ETV Bharat / state

ಗೋಕಾಕ; ದಲಿತ ಮುಖಂಡ ಸಿದ್ದಪ್ಪ ಕನಮಡಿ ಕೊಲೆ ಪ್ರಕರಣ.. 9 ಆರೋಪಿಗಳ ಬಂಧನ - Murder of a young man nಎಡಸ

ಗೋಕಾಕ್​ನ ಆದಿ ಜಾಂಬವ ನಗರದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 30.48 ಲಕ್ಷ ರೂ ನಗದು, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

9 ಆರೋಪಿಗಳನ್ನು ಬಂಧಿಸಿದ ಪೊಲೀಸರು
9 ಆರೋಪಿಗಳನ್ನು ಬಂಧಿಸಿದ ಪೊಲೀಸರು
author img

By

Published : Sep 2, 2020, 11:41 PM IST

Updated : Sep 2, 2020, 11:47 PM IST

ಬೆಳಗಾವಿ: ಗೋಕಾಕ್​ನ ಆದಿ ಜಾಂಬವ ನಗರದ ಯುವಕನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಪೊಲೀಸರು ಗೋಕಾಕ ನಗರದ 9 ಯುವಕರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 30.48 ಲಕ್ಷ ರೂ. ನಗದು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

9 ಆರೋಪಿಗಳನ್ನು ಬಂಧಿಸಿದ ಪೊಲೀಸರು

ಜಿಲ್ಲೆಯ ಗೋಕಾಕ ಡಿವೈಎಸ್ಪಿ ಕಚೇರಿಯಲ್ಲಿ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕ​ ನಗರದಲ್ಲಿ‌ ಟೈಗರ್ ಗ್ಯಾಂಗ್ ಎಂಬ ತಂಡ ಕಟ್ಟಿಕೊಂಡ ಬಂಧಿತ ಆರೋಪಿಗಳು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ವೈಯಕ್ತಿಕ ಪ್ರತಿಷ್ಠೆಗಾಗಿ ಕೊಲೆ, ಡಕಾಯತಿ ಮತ್ತು ಇತರೆ ಅಪರಾಧ ಪ್ರಕರಣಗಳನ್ನು ಎಸಗುವ ಮೂಲಕ ಸಾರ್ವಜನಿಕರಲ್ಲಿ ಭಯವನ್ನು ಉಂಟುಮಾಡುತ್ತಿದ್ದರು. ಅವರಲ್ಲಿದ್ದ 30.48 ಲಕ್ಷ ನಗದು, 1 ಪಿಸ್ತೂಲ್, 20 ಜೀವಂತ ಗುಂಡುಗಳು, 4 ತಲವಾರ್​​, 3 ಜಂಬೆ, 22 ಸಿಮ್ ಕಾರ್ಡ್ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ‌ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಆರೋಪಿಗಳಿಂದ 30.48 ಲಕ್ಷ ರೂ ನಗದು ವಶ
ಆರೋಪಿಗಳಿಂದ 30.48 ಲಕ್ಷ ರೂ ನಗದು ವಶ

ಬಂಧಿತ 9 ಆರೋಪಿಗಳು:

ಗಂಗಾಧರ ಸಂಗ್ರಾಮ ಶಿಂಧೆ (26), ವಿನಾಯಕ ಬಸವರಾಜ ಹಡಗಿನಾಳ (22), ವಿಠಲ ಪರಶುರಾಮ ಪವಾರ (23), ವಿನೋದ ಚಂದ್ರು ಹೊಸಮನಿ (22), ಕಿರಣ ವಿಜಯ ದೊಡ್ಡಣ್ಣವರ (22), ರವಿ ಭೀಮಶಿ ಚೂನನ್ನವರ (22), ಕೇದಾರಿ ಬಸವಣ್ಣಿ ಜಾಧವ (36), ಸುನಿಲ ಮಲ್ಲಿಕಾರ್ಜುನ ಮುರಕಿಭಾವಿ (43) ಹಾಗೂ ಸಂತೋಷ ಪಾಂಡುರಂಗ ಚಿಗಡೊಳ್ಳಿ (21) ಎಲ್ಲರೂ ಗೋಕಾಕ​​ ನಗರದವರೇ ಆಗಿದ್ದಾರೆ.

