ETV Bharat / state

'ಅನನುಭವಿ ಹೆಣ್ಣು ಮಕ್ಕಳಿಂದ ಏನು ಸಾಧ್ಯ' ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಟೀಲ್ ವಾಗ್ದಾಳಿ - ಜಗದೀಶ್​ ಶೆಟ್ಟರ್​ ಲೇಟೆಸ್ಟ್ ನ್ಯೂಸ್

ಅನನುಭವಿ ಹೆಣ್ಣು ಮಕ್ಕಳಿಂದ ಏನು ಸಾಧ್ಯ ಅಂತಾ ಸಿದ್ದರಾಮಯ್ಯ ಕೇಳಿದ್ದಾರೆ. ಇವರಿಗೆ ಹೆಣ್ಣು ಮಕ್ಕಳ ಮೇಲಿರುವ ಗೌರವ ಜಗಜ್ಜಾಹೀರವಾಗಿದೆ. ಇದು ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನವಾಗಿದೆ ಎಂದು ಕಟೀಲ್​ ಮತ್ತು ಶೆಟ್ಟರ್​​ ಕಿಡಿ ಕಾರಿದರು.

nalin kumar kateel outrage on siddaramaiah statement
'ಅನಾನುಭವಿ ಹೆಣ್ಣು ಮಕ್ಕಳಿಂದ ಏನು ಸಾಧ್ಯ': ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ
author img

By

Published : Apr 11, 2021, 5:29 PM IST

ಬೆಳಗಾವಿ: ರಾಜೀವ್ ಗಾಂಧಿಯವರನ್ನು ಮದುವೆಯಾಗಿರುವ ಸೋನಿಯಾ ಗಾಂಧಿಗೆ ಕಾಂಗ್ರೆಸ್ ಪಕ್ಷ ನಡೆಸಲು ಸಾಧ್ಯವಿದ್ರೆ ಹಾಗೂ ಸೋನಿಯಾ ಗಾಂಧಿ ಹೊಟ್ಟೆಯಲ್ಲಿ ಹುಟ್ಟಿದ್ದೇನೆ ಅಂತಾ ರಾಷ್ಟ್ರ ‌ನಡೆಸಲು ಪ್ರಿಯಾಂಕಾ ಗಾಂಧಿ ರೆಡಿ ಇದ್ದಾಗ, ಮಂಗಳಾ ಅಂಗಡಿ ಅವರಿಬ್ಬರಿಗಿಂತ ಹೆಚ್ಚು ಅನುಭವಿ ಅಂತಾ ಸಿದ್ದರಾಮಯ್ಯನವ್ರು ತಿಳಿದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ವಿರುದ್ಧ ಕಟೀಲ್-ಶೆಟ್ಟರ್​​ ವಾಗ್ದಾಳಿ

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಸಭೆ ಮಾಡಿ ಎರಡು ಹೇಳಿಕೆ ಕೊಟ್ಟಿದ್ದಾರೆ. ಅನನುಭವಿ ಹೆಣ್ಣು ಮಕ್ಕಳಿಂದ ಏನು ಸಾಧ್ಯ ಅಂತಾ ಸಿದ್ದರಾಮಯ್ಯ ಕೇಳಿದ್ದಾರೆ. ಇವರಿಗೆ ಹೆಣ್ಣು ಮಕ್ಕಳ ಮೇಲಿರುವ ಗೌರವ ಜಗಜ್ಜಾಹೀರವಾಗಿದೆ. ಇದು ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನವಾಗಿದೆಯೆಂದು ಕಿಡಿ ಕಾರಿದರು.

ಪಕ್ಷದ ಒಳಜಗಳ ನಮಗೆ ಸಹಕಾರಿ!

ನಾನೇ‌ ಮುಂದಿನ ಸಿಎಂ ಎಂಬ ದುರಹಂಕಾರದಿಂದ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನು ಕಾಂಗ್ರೆಸ್​ನಿಂದ ಹೊರಹಾಕಲು ಎಲ್ಲಾ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿದ್ದಾರೆ. ಚುನಾವಣೆ ಫಲಿತಾಂಶ ಬಂದ ಮೇಲೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಇರಲ್ಲ. ನಾನಿಲ್ಲದಂತಹ ಕಾಂಗ್ರೆಸ್ ಪಕ್ಷ ಉಳಿಯಬಾರದು ಅಂತಾ ಸಿದ್ದರಾಮಯ್ಯ ಯೋಚನೆ ಮಾಡಿದ್ದಾರೆ ಎಂದರು. ರಾಜರಾಜೇಶ್ವರಿ, ಶಿರಾ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ-ಡಿಕೆಶಿ ಇಬ್ಬರೂ ನಮಗೆ ಉಪಕಾರ ಮಾಡಿದ್ದಾರೆ. ಈ ಬಾರಿಯೂ ಡಿಕೆಶಿ, ಸಿದ್ದರಾಮಯ್ಯರ ಪ್ರಯತ್ನದಿಂದ ನಾವು ಗೆಲ್ಲುತ್ತೇವೆ ಎಂದರು.

ಸಿದ್ದರಾಮಯ್ಯ-ಡಿಕೆಶಿ :

ಸತೀಶ್ ಜಾರಕಿಹೊಳಿ‌ಯನ್ನು ಮುಗಿಸಬೇಕೆಂದು ಸಿದ್ದರಾಮಯ್ಯ, ಡಿಕೆಶಿ ಒಗ್ಗಟ್ಟಾಗಿದ್ದಾರೆ .ಕಾಂಗ್ರೆಸ್​ನ ಇಬ್ಬರು ಮಹಾನಾಯಕರ ಪ್ರಯತ್ನ ಬಿಜೆಪಿಗೆ ಒಳ್ಳೆಯ ಫಲಿತಾಂಶ ತಂದುಕೊಡುತ್ತದೆ ಎಂದರು.

