ETV Bharat / state

ನಿನಗೆ ವೋಟ್ ಹಾಕುವುದಿಲ್ಲ : ಅನಂತಕುಮಾರ್​ ಹೆಗಡೆ ವಿರುದ್ಧ ಮಹಿಳೆಯರ ಆಕ್ರೋಶ - ಸಂಸದ ಅನಂತಕುಮಾರ್ ಹೆಗಡೆ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಿರಾಶ್ರಿತರನ್ನು ಸಂಸದ ಅನಂತಕುಮಾರ್ ಹೆಗಡೆಗೆ ಭೇಟಿ ಮಾಡಿದ ವೇಳೆ ಮಹಿಳೆಯರು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಂತಕುಮಾರ್​ ಹೆಗಡೆ
author img

By

Published : Aug 12, 2019, 4:49 PM IST

ಬೆಳಗಾವಿ : ಪ್ರವಾಹದಿಂದ ನಲುಗಿ ಹೋಗಿರುವ ಜಿಲ್ಲೆಯ ನಿರಾಶ್ರಿತರನ್ನು ಸಂಸದ ಅನಂತಕುಮಾರ್ ಹೆಗಡೆಗೆ ಭೇಟಿ ಮಾಡಿದ ವೇಳೆ ಮಹಿಳೆಯರು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರಾಶ್ರಿತ ಕೇಂದ್ರಕ್ಕೆ ಅನಂತಕುಮಾರ್ ಹೆಗಡೆ ಭೇಟಿ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಸಂಸದ ಅನಂತಕುಮಾರ್ ಹೆಗಡೆ ನಿರಾಶ್ರಿತ ಕೇಂದ್ರಕ್ಕೆ‌ ತೆರಳಿದ್ದರು. ಈ ವೇಳೆ ಮಲಪ್ರಭಾ ನದಿಯ ನೆರೆಯಲ್ಲಿ ಮನೆಗಳನ್ನ ಕಳೆದುಕೊಂಡ‌ ಜನ ತಮಗೆ ಮನೆ ಕಟ್ಟಿಸಿಕೊಡಿ ಎಂದು ಕೇಳಿಕೊಂಡರು. ಇದಕ್ಕೆ ಸರಿಯಾಗಿ ಸ್ಪಂದಿಸದ ಅನಂತಕುಮಾರ್ ಹೆಗಡೆ ವಿರುದ್ಧ ಮಹಿಳೆಯರು, ನಿನಗೆ ವೋಟ್ ಹಾಕುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮಹಿಳೆಯರ ಮಾತು ಕೇಳಿಯೂ ಕೇಳಿಸದಂತೆ‌ ಸಂಸದ ಅನಂತಕುಮಾರ್ ಹೆಗಡೆ ಕುಳಿತಿದ್ದರು. ಕೆಲ ಸಮಯದ ಬಳಿಕ ಮತ್ತೊಂದು ಗಂಜಿ ಕೇಂದ್ರಕ್ಕೆ ಅನಂತಕುಮಾರ್​ ಹೆಗಡೆ ತೆರಳಿದರು.

Intro:ಅಮಿತ್ ಶಾ ಬೆಳಗಾವಿ ಭೇಟಿ : ಸಿಎಂ ಜೊತೆ ವೈಮಾನಿಕ ಸಮೀಕ್ಷೆ

ಬೆಳಗಾವಿ : ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ, ಗೃಹಮಂತ್ರಿ ಅಮಿತ್​ ಶಾ ಜತೆ ಸಿಎಂ ಯಡಿಯೂರಪ್ಪ ಮಳೆಯ ಪ್ರವಾಹದಿಂದ ಹಾನಿಯಾದ ಪ್ರದೇಶವನ್ನು ಪರಿಶೀಲನೆ ನಡೆಸಲಿದ್ದಾರೆ.

ಇಂದು ಬೆಳಗಾವಿಯ ಸಾಂಬ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದಿಳಿದು ಮಹಾಮಳೆಯಿಂದ ಜನರ ಜೀವನ ಅಸ್ತವ್ಯಸ್ಥವಾಗಿದ್ದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

Body:ಮಧ್ಯಾಹ್ನ 2:30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿಲಿರುವ ಕೇಂದ್ರಗೃಹ ಮಂತ್ರಿ ಅಮಿತ್​ ಶಾ ಅವರು ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಿಂದ 2:45 ಕ್ಕೆ ವೈಮಾನಿಕ ಸಮೀಕ್ಷೆಯನ್ನು ನಡೆಸಲಿದ್ದಾರೆ. ವೈಮಾನಿಕ ಸಮೀಕ್ಷೆ ಬಳಿಕ 4:30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮತ್ತೆ ಆಗಮಿಸಲಿದ್ದಾರೆ.
ಅಲ್ಲದೇ ಸಾಂಬ್ರಾ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಹೀಗಾಗಿ ಅವರ ಆಗಮನದ ಹಿನ್ನೆಲೆಯಲ್ಲಿ ನಾಳಿನ ಮಂಗಳೂರು ಪ್ರವಾಸವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು​ ರದ್ದುಗೊಳಿಸಿದ್ದಾರೆ.

Conclusion:ತದನಂತರ ಮಧ್ಯಾಹ್ನ 12ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕೆ ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ಸಭೆ. ಅಮಿತಾ ಶಾಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಸಾಥ್​ ನೀಡಲಿದ್ದಾರೆ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.