಎರಡು ಬಾಂಬ್ ಇಟ್ಟುಕೊಂಡಿರುತ್ತಾರೆ. ಆ ಬಾಂಬ್​ಗಳನ್ನು ಎಲ್ಲಿ ಹಾರಿಸುತ್ತಾರೆ ಗೊತ್ತಿಲ್ಲ. ಎಸೆದ ಬಳಿಕ ಪಾಕಿಸ್ತಾನದ ಹೆಸರು ಹೇಳಿ ಬಿಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲ್ಲಲು ಸಾಕಷ್ಟು ತಂತ್ರಗಳನ್ನು ಮಾಡುತ್ತದೆ. ಹೀಗಾಗಿ ನಮ್ಮ ಕಾರ್ಯಕರ್ತರು ಗಟ್ಟಿಯಾಗಿ ಇರಬೇಕು. ಎಂಥಹ ಶಕ್ತಿ ಎದುರು ಬಂದರೂ ಅದನ್ನು ಕಾರ್ಯಕರ್ತರು ಎದುರಿಸಬೇಕೆಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದ್ರೆ ಈ ಭಾಗದ ರಕ್ಷಣೆಯ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ಹೆಚ್ಚೆಚ್ಚು ಶಿಕ್ಷಣ ಸಂಸ್ಥೆಗಳನ್ನು ತರುತ್ತೇವೆ. ರಸ್ತೆ, ಆಸ್ಪತ್ರೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಮಾಡುತ್ತದೆ. ರಾಜಕೀಯದಲ್ಲಿ ಹಗ್ಗಜಗ್ಗಾಟ ಇದ್ದೇ ಇರುತ್ತದೆ. ಇದನ್ನ ಬದಿಗೊತ್ತಿ ಪಕ್ಷ ಸಂಘಟನೆಗೆ ಒತ್ತು ಕೊಡಬೇಕು. ಆಗ ಜನರ ಸೇವೆ ಮಾಡಲು ಸಾಧ್ಯವಾಗಲಿದೆ ಎಂದರು.

ಇದನ್ನೂ ಓದಿ: ಕೇಂದ್ರ ಸರ್ಕಾರ ರಾಜಕೀಯವಾಗಿ ಕಾಂಗ್ರೆಸ್​ಗೆ ಕಿರುಕುಳ ನೀಡುತ್ತಿದೆ: ಸಿದ್ದರಾಮಯ್ಯ

Last Updated : Jul 17, 2022, 9:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.