ETV Bharat / state

ಕೋವಿಡ್ ರೋಗಿಗಳಿಗೆ ಉಚಿತ ಆಕ್ಸಿಜನ್ ಜೊತೆ ಊಟೋಪಚಾರ... ಪೃಥ್ವಿ ಫೌಂಡೇಶನ್ ಸಂಸ್ಥೆಯ ಮಮಕಾರ - ಕೋವಿಡ್ ರೋಗಿಗಳಿಗೆ ಉಚಿತ ಆಕ್ಸಿಜನ್

ನಗರದ ಬಿಮ್ಸ್ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಪೃಥ್ವಿ ಫೌಂಡೇಷನ್​ ವತಿಯಿಂದ ನಿತ್ಯ ನೆರವು ನೀಡುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ನಿತ್ಯ ಮಾಸ್ಕ್, ಸ್ಯಾನಿಟೈಸರ್, ಹಣ್ಣುಗಳು, ನೀರಿನ ಬಾಟಲ್, ಊಟ ವಿತರಿಸುತ್ತಿದ್ದಾರೆ.

Pruthvi Foundation
ಪೃಥ್ವಿ ಫೌಂಡೇಶನ್ ಸಂಸ್ಥೆ
author img

By

Published : Apr 30, 2021, 8:23 PM IST

ಬೆಳಗಾವಿ: ಕೊರೊನಾ ಸಂದರ್ಭದಲ್ಲಿ ಕೋವಿಡ್ ಸೋಂಕಿತರು ಸೇರಿದಂತೆ ಅವರ ಕುಟುಂಬಸ್ಥರು ಆಹಾರ ಸಿಗದೇ ಕಷ್ಟ ಅನುಭವಿಸಿದ ಪ್ರಕರಣಗಳು ನಡೆದಿದ್ದವು. ಅಲ್ಲದೇ ಆಕ್ಸಿಜನ್ ಕೊರತೆ ಎದುರಾಗಿತ್ತು. ಇಂತಹ ಸಮಯದಲ್ಲಿ ನಗರದ ಪೃಥ್ವಿ ಫೌಂಡೇಶನ್ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದೆ.

ಉಸಿರಾಟದ ತೊಂದರೆ ಇರುವವರಿಗೆ ಆಕ್ಸಿಜನ್ ಸಿಲಿಂಡರ್ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಮಧ್ಯಾಹ್ನದ ಊಟ ವಿತರಣೆ ಮಾಡುತ್ತಿದ್ದಾರೆ. ನಗರದ ಬಿಮ್ಸ್ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಪೃಥ್ವಿ ಫೌಂಡೇಶನ್​ ವತಿಯಿಂದ ನಿತ್ಯವೂ ನೆರವು ನೀಡುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ದಿನವೂ ಮಾಸ್ಕ್, ಸ್ಯಾನಿಟೈಸರ್, ಹಣ್ಣುಗಳು, ನೀರಿನ ಬಾಟಲ್, ಊಟ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಕೋವಿಡ್ ರೋಗಿಗಳಿಗೆ ಉಚಿತ ಆಕ್ಸಿಜನ್ ಜೊತೆ ಊಟ ಉಪಚಾರ

ಉಚಿತ ಆಕ್ಸಿಜನ್ ವಿತರಣೆ

ಇದಲ್ಲದೇ ತಮ್ಮದೇ ಒಂದು ತಂಡ ಕಟ್ಟಿಕೊಂಡ ಪೃಥ್ವಿ ಸಿಂಗ್ ಫೌಂಡೇಶನ್ ಸಂಸ್ಥಾಪಕ ಪೃಥ್ವಿ ಸಿಂಗ್ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್​​​​ಗಳನ್ನು ಕೂಡ ವಿತರಣೆ ಮಾಡುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.