ETV Bharat / state

ರಮೇಶ್​ಗೆ ಸಿಗದ ಬಿಜೆಪಿ ಟಿಕೆಟ್​... ಕತ್ತಿ ಬೆಂಬಲಿಗರಿಂದ ಹೆದ್ದಾರಿ ತಡೆದು ಪ್ರತಿಭಟನೆ - kannada news

ರಮೇಶ ಕತ್ತಿಗೆ ಟಿಕೆಟ್ ನೀಡದ ಹಿನ್ನೆಲೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.

ಕತ್ತಿ ಬೆಂಬಲಿಗರಿಂದ ರಾಷ್ಟ್ರೀಯ ಹೆದ್ದಾರಿ 4 ತಡೆದು ಪ್ರತಿಭಟನೆ
author img

By

Published : Mar 31, 2019, 5:58 PM IST

ಚಿಕ್ಕೋಡಿ: ರಮೇಶ್‌ ಕತ್ತಿಅವರಿಗೆ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಹುಕ್ಕೇರಿ ತಾಲೂಕು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದಾದಬಾನಹಟ್ಟಿ ಬಳಿ ಅರ್ಧ ಗಂಟೆ ಕಾಲ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

ಕತ್ತಿ ಬೆಂಬಲಿಗರಿಂದ ರಾಷ್ಟ್ರೀಯ ಹೆದ್ದಾರಿ 4 ತಡೆದು ಪ್ರತಿಭಟನೆ

ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘದ ನಿರ್ದೇಶಕ ಕಲಗೌಡ ಪಾಟೀಲ್​ ಮಾತನಾಡಿ, ಪಕ್ಷದ ವರಿಷ್ಠರು ಎ. 4ರೊಳಗೆ ಮರು ಪರಿಶೀಲನೆ ಮಾಡಿ ರಮೇಶ್‌ ಕತ್ತಿಯವರಿಗೆ ಟಿಕೆಟ್‌ ನೀಡಬೇಕು. ಇಲ್ಲವಾದರೆ, ಕತ್ತಿ ಸಹೋದರರ ಮುಂದಿನ ನಿರ್ಧಾರಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಎಚ್ಚರಿಸಿದರು.

ಸಂಕೇಶ್ವರ ಟಿಎಪಿಎಂಎಸ್‌ ಅಧ್ಯಕ್ಷ ಈರಣ್ಣ ಹಾಲದೇವರಮಠ‌ ಮಾತನಾಡಿ, ರಮೇಶ್‌ ಕತ್ತಿಗೆ ಟಿಕೆಟ್‌ ನೀಡದ ಕಾರಣ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈಗಲೂ ಕಾಲ ಮಿಂಚಿಲ್ಲ, ವರಿಷ್ಠರು ನಿರ್ಧಾರ ಮರು ಪರಿಶೀಲಿಸಿ ರಮೇಶ್‌ ಕತ್ತಿಗೆ ಟಿಕೆಟ್‌ ನೀಡಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.

ಕತ್ತಿ ಬೆಂಬಲಿಗರಿಂದ ರಾಷ್ಟ್ರೀಯ ಹೆದ್ದಾರಿ 4 ತಡೆದು ಪ್ರತಿಭಟನೆ ಚಿಕ್ಕೋಡಿ : ರಮೇಶ್‌ ಕತ್ತಿ ಅವರಿಗೆ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಯಮಕನಮರಡಿ ಸಮೀಪದ ದಾದಬಾನಹಟ್ಟಿ ಬಳಿ ಅರ್ಧ ಗಂಟೆ ಕಾಲ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.  ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘದ ನಿರ್ದೇಶಕ ಕಲಗೌಡಾ ಪಾಟೀಲ‌ ಮಾತನಾಡಿ ಪಕ್ಷದ ವರಿಷ್ಠರು ಏ. 4ರೊಳಗೆ ಮರು ಪರಿಶೀಲನೆ ಮಾಡಿ ರಮೇಶ್‌ ಕತ್ತಿಯವರಿಗೆ ಟಿಕೆಟ್‌ ನೀಡಬೇಕು. ಇಲ್ಲವಾದರೆ, ಕತ್ತಿ ಸಹೋದರರ ಮುಂದಿನ ನಿರ್ಧಾರಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಎಚ್ಚರಿಸಿದರು.  ಸಂಕೇಶ್ವರ ಟಿಎಪಿಎಂಎಸ್‌ ಅಧ್ಯಕ್ಷ ಈರಣ್ಣಾ ಹಾಲದೇವರಮಠ‌ ಮಾತನಾಡಿ ರಮೇಶ್‌ ಕತ್ತಿಗೆ ಟಿಕೆಟ್‌ ನೀಡದ ಕಾರಣ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈಗಲೂ ಕಾಲ ಮಿಂಚಿಲ್ಲ, ವರಿಷ್ಠರು ನಿರ್ಧಾರ ಮರುಪರಿಶೀಲಿಸಿ ರಮೇಶ್‌ ಕತ್ತಿಗೆ ಟಿಕೆಟ್‌ ನೀಡಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು. ಸಂಜಯ ಕೌಲಗಿ ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.