ಬೆಳಗಾವಿ: ಕನ್ನಡದ ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿದ್ದ ಡಾ. ನಿಸಾರ್ ಅಹಮದ್ ಅವರು ವಿಧಿವಶರಾಗಿದ್ದು, ವಿವಿಧ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕನ್ನಡದ ಸೊಗಡನ್ನು ಅತ್ಯಂತ ಸಮರ್ಥವಾಗಿ ಕಾವ್ಯದ ಸೊಬಗಿನಲ್ಲಿ ಕಟ್ಟಿಕೊಡುತ್ತಿದ್ದ ಡಾ. ನಿಸಾರ್ ಅಹಮದ್ ನಮಗೆಲ್ಲಾ ಕನ್ನಡದ ಪ್ರೀತಿ ಮತ್ತು ಶ್ರದ್ಧೆಯ ಬಗ್ಗೆ ಸ್ಪೂರ್ತಿ ತುಂಬುತ್ತಿದ್ದ ಶಕ್ತಿಯಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದಿದ್ದಾರೆ.
ಕನ್ನಡದ ಹಿರಿಯ ಕವಿ, ಕನ್ನಡ ಸುಗಮ ಸಂಗೀತದ ಮೇರು ವ್ಯಕ್ತಿತ್ವದ ಡಾ. ನಿಸಾರ್ ಅಹಮದ್ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಕಂಬನಿ ಮಿಡಿದಿದ್ದಾರೆ. ಈ ಕುರಿತು ಮಾದ್ಯಮ ಪ್ರಕಟಣೆ ಹೊರಡಿಸಿದ ಅವರು, ನಿಸಾರ್ ಅವರು ರಚಿಸಿದ್ದ ಕವನಗಳು ಮತ್ತು ಗೀತೆಗಳು ಕನ್ನಡ ಸುಗಮ ಸಂಗೀತವನ್ನು ಎತ್ತರಕ್ಕೆ ಕೊಂಡೊಯ್ದಿದ್ದವು. ಸಂವೇದನಾಶೀಲ ಕವಿಗಳಾಗಿದ್ದ ಇವರು ಭಾವೈಕ್ಯದ ದ್ಯೋತಕವಾಗಿದ್ದರು. ಇವರ ನಿತ್ಯೋತ್ಸವ ಗೀತೆ ಕನ್ನಡಿಗರ ಮನೆಮಾತಾಗಿತ್ತು. ಇವರ ಬರಹಗಳು ಪಠ್ಯಗಳಾಗಿದ್ದು, ಶ್ರೇಷ್ಠ ಅನುವಾದಕರೂ ಆಗಿದ್ದರು. ಈ ಶತಮಾನ ಕಂಡ ಶ್ರೇಷ್ಠ ಕನ್ನಡದ ಕವಿ ನಿಸಾರ್ ಅಹಮದ್ ಅವರು ನಾಡೋಜ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದು ಕನ್ನಡ ಸಾಹಿತ್ಯಲೋಕದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಇವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಮತ್ತು ನಿಸಾರ್ ಅಹಮದ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಲೇಖಕರಾಗಿದ್ದು ಜನಪ್ರಿಯ ಕವಿಯಾಗಿ ಗುರುತಿಸಿಕೊಂಡಿದ್ದರು. ದೇವರು ಮೃತರ ಆತ್ಮಕ್ಕೆ ಶಾಂತಿಯನ್ನು ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದಯಪಾಲಿ ಎಂದು ದೇವರಲ್ಲಿ ಪಾರ್ಥಿಸುತ್ತೇನೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಸಂತಾಪ ಸೂಚಿದ್ದಾರೆ.