ಬೆಳಗಾವಿ: ಲೋಕಸಭಾ ಉಪಚುನಾವಣೆಯಲ್ಲಿ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡದಿದ್ದರೆ ನನ್ನ ತಮ್ಮ ರಮೇಶ್ಗೆ ಟಿಕೆಟ್ ನೀಡಿ ಎಂದು ಸಚಿವ ಉಮೇಶ್ ಕತ್ತಿ ಬೇಡಿಕೆ ಇಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಹಿಂದೊಮ್ಮೆ ಚಿಕ್ಕೋಡಿ ಲೋಕಸಭೆಯಿಂದ ಗೆದ್ದು ರಮೇಶ್ ಕತ್ತಿ ಕೆಲಸ ಮಾಡಿ ತೋರಿಸಿದ್ದಾರೆ. ಬಳಿಕ ಟಿಕೆಟ್ ವಂಚಿತರಾಗಿ ಮಾಜಿ ಸಂಸದರಾಗಿದ್ದಾರೆ. ದಿ. ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ ರಮೇಶ್ ಕತ್ತಿಗೆ ಟಿಕೆಟ್ ಕೇಳಲ್ಲ ಎಂದರು.
ನಾನು ಕರ್ನಾಟಕ ರಾಜ್ಯದ ಮಂತ್ರಿ. 30 ಜಿಲ್ಲೆಗಳಲ್ಲಿ ಯಾವುದಾದರೂ ಉಸ್ತುವಾರಿ ಕೊಟ್ಟರೆ ನಿಭಾಯಿಸುವೆ. ಕೊಡದಿದ್ರೆ ನನ್ನ ಖಾತೆಯನ್ನು ನಿಭಾಯಿಸುತ್ತೇನೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ವಿಶೇಷ ಜವಾಬ್ದಾರಿ. ಯಡಿಯೂರಪ್ಪ ನೇತೃತ್ವದ ಸರ್ಕಾರ ಒಳ್ಳೆಯ ಆಡಳಿತ ಕೊಡುತ್ತಿದೆ ಎಂದ ಉಮೇಶ್ ಕತ್ತಿ, ಸಿಡಿ ಬಾಂಬ್ ಸಿಡಿಸಿದ್ದ ಬಸನಗೌಡ ಪಾಟೀಲ ಯತ್ನಾಳ್ ತಣ್ಣಗಾದ ವಿಚಾರಕ್ಕೆ ಯತ್ನಾಳರನ್ನೇ ಕೇಳೋದು ಒಳ್ಳೆಯದು ಎಂದರು.