ಈ ಭಾಗದಲ್ಲಿ ಸುರೇಶ್ ಅಂಗಡಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಜಗತ್ತೇ ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿಕೊಳ್ಳುತ್ತಿದ್ದಾರೆ. ಕೋವಿಡ್ ವೇಳೆ‌ ಪ್ರಧಾನಿ ಮೋದಿ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ, ಪಾಂಡಿಚೇರಿಯಲ್ಲಿ ನಾವು ಗೆಲ್ಲುತ್ತೇವೆ. ತಮಿಳುನಾಡಿನಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡ್ತಿದೆ. ಕೇರಳದಲ್ಲಿ ಹತ್ತಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದರು.

ಚುನಾವಣೆಗೆ ನಾವು ಸಿದ್ಧ:

ಸುರೇಶ್ ಅಂಗಡಿ ನಿಧನದಿಂದ ಈ ಕ್ಷೇತ್ರದ ಚುನಾವಣೆ ಅನಿವಾರ್ಯವಾಗಿ ಬಂದಿದೆ. ಚುನಾವಣೆ ಪೂರ್ವತಯಾರಿ ಮಾಡಿಕೊಂಡಿದ್ದು ರಣರಂಗ ಸಜ್ಜಾಗಿದೆ. ಬಿಜೆಪಿ ಕಾರ್ಯಕರ್ತರು ಅಭೂತಪೂರ್ವ ಕೆಲಸ ಮಾಡ್ತಿದ್ದಾರೆ. ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಅಸಮಧಾನ ಇಲ್ಲ. ಪ್ರತಿ ಮನೆ ಮನೆಗಳಿಗೆ ಕಾರ್ಯಕರ್ತರು ಭೇಟಿ ಆಗ್ತಿದ್ದಾರೆ. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಈ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ಜಗದೀಶ್​ ಶೆಟ್ಟರ್ ಪ್ರತಿಕ್ರಿಯೆ:

ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್​, ಸಿದ್ದರಾಮಯ್ಯ ಮಾತನಾಡುವ ಭರದಲ್ಲಿ ಮಹಿಳೆಯರಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಮುಖವನ್ನು ತೋರಿಸುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಅನಾನುಭವಿ ಮಹಿಳೆ ಸಂಸತ್‌ಗೆ ಹೋಗಿ ಏನ್ ಮಾಡಲು ಸಾಧ್ಯ ಅಂತಾ ಪ್ರಶ್ನೆ ಕೇಳಿದ್ದಾರೆ. ಇಡೀ ದೇಶದ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಸೋನಿಯಾ ಗಾಂಧಿಗೆ ಏನ್ ಅನುಭವ ಇತ್ತು? ಯಾವುದೇ ಅನುಭವ ಇಲ್ಲದ ಇಂದಿರಾ ಗಾಂಧಿ ಪ್ರಧಾನಿ ಆಗಲು ಸಾಧ್ಯವಾಗಿದೆ. ಮಹಿಳೆಯರ ಸಾಮರ್ಥ್ಯ ಬಗ್ಗೆ ರಾಣಿ ಚನ್ನಮ್ಮ ನಾಡಿನಲ್ಲಿ ಈ ರೀತಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮುಳುಗುತ್ತಿರುವ ಕಾಂಗ್ರೆಸ್​ ಹಡಗಿಗೆ ಡಿಕೆಶಿ ಡ್ರೈವರ್, ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ: ಎಸ್.ಟಿ.ಸೋಮಶೇಖರ್​ ವ್ಯಂಗ್ಯ

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಏನು ಅನುಭವ ಇದೆ. ಸತೀಶ್ ಎರಡು ಬಾರಿ ಎಂಎಲ್‌ಸಿ, ಮೂರು ಬಾರಿ ಎಂಎಲ್‌ಎ ಆಗಿದ್ದಾರಲ್ಲ. ಕರ್ನಾಟಕ ವಿಧಾನಸಭೆಯಲ್ಲಿ ಒಂದು ದಿನವಾದರೂ ಧ್ವನಿ ಎತ್ತಿದ್ದಾರಾ? ಕರ್ನಾಟಕದ ವಿಧಾನಸಭೆಯಲ್ಲಿ ಧ್ವನಿ ಎತ್ತದವರು ಪಾರ್ಲಿಮೆಂಟ್‌ನಲ್ಲಿ ಏನು ಧ್ವನಿ ಎತ್ತುತ್ತಾರೆ? ಬೆಳಗಾವಿ ಅಭಿವೃದ್ಧಿ ಬಗ್ಗೆ ಸತೀಶ್ ಜಾರಕಿಹೊಳಿ‌ ಎಷ್ಟು ಧ್ವನಿ ಎತ್ತಿದ್ದಾರೆ? ಈ ಪ್ರಶ್ನೆ ಸಿದ್ದರಾಮಯ್ಯರನ್ನು ಕೇಳಿದ್ರೆ ಯಾರು ಅನಾನುಭವಿ ಅಂತಾ ಗೊತ್ತಾಗುತ್ತೆ. ಕಾಂಗ್ರೆಸ್‌ನವರು ಬರಿ ಬೊಗಳೆ ಬಿಡುವ ಕೆಲಸ ಮಾಡ್ತಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ. ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಮಹಿಳೆಯರ ಬಗ್ಗೆ ಅಪಮಾನ ಮಾಡಿದ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು‌ ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.