ETV Bharat / state

ಯಡಿಯೂರಪ್ಪ ಕರ್ನಾಟಕಕ್ಕೆ ಮಾಡಿದ ಸೇವೆ ಬಿಜೆಪಿ ಎಂದಿಗೂ ಮರೆಯಲ್ಲ: ರಾಜನಾಥ ಸಿಂಗ್

author img

By

Published : Mar 2, 2023, 4:16 PM IST

ಬಿಎಸ್​ ಯಡಿಯೂರಪ್ಪ ರಾಜ್ಯಕ್ಕೆ ಮಾಡಿದ ಸೇವೆಯನ್ನ ಪಕ್ಷ ಎಂದಿಗೂ ಮರೆಯಲ್ಲ ಎಂದು ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಹೇಳಿದರು

ಕೇಂದ್ರ ಸಚಿವ ರಾಜನಾಥ ಸಿಂಗ್
ಕೇಂದ್ರ ಸಚಿವ ರಾಜನಾಥ ಸಿಂಗ್

ಬೆಳಗಾವಿ: ಯಡಿಯೂರಪ್ಪ ತಮ್ಮ ಆರೋಗ್ಯದ ಕಾರಣಕ್ಕಾಗಿ ಅಧಿಕಾರ ತ್ಯಾಗ ಮಾಡಿದರು, ಅವರ ಸಹಮತದಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿ ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಯಡಿಯೂರಪ್ಪ ಅವರನ್ನು ಇಡೀ ಕರ್ನಾಟಕ ಸನ್ಮಾನವನ್ನ ಮಾಡಬೇಕು. ಯಡಿಯೂರಪ್ಪ ಕರ್ನಾಟಕಕ್ಕೆ ಮಾಡಿದ ಸೇವೆ ಬಿಜೆಪಿ ಎಂದಿಗೂ ಮರೆಯಲ್ಲ, ಅವರನ್ನು ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.

ಬೆಳಗಾವಿಯ ಖಾನಾಪುರ ನಂದಗಢ ಬಿಜೆಪಿ ಪಕ್ಷದಿಂದ ಆಯೋಜಿಸಿದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪೂರ್ಣ ಪ್ರಮಾಣದ ಸರ್ಕಾರ ರಚನೆ ಆಗಬೇಕು ಎಂಬುದು ಯಡಿಯೂರಪ್ಪ ಅವರ ಇಚ್ಚೆಯಾಗಿದೆ. ಅಲ್ಲದೇ ಕರ್ನಾಟಕವನ್ನು ದಕ್ಷಿಣ ಭಾರತದ ನಂಬರ್ ಒನ್ ರಾಜ್ಯ ಮಾಡುವುದು ಬಿಜೆಪಿಯ ಗುರಿ ಎಂದು ರಾಜನಾಥ ಸಿಂಗ್​ ಹೇಳಿದರು. ಮೋದಿ ಶಿವಮೊಗ್ಗದ ಸುಂದರ ಏರ್ಪೋರ್ಟ್ ಉದ್ಘಾಟನೆ ಮಾಡಿದ್ದಾರೆ. ಏರ್ ಅಷ್ಟೇ ಅಲ್ಲ ರೋಡ್ ಸಂಪರ್ಕದಲ್ಲಿ ಸರ್ಕಾರ ಅದ್ಭುತ ಕೆಲಸ ಮಾಡಿದೆ. 50ವರ್ಷದಲ್ಲಿ ಕಾಂಗ್ರೆಸ್ ಮಾಡದ ಕೆಲಸ 9 ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದು ಗುಣಗಾನ ಮಾಡಿದರು.

