ETV Bharat / state

ಸಾಮಾಜಿಕ ಅಂತರ ಮರೆತು ಕಬ್ಬೂರು ಗ್ರಾಮದ ಸಂತೆಯಲ್ಲಿ ಜನಜಂಗುಳಿ - ಚಿಕ್ಕೋಡಿ ಲೇಟೆಸ್ಟ್​ ನ್ಯೂಸ್

ಇಂದು ಕಬ್ಬೂರು ಗ್ರಾಮದಲ್ಲಿ ನಡೆಯುತ್ತಿರವ ಸಂತೆಯಲ್ಲಿ ಜನತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದಿವೆ.

People are gathering in market place in chikodi
ಸಾಮಾಜಿಕ ಅಂತರ ಮರೆತು ಸಂತೆಗೆ ಮುಗಿಬಿದ್ದ ಚಿಕ್ಕೋಡಿ ಜನತೆ
author img

By

Published : Apr 20, 2020, 9:56 AM IST

ಚಿಕ್ಕೋಡಿ: ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಲಾಕ್​ಡೌನ್​ ಆದೇಶ ಉಲ್ಲಂಘಿಸಿ ಸಂತೆಯಲ್ಲಿ ಜನರು ಗುಂಪು ಗುಂಪಾಗಿ ಸೇರಿದ್ದ ದೃಶ್ಯಗಳು ಕಂಡುಬಂದಿವೆ.

ಸಾಮಾಜಿಕ ಅಂತರ ಮರೆತು ಸಂತೆಯಲ್ಲಿ ಸೇರಿದ ಜನ

ಇಂದು ನಗರದಲ್ಲಿ ಸಂತೆ ನಡೆಯುತ್ತಿದ್ದು, ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಜನರು ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ದಿನ ಬಳಕೆ ತರಕಾರಿ ಖರೀದಿಸಲು ಕಬ್ಬೂರು, ಮೀರಾಪುರಹಟ್ಟಿ, ಕೆಂಚನಟ್ಟಿ, ಜೋಡಟ್ಟಿ, ಸೇರಿದಂತೆ ವಿವಿಧ ಗ್ರಾಮದ ಜನರು ಆಗಮಿಸಿದ್ದರು. ಕೊರೊನಾ ಭಯವಿಲ್ಲದೆ, ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ವ್ಯಾಪಾರದಲ್ಲಿ ಜನ ಬ್ಯುಸಿಯಿದ್ದರು.

ಕಳೆದ ಸೋಮವಾರವು ಇದೇ ರೀತಿಯಾಗಿ ಜನರು ಸಂತೆಗೆ ಸೇರಿದ್ದರು. ಈ ವಾರವೂ ಸಹ ಅದೇ ಪರಿಸ್ಥಿತಿ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.