ETV Bharat / state

ಬೆಳಗಾವಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ: ಶೇ.78.75 ರಷ್ಟು ಮತದಾನ ದಾಖಲು - ಇವಿಎಂ ಭದ್ರಪಡಿಸಿದ ಚುನಾವಣಾ ಸಿಬ್ಬಂದಿ

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತದಾರರು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದ್ದಾರೆ.

ಮತದಾನ
ಮತದಾನ
author img

By

Published : May 10, 2023, 10:22 PM IST

Updated : May 11, 2023, 6:18 AM IST

ರಕ್ಷಿತಾ ವೀರಕುಮಾರ ಘೋಡಗೇರಿ

ಬೆಳಗಾವಿ : ಬೆಂಗಳೂರು ಹೊರತು ಪಡಿಸಿದರೆ ರಾಜ್ಯದಲ್ಲೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತದಾರರು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದ್ದು, ಶಾಂತಿಯುತವಾಗಿ ಮತದಾನವಾಗಿದೆ.

ಬೆಳಗಾವಿ, ಚಿಕ್ಕೋಡಿ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 187 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 39,67,574 ಮತದಾರರನ್ನು ಹೊಂದಿರುವ ಜಿಲ್ಲೆಯಲ್ಲಿ 4,439 ಮತಟ್ಟೆಗಳನ್ನು ನಿರ್ಮಿಸಿ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿ ಪೂರ್ವ ಸಿದ್ಧತೆ ಕೈಗೊಳ್ಳಲಾಗಿತ್ತು.

ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಹಳಷ್ಟು ಸಂಖ್ಯೆಯಲ್ಲಿ ಮತದಾರರು ತಮ್ಮ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ನಂತರ ಮಧ್ಯಾಹ್ನ 12 ಗಂಟೆ ವರೆಗೂ ಮತಗಟ್ಟೆಗಳಲ್ಲಿ ಮತದಾರರ ದಟ್ಟಣೆ ಹೆಚ್ಚಿತ್ತು. ಮತ ಜಾಗೃತಿಗಾಗಿ ಮಾದರಿ ಮತಗಟ್ಟೆಗಳನ್ನು ರಚಿಸಿ ಸಿಂಗರಿಸಿದ್ದರಿಂದ ಮಾದರಿ ಮತಗಟ್ಟೆಗಳಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಹಿರಿಯ‌ ನಾಗರಿಕರು, ದಿವ್ಯಾಂಗರು ಕೂಡ ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದರು.

ಅಥಣಿ, ಕಾಗವಾಡ, ಕುಡಚಿ ಖಾನಾಪುರ, ಚನ್ನಮ್ಮನ ಕಿತ್ತೂರು, ರಾಮದುರ್ಗ ಕ್ಷೇತ್ರಗಳಲ್ಲಿ ಬೆಳಗ್ಗೆ 9 ಗಂಟೆಗೆ ದಾಖಲಾಗುವ ಮತದಾನ ಪ್ರಮಾಣದ 2018ರ ಚುನಾವಣೆ ದಾಖಲೆಯನ್ನು ಹಿಂದಿಕ್ಕಿದೆ. ನಿಪ್ಪಾಣಿ, ಚಿಕ್ಕೋಡಿ-ಸದಲಗಾ, ರಾಯಬಾಗ, ಹುಕ್ಕೇರಿ, ಅರಭಾವಿ, ಗೋಕಾಕ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆರಂಭದಲ್ಲಿನ ಮತದಾನ ಪ್ರಮಾಣ 2018ರ ಪ್ರಮಾಣಕ್ಕಿಂತ ಕಡಿಮೆ ದಾಖಲಾಗಿತ್ತು. ಒಟ್ಟಿನಲ್ಲಿ ಬೆಳಗ್ಗೆ ಕಂಡು ಬಂದ ಮತದಾರಲ್ಲಿನ ಉತ್ಸಾಹ ಮಧ್ಯಾಹ್ನ ಕಾಣದಿದ್ದರಿಂದ ಬಹುತೇಕ ಮತಗಟ್ಟೆಗಳು ಮತದಾರರು ಇಲ್ಲದೆ ಬಿಕೋ ಎನ್ನುತ್ತಿದ್ದವು. ಬಳಿಕ ಬಿಸಿಲು ತಗ್ಗಿದಂತೆ ಮತ್ತೆ ಮತದಾರರು ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.

