ETV Bharat / state

ಜಾತಿಗಣತಿ ವರದಿ ಬಂದ ಮೇಲೆ ಸರಿಯಿಲ್ಲ ಎಂದು ಹೇಳಲಿ, ಸಮೀಕ್ಷೆ ನೋಡದೇ ಟೀಕೆ ಸರಿಯಲ್ಲ: ಸಚಿವ ಪರಮೇಶ್ವರ್ - parameshwar talks caste census

ಜಾತಿಗಣತಿ ವರದಿ ಬರುವ ಮುನ್ನವೇ ಸರಿಯಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಸಚಿವ ಜಿ.ಪರಮೇಶ್ವರ್​ ಹೇಳಿದ್ದಾರೆ.

ಜಾತಿಗಣತಿ ವರದಿ ನೋಡದೇ ಟೀಕೆ ಸರಿಯಲ್ಲ
ಜಾತಿಗಣತಿ ವರದಿ ನೋಡದೇ ಟೀಕೆ ಸರಿಯಲ್ಲ
author img

By ETV Bharat Karnataka Team

Published : Dec 13, 2023, 2:33 PM IST

ಬೆಳಗಾವಿ: ಜಾತಿಗಣತಿ ವರದಿ ಆಚೆ ಬಂದ ಮೇಲೆ ಸರಿಯಾಗಿಲ್ಲ ಅಂತ ಹೇಳಲಿ. ಸಮೀಕ್ಷೆಯನ್ನೇ ನೋಡದೇ ಅದರ ಟೀಕೆ ಮಾಡುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾವ ಸಮುದಾಯ ಹೆಚ್ಚಿದೆ, ಯಾವ ಸಮುದಾಯ ಕಡಿಮೆ ಇದೆ, ಯಾವ ಸಮುದಾಯ ಹಿಂದುಳಿದಿದೆ ಎಂದು ತಿಳಿದುಕೊಳ್ಳಲು 168 ಕೋಟಿ ನೀಡಿ ಖರ್ಚು ಮಾಡಿ ಜಾತಿ ಗಣತಿ ವರದಿ ಸಿದ್ಧ ಪಡಿಸಲಾಗಿದೆ. ವರದಿಯನ್ನು ಸರ್ಕಾರಕ್ಕೆ ಕೊಡಬೇಕು. ವರದಿ ಸಲ್ಲಿಕೆಯಾದ ಬಳಿಕ ಅದರಲ್ಲಿ ಏನಿದೆ ಎಂಬುದು ಗೊತ್ತಾಗುತ್ತೆ. ವರದಿ ಆಧರಿಸಿ ನಾವು ಕಾರ್ಯಕ್ರಮ ರೂಪಿಸಬೇಕಾಗುತ್ತದೆ ಎಂದರು.

ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ರಾಜೇಂದ್ರ ಸಾಚಾರ್ ಕಮಿಷನ್ ಮಾಡಿ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಸಮೀಕ್ಷೆ ಮಾಡಲಾಗಿತ್ತು. ಅದರ ಆಧಾರದಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು. ಅದೇ ಪ್ರಕಾರ ರಾಜ್ಯದಲ್ಲಿ ಸಮೀಕ್ಷೆ ಮಾಡಿ ಯಾವ ಸಮುದಾಯ ಹಿಂದುಳಿದಿದೆ?. ಯಾವ ಸಮುದಾಯ ಶೋಷಿತ ವರ್ಗಕ್ಕೆ ಸೇರುತ್ತದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ. ಆ ಸಮೀಕ್ಷೆ ಬೇಡ ಅಂದರೆ ಅದಕ್ಕೆ ಅರ್ಥ ಇಲ್ಲ. ವರದಿ ಸರಿಯಾಗಿ ಸರಿ ಇಲ್ಲ ಎಂದು ಯಾರು ಹೇಳಿದ್ದಾರೆ? ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತರ ಓಲೈಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್​, ನಮ್ಮ ಸರ್ಕಾರ ರೈತರ ಪರ, ಕಾರ್ಮಿಕರ, ವಿದ್ಯಾರ್ಥಿಗಳ ಪರವಾಗಿದೆ. ಮುಸ್ಲಿಂಮರಿಗೆ ಹಣ ಕೊಡುತ್ತೇವೆ ಎಂದರೆ ಅವರು ಸಮಾಜದ ಭಾಗವಲ್ಲವಾ?. 16% ಮುಸ್ಲಿಮರು ಇದ್ದಾರೆ. ಅವರು ಕರ್ನಾಟಕದ ಜನ ಸಮುದಾಯವಲ್ಲವಾ?. ಅದೇ ಪ್ರಕಾರ ಎಸ್ಸಿ ​ಎಸ್ಟಿ ಅಭಿವೃದ್ಧಿ ಮಾಡಬಾರದಾ?. ಅದರ ವಿರುದ್ಧ ಬಿಜೆಪಿಯವರು ಇದ್ದಾರೆ ಅನ್ನೋದನ್ನು ತೋರಿಸುತ್ತಿದ್ದಾರೆ. ಒಡೆದು ಆಳುವ ನೀತಿ ನಮ್ಮದಲ್ಲ. ಬಿಜೆಪಿಗೆ ಸರ್ವಜನಾಂಗದ ಶಾಂತಿಯ ತೋಟ ಎಂಬ ಬಗ್ಗೆ ನಂಬಿಕೆ ಇಲ್ಲ ಎಂದರು.

