ಚಿಕ್ಕೋಡಿ : ಬೆಳಗಾವಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಗಾಂಜಾ ಬೇಟೆ ಮುಂದುವರಿದಿದ್ದು, ನಿಪ್ಪಾಣಿ ಪೋಲಿಸರು ನಿಪ್ಪಾಣಿ ತಾಲೂಕಿನ ಕೋಡ್ನಿ ಗ್ರಾಮದಲ್ಲಿ 430 ಗ್ರಾಂ ಗಾಂಜಾ ವಶಕ್ಕೆ ಪಡೆದು ನಾಲ್ಕು ಜನರನ್ನು ಬಂಧಿಸಿದ್ದಾರೆ.
ನಿಪ್ಪಾಣಿ ತಾಲೂಕಿನ ಜಿಷಾನ್ ಪಠಾಣ್ (20), ಅಯಾನ್ ಪಠಾಣ್ (19), ಹರ್ಷವರ್ಧನ್ ಪೋಳ (21), ಆದರ್ಶ ಮಾನೆ (21) ಬಂಧಿತ ಆರೋಪಿಗಳು. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲವು ದಿನಗಳಿಂದ ಜಿಲ್ಲೆಯಲ್ಲಿ ಗಾಂಜಾ ಮಾರುವವರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ಪಣ ತೊಟ್ಟಿದೆ.