ಬೆಳಗಾವಿ: ನಗರದ ಆರ್‌ಪಿಡಿ ಸರ್ಕಲ್‌ಗೆ ಅನಧಿಕೃತವಾಗಿ ಅಳವಡಿಸಲಾಗಿದ್ದ ಶ್ರೀ ರಾಜವೀರ ಮದಕರಿ ನಾಯಕ ವೃತ್ತ ಎಂದು ನಾಮಕರಣ ಮಾಡಿದ್ದ ಫಲಕವನ್ನು ಪೊಲೀಸರು ತೆರವುಗೊಳಿದ್ದು, ಯುವಕರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ಇಂದು ಮುಂಜಾನೆ ಆರ್‌ಪಿಡಿ ಸರ್ಕಲ್ನಲ್ಲಿ ಕೆಲ ವಾಲ್ಮೀಕಿ ಸಮುದಾಯದ ಯುವಕರು ಕನ್ನಡ, ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಬರೆದಿರುವ ನಾಮಫಲಕ ಅಳವಡಿಸಿದ್ದರು. ನಾಮಫಲಕದ ಮೇಲೆ ಶ್ರೀ ರಾಜವೀರ ಮದಕರಿ ನಾಯಕರ ವೃತ್ತ ಎಂದು ಬರೆಯಲಾಗಿತ್ತು.
ಪೊಲೀಸರು ನಾಮಫಲಕ ತೆರವುಗೊಳಿಸಿದ್ದರಿಂದ ವಾಲ್ಮೀಕಿ ಸಮುದಾಯದ ಯುವಕರು ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿ ಕೆಎಸ್ಆರ್ಪಿ ತುಕಡಿ, ಸಿಆರ್, ಓರ್ವ ಎಸಿಪಿ ಇಬ್ಬರು ಪಿಐ, ನಾಲ್ವರು ಪಿಎಸ್ಐಗಳು ಸೇರಿದಂತೆ 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಗಣೇಶ ಚತುರ್ಥಿ - ಮೊಹರಂ ವೇಳೆ ಶಾಂತಿ ಕಾಪಾಡಲು ಕರೆ: ಧಾರ್ಮಿಕ ಮುಖಂಡರ ಸಭೆ ನಡೆಸಲು ಕಮಲ್ ಪಂತ್ ಸೂಚನೆ