ETV Bharat / state

ಕರ್ನಾಟಕದ ಯುವಜನರ ಭವಿಷ್ಯಕ್ಕಾಗಿ ಯುವ ಗ್ಯಾರೆಂಟಿ ಕಾರ್ಡ್​ ರಾಹುಲ್ ಘೋಷಣೆ : ರಣದೀಪ್‌ಸಿಂಗ್ ಸುರ್ಜೇವಾಲಾ - ರಣದೀಪ್‌ಸಿಂಗ್ ಸುರ್ಜೇವಾಲಾ

ನಾವೇನೂ ಸಿಎಂ ಬಸವರಾಜ ಬೊಮ್ಮಾಯಿ ತರಹ ಶಿಗ್ಗಾಂವಿಯಿಂದ ಸ್ಪರ್ಧಿಸಲೋ ಬೇಡವೋ? ಅಥವಾ ಕಾಂಗ್ರೆಸ್​ವೂ ಯಾರನ್ನು ಅಭ್ಯರ್ಥಿ ಮಾಡ್ತಾರೆ ಅಂತೆಲ್ಲ ಯೋಚಿಸುತ್ತಿಲ್ಲ. ಅರ್ಧದಷ್ಟು ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ: ರಣದೀಪ್‌ಸಿಂಗ್ ಸುರ್ಜೇವಾಲಾ ಸ್ಟಷ್ಟನೆ

State Congress in-charge Randeep Singh Surjewala spoke.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಮಾತನಾಡಿದರು.
author img

By

Published : Mar 19, 2023, 10:44 PM IST

ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರು ಜನಪ್ರಿಯ ನಾಯಕರು. ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ ಬರಲಿ ಅನ್ನುವುದು ಹಲವು ಕ್ಷೇತ್ರಗಳಲ್ಲಿನ ಜನರಿಂದ ಬೇಡಿಕೆ ಇದೆ. ಡಿ.ಕೆ. ಶಿವಕುಮಾರ್​ಗೆ ಸಹ ಕನಕಪುರ ಬೇಡ. ಬೇರೆ ಕ್ಷೇತ್ರದಿಂದ ಸ್ಪರ್ಧಿಸಲಿ ಎಂಬ ಬೇಡಿಕೆಯೂ ಇದೆ. ಈ ನಿರ್ಧಾರವನ್ನು ಅವರಿಬ್ಬರಿಗೂ ಬಿಟ್ಟಿದ್ದೇವೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆನ್ನುವ ವಿಚಾರವನ್ನೂ ಅವರಿಗೆ ಬಿಟ್ಟಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಸೇಫ್ ಅಲ್ಲವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವರದಿ ಸುಳ್ಳು. ಇದನ್ನು ನಾನು ಅಲ್ಲಗಳೆಯುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ನಾಯಕರು ಒಂದಾಗಿ ಕುಳಿತು ಚರ್ಚಿಸುತ್ತೇವೆ. ಬಹಳ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಂದು ಸ್ಪರ್ಧಿಸಬೇಕೆಂಬ ಬೇಡಿಕೆ ಇದೆ. ಅತಿ ಶೀಘ್ರವೇ ಈ ಕುರಿತಾಗಿ ಘೋಷಣೆ ಮಾಡ್ತೇವೆ. ಈ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಿಗ್ಗಾಂವಿಯಿಂದ ಸ್ಪರ್ಧೆಗೆ ಸಿ ಎಂ ಬಸವರಾಜ ಬೊಮ್ಮಾಯಿ ಮೀನಮೇಷ- ಸುರ್ಜೇವಾಲಾ: ನಾವೇನೂ ಸಿಎಂ ಬಸವರಾಜ ಬೊಮ್ಮಾಯಿ ರೀತಿ ಶಿಗ್ಗಾಂವಿಯಿಂದ ಸ್ಪರ್ಧಿಸಲೋ ಬೇಡವೋ? ಅಥವಾ ಕಾಂಗ್ರೆಸ್​ವೂ ಯಾರನ್ನು ಅಭ್ಯರ್ಥಿ ಮಾಡ್ತಾರೆ ಅಂತೆಲ್ಲ ಯೋಚಿಸುತ್ತಿಲ್ಲ. ಬಿಜೆಪಿಯವರು ಇನ್ನೂ ಅಭ್ಯರ್ಥಿಗಳ ಬಗ್ಗೆ ಚರ್ಚೆಯೂ ನಡೆಸಿಲ್ಲ. ನಾವು ಅರ್ಧದಷ್ಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದೇವೆ. ಅಧಿಕಾರಕ್ಕಾಗಿ ಹೋರಾಡುತ್ತಿಲ್ಲ, ಅಭಿವೃದ್ಧಿಗಾಗಿ ಹೋರಾಡುತ್ತಿದ್ದೇವೆ ಎಂದು ತಿಳಿಸಿದರು.