ಬಿಜೆಪಿಗೆ ರಾಜ್ಯದ ಹಿತ ಬೇಕಾಗಿಲ್ಲ: ಬಿಜೆಪಿಯವರು ಇಲ್ಲ‌ಸಲ್ಲದ ಆರೋಪ‌ ಮಾಡುತ್ತಿದ್ದಾರೆ. ಸದನವನ್ನು ಸರಿಯಾಗಿ ನಡೆಸಲು ಬಿಡುತ್ತಿಲ್ಲ. ನಾವು ಹೇಳಿದಂತೆ ಸರ್ಕಾರ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿರುವುದು ಅವರಿಗೆ ಸಮಾಧಾನ ತರುತ್ತಿಲ್ಲ. ಅಧಿವೇಶನ ನಡೆಯುವಂತಿರುವುದು ಜನರ ಸಮಸ್ಯೆ ಚರ್ಚೆ ಮಾಡಲು. ಸರ್ಕಾರ ಏನು ಕಾರ್ಯಕ್ರಮ ಮಾಡಿದೆ ಅದಕ್ಕೆ ಸಲಹೆ ಸೂಚನೆ ಕೊಡಬೇಕು.

ಸದನ ಒಳಗಡೆ ಚರ್ಚಿಸುವುದನ್ನು ಬಿಟ್ಟು ಸದನದ ಹೊರಗಡೆ ಪ್ರತಿಭಟನೆ ಮಾಡುತ್ತೇವೆ ಎಂಬುದು ರಾಜಕೀಯ ದುರುದ್ದೇಶವಾಗಿದೆ. ಅವರಿಗೆ ರಾಜ್ಯದ ಹಿತ, ಉ.ಕರ್ನಾಟಕದ ಸಮಸ್ಯೆ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

ಇನ್ಸ್​ಪೆಕ್ಟರ್ ಅಮಾನತಲ್ಲ ವಜಾ ಮಾಡುತ್ತೇವೆ: 44 ಇನ್ಸ್​ಪೆಕ್ಟರ್ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ ಯಾರೇ ಶಿಫಾರಸು ಮಾಡಿದರೂ ಸಾರ್ವಜನಿಕರ ಹಿತಾಸಕ್ತಿಯಿಂದ ವರ್ಗಾವಣೆ ಮಾಡುತ್ತೇವೆ. ಅವರು ವರ್ಗಾವಣೆಗೊಂಡ ಸ್ಥಳಕ್ಕೆ ಹೋಗಿ ವರದಿ ಮಾಡದೇ ಇದ್ದರೆ ಅಶಿಸ್ತು ಪ್ರದರ್ಶಿಸಿದರೆ ಏನು ಮಾಡಬೇಕು?. ಅಮಾನತು ಮಾಡದೇ ಏನು ಮಾಡಬೇಕು? ಎಂದು ಪ್ರಶ್ನಿಸಿದರು. ಈಗಾಗಲೇ ನೋಟಿಸ್ ಕೊಟ್ಟಿದ್ದೇವೆ. ಅಮಾನತು ಮಾಡುತ್ತೇವೆ. ತಪ್ಪು ಎಸಗಿದ್ದರೆ ವಜಾ ಕೂಡ ಮಾಡುತ್ತೇವೆ. ಕಷ್ಟಗಳಿದ್ದರೆ ಹಿರಿಯ ಅಧಿಕಾರಿಗಳಿಗೆ ಹೇಳಬೇಕು. ಒತ್ತಾಯಕ್ಕೆ ಯಾರನ್ನೂ ವರ್ಗಾವಣೆ ಮಾಡಲ್ಲ. ನಿಯಮದ ಪ್ರಕಾರ ವರ್ಗಾವಣೆ ಮಾಡಲಾಗುತ್ತೆ ಎಂದರು.

ಇದನ್ನೂ ಓದಿ: ಯುವನಿಧಿ ನೋಂದಣಿ ಪ್ರಕ್ರಿಯೆ ಡಿಸೆಂಬರ್​ 21ಕ್ಕೆ ಆರಂಭವಾಗಲ್ಲ: ಸಚಿವ ಶರಣಪ್ರಕಾಶ್ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.