ಕಾಂಗ್ರೆಸ್​ ಹೇಳುವುದು ಒಂದು ಮಾಡುವುದು ಇನ್ನೊಂದು: ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ಮಹತ್ವದ ಕೆಲಸ ಮಾಡಿದೆ ಕರ್ನಾಟಕದಲ್ಲಿ ಹೆಲಿಕಾಪ್ಟರ್ ಸಿದ್ದಪಡಿಸುವ ಕಾರ್ಖಾನೆ ಆರಂಭವಾಗಿದೆ. ಇಂಡಸ್ಟ್ರೀಸ್ ಕಾರಿಡಾರ್ ಮೂಲಕ ರಾಜ್ಯದ ಯುವಕರು ಉದ್ಯೋಗ ಕೊಂಡುಕೊಂಡಿದ್ದಾರೆ. ಕರ್ನಾಟಕದಲ್ಲಿ ಮೂರು ಇಂಡಸ್ಟ್ರೀಸ್ ಕಾರಿಡಾರ್ ಮಾಡಲಾಗಿದೆ. ಅಲ್ಲದೇ ಮನೆ ಮತ್ತು ಜಮೀನಿಗೆ ನೀರು ಕೊಡುವ ಯೋಜನೆ ರೂಪಿಸಲಾಗಿದೆ. ಕಾಂಗ್ರೆಸ್ ಹೇಳವುದು ಒಂದು, ಮಾಡೋದು ಇನ್ನೊಂದು. ಆದರೇ ಬಿಜೆಪಿ ನುಡಿದಂತೆ ನಡೆಯುವ ಪಕ್ಷ ವಾಗಿದೆ ಎಂದು ಹೇಳಿದರು. ಪ್ರಾಣ ಬಿಟ್ಟೆವು ವಚನ ಬಿಡಲ್ಲ ಎಂಬುದು ನಮ್ಮ ಘೋಷಣೆ ಎಂದು ರಾಜನಾಥ ಸಿಂಗ್​ ಇದೇ ವೇಳೆ ಹೇಳಿದರು.

ಕಾಶ್ಮೀರದ ಕಲಂ 370 ರದ್ದು ಪಡಿಸಲಾಗಿದೆ, ತ್ರೀಬಲ್ ತಲಾಕ್‌ ನಿಷೇಧಿಸಲಾಗಿದೆ, ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಚಿತ್ರದುರ್ಗ, ತುಮಕೂರು ಜಿಲ್ಲೆಗೆ ಇದರಿಂದ ಲಾಭ ಆಗಿದೆ. ಜಲ್ ಜೀವನ್ ಮಷೀನ್ ಮೂಲಕ ಜನರಿಗೆ ಶುದ್ಧ ನೀರು ಕೊಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದು ಸಂಕಲ್ಪ ಮಾಡಿ. ಯಾತ್ರೆಗೆ ಬೆಳಗಾವಿಯನ್ನು ಯೋಚಿಸಿ ಆಯ್ಕೆ ಮಾಡಲಾಗಿದೆ. ಬೆಳಗಾವಿ ಕರ್ನಾಟಕದ ಶಿರ ಇದ್ದ ಹಾಗೇ ಎಂದು ಸಚಿವರು ಹೇಳಿದರು.

ನಾವು ಹೋರಾಟಗಾರರನ್ನು ಗುರುತಿಸಿದ್ದೇವೆ - ಪ್ರಹ್ಲಾದ್​ ಜೋಶಿ : ನಮ್ಮ ರಕ್ಷಣಾ ಸಚಿವರೊಂದಿಗೆ ವೀರ ಸಂಗೊಳ್ಳಿ ರಾಯಣ್ಣ ಸಮಾಧಿಗೆ ಭೇಟಿಕೊಟ್ಟು ನಿಮ್ಮ ಮುಂದೆ ಬಂದಿದ್ದೇವೆ. 2008ರಲ್ಲಿ ನಾನು ಮತ್ತು ಈಶ್ವರಪ್ಪನವರು ಈ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆವು, ಅವತ್ತಿನಿಂದ ಇವತ್ತಿಗೆ ಒಂದು ರೂಪಕ್ಕೆ ಬಂದಿದೆ. ಈ ಸ್ಥಳ ಅಭಿವೃದ್ಧಿಗೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡಿದೆ. ನಿಮ್ಮ ಮುಂದೆ ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ಕೆಲವು ಸ್ವಾತಂತ್ರ ಹೋರಾಟಗಾರರನ್ನು ಕಾಂಗ್ರೆಸ್ ಗುರುತಿಸಿರುತ್ತಿರಲಿಲ್ಲ, ಆದರೆ ಇತ್ತೀಚಿನ ದೂರದರ್ಶನದಲ್ಲಿ ರಾಣಿ ಅಬ್ಬಕ್ಕನ ಹಿಡ್ಕೊಂಡು ಹಲವು ನಾಯಕರನ್ನು ನಾವು ಗುರುತಿಸಿದ್ದೇವೆ.

