ETV Bharat / state

ಕ್ಷುಲ್ಲಕ ಕಾರಣಕ್ಕೆ ಯುವಕರ ಗಲಾಟೆ: ಮನೆಗೆ ನುಗ್ಗಿ ದಾಂಧಲೆ ನಡೆಸಿದ ಜನರು - belagavi police

ಪೆಟ್ರೋಲ್ ಹಾಕಿಸುವ ವಿಚಾರದಲ್ಲಿ ಬಂಕ್​​ನಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಪೆಟ್ರೋಲ್​ ಬಂಕ್​ನಲ್ಲಿ ನಡೆಯುತ್ತಿದ್ದ ಗಲಾಟೆ ತಪ್ಪಿಸಲು ಹೋದ ಯುವಕರ ನಡುವೆಯೇ ಗಲಾಟೆ ನಡೆದಿದೆ.

riots-between-two-group-of-youths-in-belagavi
ಕ್ಷುಲ್ಲಕ ಕಾರಣಕ್ಕೆ ಯುವಕರ ಗಲಾಟೆ
author img

By

Published : Apr 1, 2021, 11:16 PM IST

ಬೆಳಗಾವಿ: ಬೈಕ್​ಗೆ ಪೆಟ್ರೋಲ್ ಹಾಕಿಸುವ ವಿಚಾರದಲ್ಲಿ ಬಂಕ್​​ನಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಪೆಟ್ರೋಲ್​ ಬಂಕ್​ನಲ್ಲಿ ನಡೆಯುತ್ತಿದ್ದ ಗಲಾಟೆ ತಪ್ಪಿಸಲು ಹೋದ ಯುವಕರ ನಡುವೆಯೇ ಗಲಾಟೆ ನಡೆದಿದ್ದು, ಹಲವರು ಆಸ್ಪತ್ರೆ ಪಾಲಾಗಿದ್ದಾರೆ.

ನಗರದ ಹೊರವಲಯದ ಪೆಟ್ರೋಲ್​ ಬಂಕ್​ನಲ್ಲಿ ನಡೆಯುತ್ತಿದ್ದ ಗಲಾಟೆ ತಪ್ಪಿಸಲು ಹೋದಾಗ ಯುವಕರ ಗುಂಪು ನಿಖಿಲ್ ಹಾಗೂ ವರುಣ್ ಎಂಬುವವರಿಗೆ ಥಳಿಸಿದ್ದಾರೆ.

ಇದಾದ ಬಳಿಕ ನಿಖಿಲ್ ಹಾಗೂ ವರುಣ್ ಮನೆಗೆ ಮರಳಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಇನ್ನೊಂದು ಗುಂಪು ಮನೆಯ ಬಳಿಯೇ ಬಂದು ದಾಂಧಲೆ ನಡೆಸಿದೆ.

ಕ್ಷುಲ್ಲಕ ಕಾರಣಕ್ಕೆ ಯುವಕರ ಗಲಾಟೆ

ರಾತ್ರಿ 8 ಗಂಟೆ ಸುಮಾರಿಗೆ ನೂರಕ್ಕೂ ಅಧಿಕ ಜನರು ನಿಖಿಲ್ ಮನೆ ಮೇಲೆ ದಾಳಿ ನಡೆಸಿ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಫರ್ನಿಚರ್ ಸೇರಿದಂತೆ ಇತರ ಸಾಮಗ್ರಿಗಳನ್ನು ಒಡೆದು ಹಾಕಿ, ಮನೆಯಲ್ಲಿದ್ದ ನಿಖಿಲ್ ತಾಯಿಯ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಏಕಾಏಕಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರಿಂದ ಇಡೀ ಕಾಲೋನಿಯ ಜನರು ಬೆಚ್ಚಿಬಿದ್ದಿದ್ದಾರೆ.

ಗಾಯಗೊಂಡಿದ್ದ ಮೂವರನ್ನು ಕೂಡಲೇ ಗ್ರಾಮಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಮೂರು ಮಂದಿ ಆಸ್ಪತ್ರೆಯಲ್ಲೇ ಇದ್ದು, ನಮ್ಮದೇನೂ ತಪ್ಪಿಲ್ಲದಿದ್ದರೂ ಈ ರೀತಿ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿದ್ದ ಸಾಮಗ್ರಿಗಳನ್ನೆಲ್ಲಾ ಒಡೆದು ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಬಳಿ ಹಲ್ಲೆಗೊಳಗಾದ ಅರುಣಮ್ಮಾ ಮನವಿ ಮಾಡಿ ಮಾಡಿದ್ದಾರೆ.

ಸದ್ಯ ಪ್ರಕರಣದ ಸಂಬಂಧ 20ಕ್ಕೂ ಅಧಿಕ ಜನರ ಮೇಲೆ ಹಿರೇಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗದಗ ಮೂಲದ ಅಪ್ರಾಪ್ತೆಯ ಶವ ರಾಮದುರ್ಗದಲ್ಲಿ ಪತ್ತೆ: ಅತ್ಯಾಚಾರವೆಸಗಿ ಕೊಲೆ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.