ETV Bharat / state

ಚುನಾವಣೆ ಘೋಷಣೆಗೂ ಮುನ್ನ ಅಖಾಡಕ್ಕಿಳಿದ ಪೊಲೀಸರು: 9 ಲಕ್ಷ ನಗದು, 16 ಲಕ್ಷ ಸೀರೆ ವಶಕ್ಕೆ - ಸಚಿವ ಹಾಲಪ್ಪ ಆಚಾರ್ ಹೆಸರಲ್ಲಿ ಸೀರೆ ಹಂಚಿಕೆ

ಚುನಾವಣಾ ಹಿನ್ನೆಲೆ ಮತದಾರರಿಗೆ ಹಂಚಲು ಕೊಂಡ್ಯೊಯ್ಯುತ್ತಿದ್ದ 9 ಲಕ್ಷ ರೂ. ನಗದು ಮತ್ತು 16 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

police
ಚುನಾವಣೆ ಘೋಷಣೆಗೂ ಮುನ್ನ ಅಖಾಡಕ್ಕಿಳಿದ ಪೊಲೀಸರು
author img

By

Published : Mar 22, 2023, 1:34 PM IST

ಬೆಳಗಾವಿ : ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ಅತ್ತ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇತ್ತ ಪೊಲೀಸರು ಸಹ ಅಖಾಡಕ್ಕೆ ಇಳಿದಿದ್ದು, ಇದೀಗ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂಬತ್ತು ಲಕ್ಷ ರೂ. ನಗದು ಮತ್ತು ಮತದಾರರಿಗೆ ಹಂಚುವ ಸೀರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

police
ಕಾರು ಸಮೇತ ನಗದು ವಶಕ್ಕೆ ಪಡೆದುಕೊಂಡ ಪೊಲೀಸರು

ಬೆಳಗಾವಿ ನಗರದ ಹೊರ ವಲಯದ ಕಣಬರಗಿ ಚೆಕ್ ಪೋಸ್ಟ್​ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಗೋಕಾಕ್ ತಾಲೂಕಿನ‌ ಅಂಕಲಗಿಗೆ ಹೊರಟ್ಟಿದ್ದ ಕಾರಿನಲ್ಲಿ ದಾಖಲಾತಿಯಿಲ್ಲದ ಹಣ ಪತ್ತೆಯಾಗಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್​ನಲ್ಲಿ ಪರಿಶೀಲನೆ ನಡೆಸಿದ ವೇಳೆ ನಗದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿಂತೆ ಓರ್ವನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

police
ಸೀರೆ ವಶಕ್ಕೆ ಪಡೆದುಕೊಂಡ ಪೊಲೀಸರು

ಸೀರೆ ವಶಕ್ಕೆ: ಚಿಕ್ಕೋಡಿಯಲ್ಲಿ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಸೀರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸದಲಗಾ ದತವಾಡ ಚೆಕ್ ಪೋಸ್ಟ್​ನಲ್ಲಿ ವಾಹನ ತಪಾಸಣೆ ವೇಳೆ ಸೀರೆಗಳು ಪತ್ತೆಯಾಗಿದೆ. ಸುಮಾರು 16 ಲಕ್ಷ ರೂ. ಬೆಲೆ ಬಾಳುವ ಸೀರೆಗಳನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಸೀರೆ ಹಂಚಿ ರಾಜಕೀಯ ಮಾಡ್ಬೇಕಾ?: ಸಿ.ಪಿ.ಯೋಗೇಶ್ವರ್‌ ವಿರುದ್ದ ಹೆಚ್​ಡಿಕೆ ವಾಗ್ದಾಳಿ

ರಾಯಭಾಗ ಮತ ಕ್ಷೇತ್ರದಲ್ಲಿ ಹಂಚಿಕೆ ಮಾಡಲು ಕೊಂಡೊಯ್ಯುತ್ತಿದ್ದ ಸೀರೆಗಳು ಎಂದು ಚಾಲಕ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಾಹನ ಚಾಲಕ ಹಾಗೂ ಕ್ಲೀನರ್ ಮತ್ತು ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕೊಪ್ಪಳದಲ್ಲಿ ಸಚಿವ ಹಾಲಪ್ಪ ಆಚಾರ್​ ಹೆಸರಲ್ಲಿ ಸೀರೆ ಹಂಚಿಕೆ: ಕಾಂಗ್ರೆಸ್

ಸಚಿವ ಹಾಲಪ್ಪ ಆಚಾರ್ ಹೆಸರಲ್ಲಿ ಸೀರೆ ಹಂಚಿಕೆ : ಕಳೆದ ಒಂದು ವಾರದ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್​ ಸ್ವಕ್ಷೇತ್ರ ಯಲಬುರ್ಗಾದ ಹಳ್ಳಿ ಹಳ್ಳಿಗಳಲ್ಲಿ ಸೀರೆ ಹಂಚಿಕೆ ಮಾಡುತ್ತಿದ್ದಾರೆ. ಸೀರೆ ಇರುವ ಚೀಲದ ಮೇಲೆ ಅಳಿಯ ಬಸವರಾಜ ಅವರ ಅಡ್ಡ ಹೆಸರು ಗೌರ ಹಾಗೂ ಅದರ ಕೆಳಗೆ ಹಾಲಪ್ಪ ಆಚಾರ್​ ಫೋಟೋ ಇದ್ದು, ಫೋಟೋ ಕೆಳಗೆ ಜಲಯಜ್ಞ ಅಂತಾ ಪ್ರಿಂಟ್ ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಜೊತೆಗೆ ಸೀರೆ ಹಂಚಿಕೆ ಮಾಡುವ ವಿಡಿಯೋಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಹಾಲಪ್ಪ ಆಚಾರ್​, ಹುಟ್ಟುಹಬ್ಬಕ್ಕೆ ಅಥವಾ ಯಾವುದಾದರೂ ಒಳ್ಳೆ ಕೆಲಸದ ಉದ್ದೇಶದಿಂದ ಪಕ್ಷದ ಅಭಿಮಾನಿಗಳು ಸೀರೆ ಹಂಚುತ್ತಾರೆ. ಅದನ್ನು ಚುನಾವಣೆಗೆ ಲಿಂಕ್​ ಮಾಡಿದ್ರೆ ನಾನೇನು ಮಾಡಲಿ?. ನಾನು ವಾದ ಮಾಡುವುದಿಲ್ಲ. ನಾನು ಕೊಟ್ಟಿಲ್ಲ, ಅಭಿಮಾನಿಗಳು ಕೊಟ್ಟಿದ್ದು ಎಂದಿದ್ದರು.

ಇದನ್ನೂ ಓದಿ: ಉಚಿತ ಸೀರೆ ಧೋತಿ ವಿತರಣೆ ವೇಳೆ ತಳ್ಳಾಟ: ನಾಲ್ವರು ಮಹಿಳೆಯರ ಸಾವು, 10 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.