ETV Bharat / state

ಮುಂದಿನ‌ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ‌ ವಿರುದ್ಧ ಸ್ಪರ್ಧಿಸಲು ಸಿದ್ಧ: ಸಂಚಲನ ಸೃಷ್ಟಿಸಿದ ಹೆಬ್ಬಾಳ್ಕರ್ - lakshmi hebbalkar latest media reaction

ಸಚಿವ ರಮೇಶ್ ಜಾರಕಿಹೊಳಿ‌, ಗ್ರಾಮೀಣ ಕ್ಷೇತ್ರದಲ್ಲಿ ಟಾರ್ಗೆಟ್ ಮಾಡ್ತಿದ್ದಾರೆ, ಮಾಡಲಿ. ನಾನೂ ಇನ್ಮುಂದೆ ರಮೇಶ್ ಪ್ರತಿನಿಧಿಸುವ ಗೋಕಾಕ್​ ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದ್ರೆ ಮುಂದಿನ ಚುನಾವಣೆಯಲ್ಲಿ ಗೋಕಾಕ್​ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನೇ ಆಗುತ್ತೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.

election
ಶಾಸಕಿ ಹೆಬ್ಬಾಳ್ಕರ್ ಸಂಚಲನದ ಹೇಳಿಕೆ
author img

By

Published : Feb 12, 2021, 2:15 PM IST

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನೇ ಸಚಿವ ರಮೇಶ್ ಜಾರಕಿಹೊಳಿ‌ ಟಾರ್ಗೆಟ್ ಮಾಡುತ್ತಿರುವ ವಿಚಾರಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.

ಶಾಸಕಿ ಹೆಬ್ಬಾಳ್ಕರ್ ಸಂಚಲನದ ಹೇಳಿಕೆ

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಮೇಶ್ ಜಾರಕಿಹೊಳಿ‌, ಗ್ರಾಮೀಣ ಕ್ಷೇತ್ರದಲ್ಲಿ ಟಾರ್ಗೆಟ್ ಮಾಡ್ತಿದ್ದಾರೆ, ಮಾಡಲಿ. ನಾನೂ ಇನ್ಮುಂದೆ ರಮೇಶ್ ಪ್ರತಿನಿಧಿಸುವ ಗೋಕಾಕ್​ ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದ್ರೆ ಮುಂದಿನ ಚುನಾವಣೆಯಲ್ಲಿ ಗೋಕಾಕ್​ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನೇ ಆಗುತ್ತೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಂಚಲನ ಮೂಡಿಸುವಂತ ಹೇಳಿಕೆ ನೀಡಿದರು.

ರಮೇಶ್ ಜಾರಕಿಹೊಳಿ‌ ಆರೋಪಕ್ಕೆ ನಾನೇನೂ ಮೌನವಾಗಿಲ್ಲ. ಕ್ಷೇತ್ರದ ಜನರಿಂದಲೇ ಅವರಿಗೆ ತಕ್ಕ ಉತ್ತರ ಕೊಡಬೇಕು ಅಂದುಕೊಂಡಿದ್ದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನರೇ ಅವರಿಗೆ ತಕ್ಕ ಉತ್ತರ ಕೊಡಲಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಭಾನುವಾರ ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಲ್ಕೈದು ರಾಜ್ಯಗಳಲ್ಲಿ ಶಾಸಕರನ್ನು ಹೈಜಾಕ್ ಮಾಡಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ನು ನನ್ನ ಕ್ಷೇತ್ರದ ಗ್ರಾಪಂ ಸದಸ್ಯರ ಹೈಜಾಕ್ ಯಾವ ಲೆಕ್ಕ ಬಿಡಿ. ಅವರು ಪ್ರಜಾಪ್ರಭುತ್ವ ಮೇಲೆಯೇ ವಿಶ್ವಾಸ ಕಳೆದುಕೊಂಡಿದ್ದಾರೆ. ಸರ್ಕಾರ ಅವರದಿದೆ, ಅಧಿಕಾರಿಗಳು ಅವರವರೇ ಇದ್ದಾರೆ. ಏನಾದರೂ ಮಾಡಲಿ ಬಿಡಿ, ಎದುರಿಸಲು ನಾನು ಸಮರ್ಥ ಇದ್ದೇನೆ ಎಂದು ಶಾಸಕಿ ಹೆಬ್ಬಾಳ್ಕರ್ ಹೇಳಿದ್ರು.

ಇದನ್ನೂ ಓದಿ:ಡಿಜೆಹಳ್ಳಿ-ಕೆಜಿಹಳ್ಳಿ ಗಲಭೆ ಪ್ರಕರಣ ; ಮಾಜಿ ಮೇಯರ್ ಸಂಪತ್ ರಾಜ್​ಗೆ ಜಾಮೂನು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.