ಬೆಳಗಾವಿ: ಮಹೇಂದ್ರ ಬುಲೆರೋ ಪಿಕಪ್ ಹಾಗೂ ಕಾರಿನ ಮಧ್ಯೆ ಭೀಕರ ರಸ್ತೆ ಅಪಘಾತದ ಸಂಭವಿಸಿದ್ದು, ಯುವಕ, ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
![ಪ್ರಶಾಂತ ಕಲ್ಲಪ್ಪ ಕೋಲಾರಗಿ](https://etvbharatimages.akamaized.net/etvbharat/prod-images/14477538_842_14477538_1644940720231.png)
ಹುಕ್ಕೇರಿ ತಾಲೂಕಿನ ಕಮತ್ತನೂರು ಗ್ರಾಮದ ಪ್ರಶಾಂತ ಕಲ್ಲಪ್ಪ ಕೋಲಾರಗಿ(24), ಅಥಣಿಯ ಮೂಲದ ಶ್ರದ್ಧಾ ತೆಲಸಂಗ(20) ಸಾವನ್ನಪಿದ್ದು, ವಾಹನ ಚಾಲಕ ಮೋಹನ್ ಚೌಗಲಾ (20) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇಂದು ಮಧ್ಯಾಹ್ನ ನಿಪ್ಪಾಣಿಯಿಂದ ಬೆಳಗಾವಿಗೆ ಹೋಗುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸಂಕೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.