ಬೆಳಗಾವಿ: ಪಟ್ಟಣದ ವಿದ್ಯಾನಗರ, ಶಾಹೂ ನಗರ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಮತ್ತು ಕಾರಿನಲ್ಲಿ ಗಾಂಜಾ ಖರೀದಿಸಲು ಬಂದಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 953 ಗ್ರಾಂ ಗಾಂಜಾ ಮತ್ತು ಮಾರುತಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಖಾನಾಪುರ ಸಿಪಿಐ ಸುರೇಶ ಪಿ.ಶಿಂಗಿ ನೇತೃತ್ವದ ತಂಡ ದಾಳಿ ನಡೆಸಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ ದೀಪಕ್ ಸಣ್ಣಪ್ಪ ಕುಡಾಳಿ, ವಿನೋದ ಪ್ರೀತಂ ಸೊಂಟಕ್ಕಿ, ಪ್ರೀತಂ ಸೊಂಟಕ್ಕಿ ಮತ್ತು ಗಾಂಜಾ ಪದಾರ್ಥ ಖರೀದಿಗೆ ಕಾರಿನಲ್ಲಿ ಆಗಮಿಸಿದ್ದ ಬೆಳಗಾವಿ ಮಹಮ್ಮದ್ ಖಾಜಿ ಸಿಕಂದರ್ ಸನದಿ, ಖಾನಾಪುರ ನಿಂಗಾಪುರ ಗಲ್ಲಿಯ ನಿಶಾತ್ ರಿಯಾಜ್ ಅಹ್ಮದ್ ಖಂಜವಾಡಕರ, ಅಜೀಂ ಕುತುಬುದ್ದೀನ್ ಸಯ್ಯದ್, ಬೆಳಗಾವಿ ವೀರಭದ್ರನಗರದ ಸೈಯದ್ ನಿಹಾಲ್ ಫೈರೋಜ್ ಬುಕಾರಿ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.