ಬೆಳಗಾವಿ : ಬೈಕ್ ಪಕ್ಕಕ್ಕೆ ಇಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತವಾಗಿದ್ದು, ಓರ್ವನ ಮೇಲೆ ಹಲ್ಲೆ ಮಾಡಿರುವ ರಾಮದುರ್ಗ ಪಟ್ಟಣದಲ್ಲಿ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀರಾಮಸೇನೆ ಕಾರ್ಯಕರ್ತ ಗೋಪಾಲ್ ಬಂಡಿವಡ್ಡರ್‌ಗೆ ಚಾಕು ಇರಿತವಾಗಿದ್ದು, ರವಿ ಬಂಡಿವಡ್ಡರ್ ಎಂಬ ಯುವಕನ ತಲೆಗೆ ರಾಡ್ ನಿಂದ ಹಲ್ಲೆ ಮಾಡಲಾಗಿದೆ. ಇತ್ತ ಜಗಳ ಬಿಡಿಸಲು ಹೋದ ನಂಜುಂಡಿ ಸಾಬಣ್ಣ ಬಂಡಿವಡ್ಡರ್ ಎಂಬುವವರ ಮೇಲೆಯೂ ಹಲ್ಲೆಯಾಗಿದೆ. ಅವರನ್ನು ರಾಮದುರ್ಗ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಕರಣ ಹಿನ್ನೆಲೆ: ಬೈಕ್ ಪಕ್ಕಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಗಲಾಟೆ ನಡೆದಿದ್ದು ಒಂದು ಕೋಮಿನ ಐದಕ್ಕೂ ಅಧಿಕ ಯುವಕರಿಂದ ಚಾಕು, ರಾಡ್, ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಅಮೀನ್ ಜಂಗಲಶೇಖ್ ಮತ್ತು ಸಹಚರರಿಂದ ಹಲ್ಲೆ ಆರೋಪವಿದ್ದು ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆ ಬಳಿ ಸಂಬಂಧಿಕರು ಜಮಾವಣೆ ಆಗುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದಾರೆ.
ಇದನ್ನೂ ಓದಿ : ಸುಳೇಭಾವಿ ಡಬಲ್ ಮರ್ಡರ್ ಪ್ರಕರಣ: ಆರು ಜನ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಬೆಳಗಾವಿಯಲ್ಲಿ ಎರಡು ದಿನಗಳ ಹಿಂದಷ್ಟೇ ಸುