ಚಿಕ್ಕೋಡಿ : ರಾಜ್ಯದಲ್ಲಿ ಲಾಕ್ಡೌನ್ ಆದೇಶವಿದ್ರೂ ಪಟ್ಟಣದ ಗಾಂಧಿ ಮಾರ್ಕೆಟ್ನಲ್ಲಿ ಬೆಳಗ್ಗೆಯಿಂದ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದರು.
ಲಾಕ್ಡೌನ್ ಹಿನ್ನೆಲೆ ತರಕಾರಿ ಬೆಲೆ ಗಗನಕ್ಕೇರಿದ್ದರೂ ಸಹಿತ ಜನ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿರುವುದು ಸಾಮನ್ಯವಾಗಿತ್ತು. ಗಾಂಧಿ ಮಾರ್ಕೆಟ್ನಲ್ಲಿ ತರಕಾರಿ ಮಾರಾಟ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಖಚಿತ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕಾಗಮಿಸಿ ವ್ಯಾಪಾರಸ್ಥರನ್ನೆಲ್ಲ ಸ್ಥಳದಿಂದ ಖಾಲಿ ಮಾಡಿಸಿದರು.