ಚಿಕ್ಕೋಡಿ (ಬೆಳಗಾವಿ): ಕೋವಿಡ್19 ಮಹಾಮಾರಿ ವಿರುದ್ಧ ಶ್ರಮಿಸುತ್ತಿರುವ ರಾಯಬಾಗ ತಾಲೂಕಿನ ಕೊರೊನಾ ವಾರಿಯರ್ಸ್‌ಗೆ ತಾಲೂಕಿನ ಕಂಕಣವಾಡಿ ನಿವೃತ ಯೋಧರ ಸಂಘ ಜೈ ಜವಾನ್ ಜೈ ಕಿಸಾನ್ ರೂರಲ್ ಆ್ಯಂಡ್ ಅರ್ಬನ್ ಡೆವಲಪ್ಮೆಂಟ್ ಸೂಸೈಟಿ ಮೂಲಕ ಗೌರವಿಸಲಾಯಿತು.
ಕಂಕಣವಾಡಿ ಪಟ್ಟಣ ಪಂಚಾಯತಿ ಸಭಾ ಭವನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊರೊನಾ ವೈರಸ್ ವಿರುದ್ಧ ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ಕಂದಾಯ, ಪೌರಾಡಳಿತ, ಶಿಕ್ಷಣ ಇಲಾಖೆ, ಹೋಮ್ ಗಾರ್ಡ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಪೌರಕಾರ್ಮಿಕರು, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಪತ್ರಕರ್ತರನ್ನು ಗೌರವಿಸಲಾಯಿತು.