ಬೆಳಗಾವಿ: ಕಾಂಗ್ರೆಸ್‌ನವರಿಗೆ ಬೇಕಾದ್ರೆ ಚಡ್ಡಿ ಕಳಿಸುವೆ ಎಂಬ ಮಾಜಿ ಶಾಸಕ ಸಂಜಯ ಪಾಟೀಲ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ತಿರುಗೇಟು ನೀಡಿದ್ದಾರೆ. ಮೊದಲು ಸಂಜಯ ಪಾಟೀಲಗೆ ಚಡ್ಡಿ ಸರಿಯಾಗಿ ಇಟ್ಕೊಳೋಕೆ ಹೇಳಿ ಎಂದು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವತಿಯಿಂದ ಚಡ್ಡಿ ಸುಡುವ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಠ್ಯಪುಸ್ತಕ ಕೇಸರೀಕರಣ, RSS ಸಿದ್ಧಾಂತ ಹೇರುವುದಕ್ಕೆ ನಮ್ಮ ವಿರೋಧವಿದೆ. ಪರಿಷ್ಕೃತ ಪಠ್ಯ ಪುಸ್ತಕ ವಿರೋಧಿಸಿ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಯುವಕರ ವಿರುದ್ಧ ಜಾಮೀನುರಹಿತ ಕೇಸ್ ಹಾಕಿದ್ದಾರೆ. ಭವಿಷ್ಯದಲ್ಲಿ ನಾಯಕರಾಗುವ ಯುವಕರ ಜೈಲಿಗಟ್ಟಿದ್ದಿರಲ್ಲಾ? ಯಾವ ರೀತಿ ವಿದ್ಯಾರ್ಥಿ ಸಮುದಾಯಕ್ಕೆ ಸಂದೇಶ ನೀಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆರ್ಟಿಕಲ್ 91(1/C)ಯಲ್ಲಿ ಸರ್ಕಾರದ ಕಾರ್ಯವೈಖರಿ ಪ್ರಶ್ನಿಸಲು ಅವಕಾಶ ಇದೆ. ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗಿದೆ. ಪ್ರಜಾತಂತ್ರ ವ್ಯವಸ್ಥೆ ಉಳಿದಿದೆಯೇ? ಇಲ್ವೋ ಎಂಬ ಪ್ರಶ್ನೆ ಮೂಡಿದೆ. ಬಿಜೆಪಿಯವರು ಮನೆಮನೆಗೆ ವಿದ್ಯಾರ್ಥಿಗಳನ್ನು ಕಳುಹಿಸಿ ಹಳೇ ಚಡ್ಡಿ ಸಂಗ್ರಹಿಸಿ ಅವಮಾನ ಮಾಡ್ತಿದ್ದಾರೆ. ಅದಕ್ಕೆ ನಾವು ನಾವು ಚಡ್ಡಿ ಸುಡುವ ಅಭಿಯಾನ ಆರಂಭಿಸಿದ್ದೇವೆ. ಇದನ್ನು ಖಂಡಿಸಿ ಚಡ್ಡಿಗಳನ್ನು ಸುಡಲೇಬೇಕಾಗುತ್ತದೆ ಎಂದರು.
ಓದಿ: ಪ್ರವಾದಿ ವಿರುದ್ದ ಹೇಳಿಕೆಗೆ ಭಾರತವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸರ್ಕಾರವೇ ಕ್ಷಮೆ ಕೇಳಬೇಕು: ಜಿ ಪರಮೇಶ್ವರ್