ಪ್ರಕರಣದ ಹಿನ್ನೆಲೆ:

ಗೋಕಾಕ್ ನಗರದಲ್ಲಿ ಎರಡು ಕೋಮುಗಳ‌ ಮಧ್ಯೆ ಗಲಾಟೆ ನಡೆದಿತ್ತು. ಆ ಗಲಾಟೆಯಲ್ಲಿ ಟೈಗರ್ ಗ್ಯಾಂಗ್ ಹುಡುಗ ಇರುತ್ತಾನೆ. ಇದೇ‌ ಸಿಟ್ಟಿನಿಂದ ಟೈಗರ್ ಗ್ಯಾಂಗ್​ನ 9 ಜನರು ಸೇರಿಕೊಂಡು ಇನ್ನೊಂದು ಕೋಮಿನ ಮೇಲೆ 2020 ಮೇ 5ರಂದು ಗೋಕಾಕಿನ ಆದಿಜಾಂಬವ ನಗರದ ಹತ್ತಿರ ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುತ್ತಾರೆ. ದಲಿತ ಮುಖಂಡ ಸಿದ್ದಪ್ಪ ಅರ್ಜುನ ಕನಮಡ್ಡಿ ಎಂಬುವರನ್ನು ಕೊಲೆ ಮಾಡಲಾಗಿತ್ತು. ಹಲ್ಲೆಗೆ ಒಳಗಾದ ಸಿದ್ದಪ್ಪ ಕನಮಡ್ಡಿ ಅವರನ್ನು ಬೆಳಗಾವಿ‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಆತ 2020ರ ಮೇ 7 ರಂದು ಮೃತಪಟ್ಟಿದ್ದನು. ಕೊಲೆ‌ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ತೀವ್ರಗೊಳಿಸಿದ ಪೊಲೀಸರು ಆರೋಪಿಗಳ ಹುಡುಕಾಟ ಆರಂಭಿಸಿದ್ದರು. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಸಿಕೊಂಡು ತನಿಖೆಗೆ ಗೋಕಾಕ ಸಿಪಿಐ ತಂಡವೊಂದು ರಚನೆ ಮಾಡಿಕೊಂಡು ಪ್ರಕರಣ ಕೈಗೆತ್ತಿಕೊಂಡಿತ್ತು. ಪೊಲೀಸರು ಟೈಗರ್ ಗ್ಯಾಂಗಿನ 9 ಮಂದಿಯನ್ನು ಬಂಧಿಸಿದ್ದು, ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ಮಾರಕಾಸ್ತ್ರಗಳು ವಶ
ಆರೋಪಿಗಳಿಂದ ಮಾರಕಾಸ್ತ್ರಗಳು ವಶ

ಟೈಗರ್ ಗ್ಯಾಂಗ್:

ಆರೋಪಿಗಳು 2006 ರಿಂದ ಸಕ್ರಿಯವಾಗಿದ್ದು, ಟೈಗರ್ ಗ್ಯಾಂಗ್ ಎನ್ನುವ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ ಅಪರಾಧಗಳನ್ನು ಎಸಗುತ್ತಿದ್ದರು. ಅಲ್ಲದೇ ಯುವಕರ ಮೇಲೆ ಪ್ರಭಾವ ಬೀರಿ ತಮ್ಮ ಸಂಘಟನೆಯ ಅಪರಾಧಿಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ‌. ಆರೋಪಿತರು ಸಾರ್ವಜನಿಕರಲ್ಲಿ ಭಯ ಉಂಟು ಮಾಡುವುದು, ಸಾಕ್ಷಿದಾರರನ್ನು ಹೆದರಿಸುವುದು ಹಾಗೂ ಪುರಾವೆಗಳನ್ನು ನಾಶಪಡಿಸುತ್ತಿದ್ದರು. ಹೀಗಾಗಿ ಬಂಧಿತ ಆರೋಪಿಗಳ ವಿರುದ್ಧ ಗೋಕಾಕ​ ಶಹರ ಪೊಲೀಸ್ ಠಾಣೆಯಲ್ಲಿ ಕಲಂ 143,147,148,307,504, 506 ಸಹಕಲಂ 149 ಐಪಿಸಿ, ಎಸಿ/ಎಸ್ಟಿ ಪಿಎ ಕಲಂ 1989 ಹಾಗೂ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 ಕಲಂ 3 ಮತ್ತು 4 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ನಿಂಬರಗಿ ಹೇಳಿದರು.

Last Updated : Sep 2, 2020, 11:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.