ETV Bharat / state

ಬೆಳಗಾವಿಯಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹ : ಆರೋಪಿ ಅಂದರ್​

author img

By

Published : Jan 26, 2021, 7:46 PM IST

49 ಜಿಲಿಟಿನ್ ಕಡ್ಡಿ, 23 ಇಡಿ ಕೇಬಲ್ ಹಾಗೂ ಬ್ಲಾಸ್ಟಿಂಗ್ ಚಾರ್ಜರ್ ಬ್ಯಾಟರಿ ಕೂಡ ಕಾರ್ಯಾಚರಣೆ ವೇಳೆ ದೊರೆತಿವೆ. ಆರೋಪಿ ಬಳಿ ಒಟ್ಟು 2,03,500 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ..

Police Seized Illegal Explosion
ಆರೋಪಿ

ಬೆಳಗಾವಿ : ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 49 ಜಿಲಿಟಿನ್ ಸೇರಿದಂತೆ ಇನ್ನಿತರ ಸ್ಫೋಟಕ ವಸ್ತುಗಳನ್ನು ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಣ್ಣಿಕೇರಿ ರಾಮೇಶ್ವರ ಕೆನಾಲ್ ಹತ್ತಿರ ಜಿಲಿಟಿನ್ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ನಿವಾದಿ ವಿಠ್ಠಲ ಯಮನಪ್ಪ ಹಳಬರ ತಮ್ಮ ಟ್ರ್ಯಾಕ್ಟರ್‌ನಲ್ಲಿ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ.

49 ಜಿಲಿಟಿನ್ ಕಡ್ಡಿ, 23 ಇಡಿ ಕೇಬಲ್ ಹಾಗೂ ಬ್ಲಾಸ್ಟಿಂಗ್ ಚಾರ್ಜರ್ ಬ್ಯಾಟರಿ ಕೂಡ ಕಾರ್ಯಾಚರಣೆ ವೇಳೆ ದೊರೆತಿವೆ. ಆರೋಪಿ ಬಳಿ ಒಟ್ಟು 2,03,500 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಲಗೋಡ ಠಾಣೆಯ ಪೊಲೀಸ್ ಇನಸ್ಪೆಕ್ಟರ್ ಶಿವಾನಂದ ಅಂಬಿಗೇರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಬಗ್ಗೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.