ಚಿಕ್ಕೋಡಿ: ಗಣಪತಿ ನಿಮಜ್ಜನಕ್ಕೆ ತೆರಳಿದ್ದ ವ್ಯಕ್ತಿವೋರ್ವ ಕಾಲು ಜಾರಿಬಿದ್ದು ನೀರುಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.
ಗೋಕಾಕ್ ಫಾಲ್ಸ್ನಲ್ಲಿ ಚವಕಿ ನಿವಾಸಿ ಸಂಗಮೇಶ್ ಗಣಪತಿ ನಾಯಕ್ (42) ಎಂಬಾತ ಗಣಪತಿ ನಿಮಜ್ಜನೆಗೆ ತೆರಳಿದಾಗ ಕಾಲು ಜಾರಿಬಿದ್ದ ಪರಿಣಾಮ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ಈ ಘಟನೆ ಕುರಿತು ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.