ETV Bharat / state

ಚಿಕ್ಕೋಡಿಯಲ್ಲಿ ದುಡಿಯುವ ಕೈಗಳಿಗೆ ಆಸರೆಯಾದ ನರೇಗಾ

ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಿಕ್ಕೋಡಿಯ ಬಡ ಜನರಿಗೆ ನರೇಗಾ ನೆರವಾಗಿದೆ. ಹೊರ ರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ವ-ಗ್ರಾಮಗಳಿಗೆ ವಾಪಸ್‌ ಆಗಿದ್ದ ಕಾರ್ಮಿಕರ ಜೀವನಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಆಸರೆಯಾಗಿದೆ.

nrega helps migrant workers in chikkodi taluk
ಚಿಕ್ಕೋಡಿಯಲ್ಲಿ ದುಡಿಯುವ ಕೈಗಳಿಗೆ ಆಸರೆಯಾದ ನರೇಗಾ
author img

By

Published : Jun 10, 2020, 1:24 PM IST

ಚಿಕ್ಕೋಡಿ: ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟಲು ದೇಶದಲ್ಲಿ ಕಳೆದ ಮಾ. 22 ರಿಂದ ಲಾಕ್‍ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಕೆಲಸ ಇಲ್ಲದೇ ಪರದಾಡುತ್ತಿರುವ ಬಡ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಆಸರೆಯಾಗಿದೆ.

ಚಿಕ್ಕೋಡಿಯಲ್ಲಿ ದುಡಿಯುವ ಕೈಗಳಿಗೆ ಆಸರೆಯಾದ ನರೇಗಾ

ಚಿಕ್ಕೋಡಿ ತಾಲೂಕಿನ ನೂರಾರು ಜನರು ನೆರೆಯ ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶಕ್ಕೆ ಉದ್ಯೋಗ ಅರಸಿ ಹೋಗಿದ್ದರು. ಕೋವಿಡ್‌–19 ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿತ್ತು. ಎಲ್ಲ ಕೆಲಸ ಕಾರ್ಯಗಳು ಬಂದ್‌ ಆಗಿದ್ದವು. ಇದರಿಂದಾಗಿ ತಾಲೂಕಿನ ಕಾರ್ಮಿಕರು ವಾಪಸ್‌ ಸ್ವಗ್ರಾಮಗಳಿಗೆ ಮರಳಿದ್ದರು. ವಿವಿಧ ಹಂತಗಳಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದ ಅವಧಿಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಸರ್ಕಾರ ಆರಂಭಿಸಿತ್ತು. ಇದರಿಂದ ನೂರಾರು ಬಡ ಕಾರ್ಮಿಕರಿಗೆ ಅನಕೂಲವಾಗಿದೆ ಎನ್ನುತ್ತಾರೆ ಕಾರ್ಮಿಕರಾದ ಬಸವರಾಜ

ನರೇಗಾ ಯೋಜನೆಯಡಿ ದುಡಿಯುವ ಪುರುಷ ಹಾಗೂ ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದೆ. ಏಪ್ರಿಲ್‌ ನಂತರ ಭತ್ಯೆ ಹೆಚ್ಚಿಸಲಾಗಿದೆ. ಒಂದು ದಿನಕ್ಕೆ 275 ರೂಪಾಯಿ ವೇತನ ನೀಡಲಾಗುತ್ತಿದೆ. ಇದಕ್ಕೂ ಮೊದಲು 249 ನೀಡಲಾಗುತ್ತಿತ್ತು. ವಾರ್ಷಿಕವಾಗಿ ಕನಿಷ್ಠ 100 ದಿನಗಳ ಉದ್ಯೋಗ ನೀಡಲಾಗುತ್ತಿದೆ. ಲಾಕ್‍ಡೌನ್ ಕಾರಣದಿಂದಾಗಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಲ್ಲಿ ಕೆಲಸ ಮಾಡಲು ವಲಸೆ ಹೋದವರು ಹಾಗೂ ಗ್ರಾಮದಲ್ಲಿ ಕೆಲಸ ಇಲ್ಲದೇ ಇರುವ ಒಟ್ಟು 4,595 ಜನರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲಾಗಿದೆ.

ಈಗಾಗಲೇ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳ ಪಟ್ಟಿಯಲ್ಲಿ ತಾಲೂಕಿಗೆ ವಾಪಸ್ ಬಂದ ಕುಟುಂಬ ಸದಸ್ಯರ ಹೆಸರು ಇದ್ದರೂ, ಅಂತಹವರಿಗೂ ಉದ್ಯೋಗ ನೀಡಲು ಸೂಚನೆ ನೀಡಲಾಗಿದೆ ಎನ್ನುತ್ತಾರೆ ಗ್ರಾಮೀಣ ಉದ್ಯೋಗ ತಾಲೂಕು ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ

ಲಾಕ್‌ಡೌನ್‌ ನಿಂದಾಗಿ ಬಡಜನರ ಬದುಕು ಕಷ್ಟಕರವಾಗಿತ್ತು. ಉದ್ಯೋಗ ಅರಸಿ ಹೊರರಾಜ್ಯಗಳಿಗೆ ಹೋಗಿದ್ದ ಹಲವರು ವಾಪಸ್‌ ಜಿಲ್ಲೆಗೆ ಬಂದಿದ್ದಾರೆ. ಇವರಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡುವ ಮೂಲಕ ಅವರ ಆರ್ಥಿಕ ಸ್ಥಿತಿ ಸುಧಾರಿಸಲು ನರೇಗಾ ಯೋಜನೆ ಸಹಕಾರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.