ಬೆಳಗಾವಿ: ಕಳೆದ ವರ್ಷ ಮೆಡಿಕಲ್ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ಬಲಿ ಪಡೆದಿದ್ದ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಈ ವರ್ಷವೂ ಮತ್ತೊಂದು ಅವಾಂತರ ಸೃಷ್ಟಿಸಿದೆ.
ಬೈಕ್ನಲ್ಲಿ ಹೊರಟಿದ್ದ ಮಾವ, ಸೊಸೆಗೆ ಮಾಂಜಾ ದಾರ ತಗುಲಿ ಗಂಭೀರವಾಗಿ ಗಾಯಗಳಾದ ಘಟನೆ ಗಾಂಧಿನಗರದಲ್ಲಿ ನಡೆದಿದೆ. 10 ವರ್ಷದ ಮಂಗಳ ಹಾಗೂ ಸುರೇಶ ಎಂಬವರು ಗಾಯಾಳುಗಳಾಗಿದ್ದಾರೆ. ಸದ್ಯ ಇಬ್ಬರೂ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಕ್ನಲ್ಲಿ ತೆರಳುತ್ತಿರುವ ವೇಳೆ ಅಚಾನಕ್ ಆಗಿ ಮಾಂಜಾ ದಾರ ಎದುರಾಗಿದ್ದು, ತಪ್ಪಿಸಿಕೊಳ್ಳಲು ಸುರೇಶ ಪ್ರಯತ್ನಿಸಿದರೂ ಸಾಧ್ಯವಾಗದೇ ಮುಖಕ್ಕೆ ದಾರ ಬಡಿದಿದೆ. ಬಳಿಕ ವಾಹನ ಸ್ಕಿಡ್ ಆಗಿ ಬಿದ್ದಿದ್ದರಿಂದ ಬಾಲಕಿ ಗಾಯಗೊಂಡಿದ್ದಾಳೆ ಎಂಬ ಮಾಹಿತಿ ದೊರೆತಿದೆ.