ಅಬ್ಬರದ ಪ್ರಚಾರ, ರೋಡ್ ಶೋ, ಸಮಾವೇಶಗಳು ಜತೆಗೆ ಪ್ರತಿಸ್ಪರ್ಧಿಗಳ ವಾಗ್ಯುದ್ಧದಿಂದ ಜಿಲ್ಲೆಯ ಬಹುತೇಕ ಕ್ಷೇತ್ರಗಳು ಈ ಬಾರಿಯ ಚುನಾವಣೆಯಲ್ಲಿ ಕುತೂಹಲ ಹೆಚ್ಚಿಸಿದ್ದವು. ನಾಮಪತ್ರ ಸಲ್ಲಿಕೆಯ ಕೊನೆ ಗಳಿಗೆಯಲ್ಲಿ ನಡೆದ ಪಕ್ಷಾಂತರ, ಬಂಡಾಯ ಸ್ಪರ್ಧೆಗಳು ಚುನಾವಣಾ ಅಖಾಡ ರಂಗೇರುವಂತೆ ಮಾಡಿದ್ದವು. ಅಲ್ಲದೇ ಜಾತಿ ರಾಜಕಾರಣ ಮುನ್ನೆಲೆಗೆ ಬಂದಿದ್ದರಿಂದ ಕೆಲ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣದ ಮೇಲೆ ಪರಿಣಾಮ ಬೀರಿದ್ದು, ಆಯಾ ಸಮುದಾಯ, ಜಾತಿಯ ಮುಖಂಡರ ಅಬ್ಬರದ ಪ್ರಚಾರ ಜೋರಾಗಿತ್ತು.

ನಿಷೇದವಿದ್ದರೂ ಮತಗಟ್ಟೆಗಳ ಸಮೀಪವಿರುವ ಏಜೆಂಟ್ ಬೂತ್‌ಗಳಲ್ಲಿ ಪಕ್ಷದ ಕಾರ್ಯಕರ್ತರ ದಂಡು ಠಿಕಾಣಿ ಹೂಡಿದ್ದರಿಂದ ಮತದಾರರ ಮೇಲೆ ಪ್ರಭಾವ ಬೀರುತ್ತಿರುವುದು ಸಾಮಾನ್ಯವಾಗಿತ್ತು. ಬಹುತೇಕ ಕಡೆ ಮತದಾರರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಮತದಾರರನ್ನು ಮತಗಟ್ಟೆಗಳಿಗೆ ಕರೆ ತರಲು ಅಭ್ಯರ್ಥಿಗಳು ವಾಹನ ವ್ಯವಸ್ಥೆಯನ್ನು ಮಾಡಿದ್ದರು.

ಅಲ್ಲಲ್ಲಿ ತಾಂತ್ರಿಕ ದೋಷ: ರಾಮದುರ್ಗ ತಾಲೂಕಿನ ಕಿತ್ತೂರು, ಕೆ. ತಿಮ್ಮಾಪುರ ಹಾಗೂ ಚನ್ನಮ್ಮನ ಕಿತ್ತೂರು ಕ್ಷೇತ್ರ ವ್ಯಾಪ್ತಿಯ ಕಾದ್ರೊಳ್ಳಿ, ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಸೇರಿ ಇನ್ನಿತರ ಕಡೆ ತಾಂತ್ರಿಕ ದೋಷ ಉಂಟಾಗಿ ಕೆಲ‌ ಕಾಲ ಮತದಾನಕ್ಕೆ ಅಡೆತಡೆ ಕಂಡು ಬಂತು.

ಇನ್ನು ಬೆಳಗಾವಿ ಉತ್ತರ ಮತಕ್ಷೇತ್ರದ ಶಿವಾಜಿ ನಗರ ನಗರದ ಮತಗಟ್ಟೆಯಲ್ಲಿ ಮತಗಟ್ಟೆ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಮತದಾನಕ್ಕೆ ಬೇಕಾದ ಅಧಿಕೃತ ದಾಖಲಾತಿ ತೋರಿಸದ ಕಾರಣದಿಂದ ಅಧಿಕಾರಿಗಳು ಮತದಾನಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸ್ವತಃ ನಗರ ಸೇವಕನೂ ಆಗಿರುವ ವ್ಯಕ್ತಿ ಮತಗಟ್ಟೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಮರಳಿರುವುದು ಚರ್ಚೆಗೆ ಕಾರಣವಾಯಿತು.

