ಚಿಕ್ಕೋಡಿ: ರಾಜಕಾರಣಿಗಳಿಗೆ ಮಾತ್ರ ವೇದಿಕೆ ಹಾಕಿ ನೆರಳು ಮಾಡಿದ್ದ ಅಧಿಕಾರಿಗಳು, ನೆರೆ ಸಂತ್ರಸ್ತರಿಗೆ ಮಾತ್ರ ಬಿಸಿಲಿನಲ್ಲಿಯೇ ಕೂರುವಂತೆ ಮಾಡಿದ್ದಾರೆ. ನೆರೆ ಸಂತ್ರಸ್ತರಿಗೆ ಸರಿಯಾಗಿ ಆಸನ ವ್ಯವಸ್ಥೆ ಕಲ್ಪಿಸದೇ ಇರೋದರಿಂದ ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರ ಮಾತುಗಳನ್ನು ಬಿಸಿಲಿನಲ್ಲಿಯೇ ಕುಳಿತು ಕೇಳುವ ಪರಿಸ್ಥಿತಿ ಎದುರಾಗಿತ್ತು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಆಯೋಜನೆ ಮಾಡಿದ ಕೃಷ್ಣಾ ನದಿ ಪ್ರವಾಹ ಪೀಡಿತ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದ್ ಕಣ್ಣಿಗೆ ಸುಣ್ಣ ಅನ್ನೋವಂತೆ ಅಧಿಕಾರಿಗಳು ತಾರತಮ್ಯ ಮಾಡಿರೋದು ಎದ್ದು ಕಾಣುತ್ತಿತ್ತು. ಇನ್ನು, ನೆರೆಸಂತ್ರಸ್ತರು ಬಿಸಿಲಿನಲ್ಲಿಯೇ ಕುಳಿತು ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.