ETV Bharat / state

ಮಾಸ್ಕ್ ಬದಲು ಮುಖಕ್ಕೆ ಕರವಸ್ತ್ರ: ಬೈಕ್ ಸವಾರನಿಂದ ಹಣ ಪೀಕಿದ ಪೊಲೀಸ್​

ಕೊರೊನಾ ನಿಯಂತ್ರಣಕ್ಕಾಗಿ ಬೆಳಗಾವಿಯ ಗೋಕಾಕಿನಲ್ಲಿ ಲಾಕ್​ಡೌನ್​ ವಿಧಿಸಲಾಗಿದ್ದು, ಈ ವೇಳೆ ಬೈಕ್​ನಲ್ಲಿ ಯುವಕನೋರ್ವ ಮುಖಕ್ಕೆ ಮಾಸ್ಕ್​ ಬದಲು ಕರವಸ್ತ್ರ ಕಟ್ಟಿಕೊಂಡು ಬಂದಿದ್ದಕ್ಕೆ ಪೊಲೀಸ್ ಸಿಬ್ಬಂದಿ​ ಆತನಿಗೆ ಬೆದರಿಕೆ ಹಾಕಿದ್ದು, ಹಣ ವಸೂಲಿ ಮಾಡಿ ಜೇಬಿಗಿಳಿಸಿದ್ದಾರೆ.

man wearing a handkerchief
ಮಾಸ್ಕ್​ ಬದಲು ಕರವಸ್ತ್ರ ಕಟ್ಟಿಕೊಂಡಿದ್ದಕ್ಕೆ ತಡೆದ ಪೊಲೀಸ್​
author img

By

Published : Jul 15, 2020, 8:46 PM IST

ಬೆಳಗಾವಿ: ಕೊರೊನಾ ನಿಯಂತ್ರಣಕ್ಕಾಗಿ ಕರದಂಟು ನಗರಿ ಗೋಕಾಕಿನಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಮಧ್ಯೆ ಗೋಕಾಕ್​ ಪೊಲೀಸರು ಲಾಕ್‌ಡೌನ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿಗಿಳಿದರಾ? ಎಂಬ ಅನುಮಾನ ಮೂಡತೊಡಗಿವೆ.

ಮಾಸ್ಕ್​ ಬದಲು ಕರವಸ್ತ್ರ ಕಟ್ಟಿಕೊಂಡಿದ್ದಕ್ಕೆ ತಡೆದ ಪೊಲೀಸ್​

ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು‌ ಬೈಕ್​​​ನಲ್ಲಿ ಬಂದ ಯುವಕನಿಂದ ಪೊಲೀಸ್​​ ಕಾನ್ಸ್‌ಟೇಬಲ್​​ ಹಣವಸೂಲಿ ಮಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಗೋಕಾಕಿನ ಬಸವೇಶ್ವರ ವೃತ್ತದಲ್ಲಿ ಲಾಕ್‌ಡೌನ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್‌ ಟೇಬಲ್​​, ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಬೈಕ್ ಮೇಲೆ ಬಂದ ಯುವಕನನ್ನು ತಡೆದು, ಮಾಸ್ಕ್ ಏಕೆ ಹಾಕಿಲ್ಲ ಎಂದು ತರಾಟೆಗೆ ತೆಗೆದುಕೊಂಡು ಲಾಠಿ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.