ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದಲ್ಲಿ ನಡೆದ ಫೋಟೋಗ್ರಾಫರ್ ವಿಜಯ್ ಅವಲಕ್ಕಿ ಕೊಲೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಹೆಂಡತಿಯೇ ಗಂಡನನ್ನು ಕೊಲ್ಲಲು ಸುಪಾರಿ ಕೊಟ್ಟಿರುವ ಮಾಹಿತಿಯನ್ನ ಪೊಲೀಸರು ಬಯಲು ಮಾಡಿದ್ದಾರೆ.
ಕೊಲೆ ಆರೋಪಿ ರಾಮಚಂದ್ರ ಕಾಂಬ್ಳೆ ಜೊತೆ ವಿಜಯ್ ಹೆಂಡತಿ ಸುಭೋದಾ ಅಕ್ರಮ ಸಂಬಂಧ ಇಟ್ಟಕೊಂಡಿದ್ದಳು. ಅನೈತಿಕ ಸಂಬಂಧದ ವಿಷಯ ವಿಜಯ್ ಅವಲಕ್ಕಿಗೆ ತಿಳಿದ ಕಾರಣ, ನನ್ನ ಗಂಡನನ್ನು ಮುಗಿಸಿ ನನ್ನ ಬಳಿ ಬಾ ಎಂದು ರಾಮಚಂದ್ರ ಕಾಂಬ್ಳೆಗೆ ಸುಭೋದಾ ಹೇಳಿದ್ದಳಂತೆ. ಇದರಿಂದ ರಾಮಚಂದ್ರ ಕಾಂಬ್ಳೆ ತನ್ನ ಗೆಳೆಯ ನಾರಾಯಣ್ ಹಾಗೂ ಮೂವರು ಬಾಲಾಪರಾಧಿಗಳೊಂದಿಗೆ ಸೇರಿ ವಿಜಯ್ ಅವಲಕ್ಕಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ತತನಿಖೆ ಕೈಗೊಂಡಿದ್ದ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಂಟಿ ವಿಷಯವನ್ನು ಬಾಯ್ಬಿಟ್ಟಿದ್ದಾರೆ. ತಕ್ಷಣಕ್ಕೆ ನಂಬದ ಪೊಲೀಸರು ಸುಭೋದಾ ಬೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಆಗ ಸುಭೋದ ನಂಬರ್ನಿಂದ ರಾಮಚಂದ್ರ ಕಾಂಬ್ಳೆ ಮೊಬೈಲ್ಗೆ ನನ್ನ ಗಂಡನನ್ನು ಮುಗಿಸಿ ನನ್ನ ಬಳಿ ಬಾ ಎಂದು ಮೇಸೆಜ್ ಬಂದಿರುವುದು ಪತ್ತೆಯಾಗುತ್ತದೆ. ಈಗ ರಾಮಚಂದ್ರ ಕಾಂಬ್ಳೆ ಜೊತೆಗೆ ಆತನ ಸ್ನೇಹಿತರು ಹಾಗೂ ಕೊಲೆ ಸುಪಾರಿ ಕೊಟ್ಟಿದ್ದ ಆಂಟಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇತ್ತ ಕೊಲೆ ಮಾಡಿದ್ದ ರಾಮಚಂದ್ರ ಕುಟುಂಬಸ್ಥರಿಗೆ ಜಾಂಬೋಟಿ ಗ್ರಾಮ ಸೇರಿ ಐದು ಗ್ರಾಮದ ಜನರು ಬಹಿಷ್ಕಾರ ಹಾಕಿದ್ದಾರೆ. ಅಷ್ಟೇ ಅಲ್ಲ, ಆರೋಪಿ ರಾಮಚಂದ್ರ ಹೆಸರಿನಲ್ಲಿರುವ ಆಸ್ತಿಯನ್ನ ಮೃತನ ಮಗನ ಹೆಸರಿಗೆ ಮಾಡಲು ಗ್ರಾಮಸ್ಥರು ಚಿಂತನೆ ನಡೆಸಿದ್ದಾರೆ.