ಬೆಳಗಾವಿ: ಜಿಲ್ಲೆಯಲ್ಲಿ ಮದ್ಯದಂಗಡಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ ಪರಿಣಾಮ ಬೈಲಹೊಂಗಲದಲ್ಲಿ ಜನ ಮದ್ಯ ತೆಗೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರೂ, ಸಾಮಾಜಿಕ ಅಂತರ ಮರೆತಿದ್ದಾರೆ.
ಪಟ್ಟಣದಲ್ಲಿನ ಐದು ಎಂಎಸ್ಐಎಲ್ ಹಾಗೂ ವೈನ್ ಶಾಪ್ಗಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಹೆಚ್ಚಿನ ಜನರು ಸರತಿ ಸಾಲಿನಲ್ಲಿ ನಿಂತು ಮದ್ಯ ತೆಗೆದುಕೊಂಡು ಹೋಗಲು ಬರುತ್ತಿದ್ದು, ಪ್ರತಿಯೊಬ್ಬರೂ ಕೂಡ ಕಡಿಮೆ ಅಂದ್ರೂ ನಾಲ್ಕೈದು ಮದ್ಯದ ಬಾಟಲ್ಗಳನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ.
ಕೆಲವು ಕಡೆ ಮದ್ಯದಂಗಡಿಗಳಲ್ಲಿ ಹೆಸರು, ವಿಳಾಸ ಹಾಗೂ ಮೊಬೈಲ್ ಪೋನ್ ನಂಬರ್ ಪಡೆದು ಸಾಮಾಜಿಕ ಅಂತರ ಕಾಯ್ದುಕೊಂಡು ಸಾರಾಯಿ ನೀಡಿದ್ರೆ, ಇನ್ನು ಕೆಲ ಮದ್ಯದಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಜನರು ಮುಗಿಬೀಳುತ್ತಿದ್ದಾರೆ.
ಕನಿಷ್ಠ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮದ್ಯಕ್ಕೆ ಮುಗಿಬಿಳ್ಳುತ್ತಿರುವ ಜನರನ್ನು ನೋಡಿದರೆ ಒಂದು ಪ್ರಕರಣವಿಲ್ಲದ ಬೈಲಹೊಂಗಲದಲ್ಲಿ ಭೀತಿ ಎದುರಾಗಿದೆ.