ಆದಾನಿಯ ದೊಡ್ಡ ಹಗರಣ:ರಾಹುಲ್ ಗಾಂಧಿ ಮನೆಗೆ ದೆಹಲಿ ಪೊಲೀಸರ ಭೇಟಿ ವಿಚಾರಕ್ಕೆ ಸುರ್ಜೇವಾಲ್ ಮಾತನಾಡಿ,ಸರ್ವಾಧಿಕಾರಿ ಯಾವಾಗ ಹೆದರುತ್ತಾನೋ, ಆಗ ಪೊಲೀಸರ ಕಳಿಸುತ್ತಾನೆ. ದೆಹಲಿಯಲ್ಲಿ ಕುಳಿತ ಸರ್ವಾಧಿಕಾರಿಗೆ ಇದು ಅನಿಸುತ್ತೆ ಯಾವ ಪ್ರಕಾರ ಪ್ರಜಾಪ್ರಭುತ್ವ ಪ್ರಜಾವ್ಯವಸ್ಥೆ ಮೇಲೆ ದಾಳಿ ಆಗ್ತಿದೆ.

ಆದಾನಿಯ ದೊಡ್ಡ ಹಗರಣ ಹೊರಗೆ ಬಂದಿದೆ. ಈ ಬಗ್ಗೆ ಸಂಸತ್ ಒಳಗೂ ಹೊರಗೂ ಚರ್ಚೆ ಆಗಬಾರದೆಂಬ ಬಯಕೆ ಅವರಿಗಿದೆ. ವಿಪಕ್ಷಗಳು ಅದಾನಿ ಬಗ್ಗೆ ಹೇಳಬಾರದು. ತನಿಖೆಗೆ ಒತ್ತಾಯಿಸಬಾರದು ಅವರ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಯುವ ಗ್ಯಾರಂಟಿ ಕಾರ್ಡ್​ ಘೋಷಣೆ: ಬೆಳಗಾವಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಯುವ ಕ್ರಾಂತಿ ರ್ಯಾಲಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ನಾಳೆ ಕರ್ನಾಟಕದ ಯುವಜನರಿಗೆ ಭವಿಷ್ಯದ ದೃಷ್ಟಿಯಿಂದ ಯುವ ಗ್ಯಾರಂಟಿ ಕಾರ್ಡ್​ ಘೋಷಣೆ ಮಾಡಲಿದ್ದಾರೆ. ಮುಂದೆ ಈ ಗ್ಯಾರಂಟಿಯನ್ನು ದೇಶದ ಇಡೀ ಯುವಕರು ಕೇಳುತ್ತಾರೆ. ಯುವಜನರ ಜೀವನದಲ್ಲಿ ಹೊಸ ಆಶಾಕಿರಣ ನಾಳೆ ಉದಯವಾಗಲಿದೆ ಎಂದರು.

ದೆಹಲಿಯ ಸರ್ವಾಧಿಕಾರಿ ಎಲ್ಲರ ಬಾಯಿಗೆ ಪಟ್ಟಿ ಕಟ್ಟಲು ಬಯಸುತ್ತಿದ್ದಾರೆ ಆದರೆ ಕಾಂಗ್ರೆಸ್ ನಾಯಕರ, ರಾಹುಲ್ ಗಾಂಧಿ ಬಾಯಿ ಮುಚ್ಚಿಸಲಾಗುತ್ತಿಲ್ಲ ನಾಳೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಹೀಗಾಗಿ ರಾಹುಲ್ ಗಾಂಧಿಯನ್ನ ತಡೆಯಲು ಅವರು ಬಯಸುತ್ತಾರೆ. ಆದ್ರೆ ಇದು ಅವರಿಗೆ ಸಾಧ್ಯವಿಲ್ಲ, ಏಕೆಂದರೆ ನಾವು ಹೆದರಲ್ಲ, ಕುಗ್ಗಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂಓದಿ :ರಾಹುಲ್ ಗಾಂಧಿ ‘ಬಂದಾ ಪುಟ್ಟ ಹೋದ ಪುಟ್ಟ’ ಕನ್ನಡಿಗರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ: ಶೋಭಾ ಕರಂದ್ಲಾಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.