ಬಿಜೆಪಿ ಅವರಿಗೆ ಸಂಗೊಳ್ಳಿ ರಾಯಣ್ಣ ಈಗ ನೆನಪಾಗಿದಿಯಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಾರೆ. ಸಿದ್ದರಾಮಯ್ಯಗೆ ಸಂಗೊಳ್ಳಿ ರಾಯಣ್ಣ, ಕನಕ ದಾಸರು, ಯಾರು ನೆನಪು ಇರ್ಲಿಲ್ಲ. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಹಾಗೂ ರೈಲ್ವೆ ನಿಲ್ದಾಣಕ್ಕೆ ಹೆಸರು ಇಟ್ಟಿದ್ದು ನಮ್ಮ ಸರ್ಕಾರ, 40 ಕೋಟಿ ರೂಪಾಯಿ ಕನಕ ಪೀಠಕ್ಕೆ ಕೊಟ್ಟಿದ್ದು ಬಿಜೆಪಿ ಸರ್ಕಾರ, ಆದರೆ ಸಿದ್ದರಾಮಯ್ಯಗೆ ಸುಳ್ಳು ಹೇಳೋಕೆ ಒಂದು ಮಿತಿ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭಿವೃದ್ಧಿ ಕೆಲಸದ ಆಧಾರದ ಮೇಲೆ ​ಮತ ಕೇಳಿಲ್ಲ: ಮೇಲೆ ​​ಯಾವಾಗ ಕಾಂಗ್ರೆಸ್ ಪಕ್ಷವನ್ನು ದೂರ ಇಟ್ಟಿದ್ದಿರಿ ಆಗ ದೇಶದಲ್ಲಿ ಒಂದು ಕ್ರಾಂತಿಯಾಗಿದೆ. ಕಾಂಗ್ರೆಸ್ ಪಕ್ಷದವರು ನಾವು ಇಂತಹ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಜನರ ಬಳಿ ಹೋಗಿ ಮತ ಕೇಳಿಲ್ಲ, ನಾವು ಸ್ವಾತಂತ್ರ್ಯ ತಂದಿದ್ದೇವೆ ಎಂದು ಮತ ಕೇಳಿದರು, ನಂತರ ಇಂದಿರಾ ಗಾಂಧಿ ಹೆಸರು ಹೇಳಿ ಮತ ಪಡೆದರು, ನೆಹರೂ ಅವರು ಹೆಸರಲ್ಲಿ ಮತ ಕೇಳಿದರು. ಆದರೆ ನಾವು ಕೆಲಸ ಮಾಡಿದ್ದೇವೆ ಮತ ನೀಡಿ ಎಂದು ಕೇಳುತ್ತವೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಕೇಳಿದ್ದೇವೆ, ಮತ್ತೆ ಮೋದಿ ಅವರ ಕಾಲದಲ್ಲಿ ಕೆಲಸ ಮಾಡಿದ್ದೇವೆ ಮತ ನೀಡಿ ಎಂದು ಕೇಳುತ್ತೇವೆ ಎಂದರು.

ಇದನ್ನೂ ಓದಿ: ಕುಂದಗೋಳ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ..? ಟಿಕೆಟ್​ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.