ಮತದಾನಕ್ಕೆ ಯುವ ಮತದಾರರ ಉತ್ಸಾಹ: ಇದೇ ಮೊದಲ ಬಾರಿ ಮತದಾನಕ್ಕೆ ಅವಕಾಶ ಸಿಕ್ಕಿದ್ದ ಯುವ ಮತದಾರರು ಅತ್ಯಂತ ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. ಶಿವಾಜಿ ನಗರದ ಮತಗಟ್ಟೆಗೆ ಆಗಮಿಸಿದ್ದ ಯುವತಿ ರಕ್ಷಿತಾ ವೀರಕುಮಾರ ಘೋಡಗೇರಿ ಮಾತನಾಡಿ, ಮೊದಲ ಬಾರಿ ನಂದು ವೋಟಿಂಗ್ ಬಂದಿದೆ. ಮತದಾನ ಮಾಡುವುದು ಎಲ್ಲರ ಕರ್ತವ್ಯ. ನಾನು ವೋಟ್ ಮಾಡಿ ಒಳ್ಳೆಯ ಶಾಸಕರಿಗೆ ಆರಿಸಿದ್ದೇನೆ. ನನಗೆ ತುಂಬಾ ಖುಷಿಯಾಗುತ್ತಿದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಶೇ. 78.75ರಷ್ಟು ಮತದಾನ‌ ದಾಖಲಾಗಿದ್ದು, ಕ್ಷೇತ್ರವಾರು ಮತದಾನ ವಿವರ ಇಲ್ಲಿದೆ:

1 ನಿಪ್ಪಾಣಿ ವಿಧಾನಸಭೆ ಕ್ಷೇತ್ರ: ಶೇ.81.2

2 ಚಿಕ್ಕೋಡಿ ವಿಧಾನಸಭೆ ಕ್ಷೇತ್ರ: ಶೇ.81.47

3 ಅಥಣಿ ವಿಧಾನಸಭೆ ಕ್ಷೇತ್ರ: ಶೇ.80.23

4 ಕಾಗವಾಡ ವಿಧಾನಸಭೆ ಕ್ಷೇತ್ರ: ಶೇ.82.3

5 ಕುಡಚಿ ವಿಧಾನಸಭೆ ಕ್ಷೇತ್ರ: ಶೇ.77.08

6 ರಾಯಬಾಗ ವಿಧಾನಸಭೆ ಕ್ಷೇತ್ರ: ಶೇ.77.1

7 ಹುಕ್ಕೇರಿ ವಿಧಾನಸಭೆ ಕ್ಷೇತ್ರ: ಶೇ.80.3

8 ಅರಭಾವಿ ವಿಧಾನಸಭೆ ಕ್ಷೇತ್ರ: ಶೇ.76.32

9 ಗೋಕಾಕ್ ವಿಧಾನಸಭೆ ಕ್ಷೇತ್ರ: ಶೇ.76.13

10 ಯಮಕನಮರಡಿ ವಿಧಾನಸಭೆ ಕ್ಷೇತ್ರ: ಶೇ.82.24

11 ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರ: ಶೇ.59.53

12 ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರ: ಶೇ.63.4

13 ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರ: ಶೇ. 78.7

14 ಖಾನಾಪುರ ವಿಧಾನಸಭೆ ಕ್ಷೇತ್ರ: ಶೇ.74.23

15 ಕಿತ್ತೂರು ವಿಧಾನಸಭೆ ಕ್ಷೇತ್ರ: ಶೇ.77.1

16 ಬೈಲಹೊಂಗಲ ವಿಧಾನಸಭೆ ಕ್ಷೇತ್ರ: ಶೇ.76.16

17 ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರ: ಶೇ.80.29

18 ರಾಮದುರ್ಗ ವಿಧಾನಸಭೆ ಕ್ಷೇತ್ರ: ಶೇ.71.99

ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಮತದಾನ ಪ್ರಕ್ರಿಯೆ ಪೂರ್ಣವಾದ ಬಳಿಕ ಇವಿಎಂ ಭದ್ರಪಡಿಸಿದ ಚುನಾವಣಾ ಸಿಬ್ಬಂದಿ ಬೆಳಗಾವಿ ಆರ್ ಪಿ ಡಿ ಕಾಲೇಜಿನಲ್ಲಿ‌ ಸ್ಥಾಪಿಸಿರುವ ಸ್ಟ್ರಾಂಗ್ ರೂಂಗೆ ಮತಯಂತ್ರಗಳನ್ನು ಪೊಲೀಸ್ ಭದ್ರತೆಯೊಂದಿಗೆ ರವಾನಿಸಿದರು. ಮೇ.13 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: ವಿಜಯಪುರ: ಕೊನೆ ಗಳಿಗೆಯಲ್ಲಿ ಓಡೋಡಿ ಬಂದು ಮತ ಚಲಾಯಿಸಿದ ದಂಪತಿ..

Last Updated : May 11, 2023, 6:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.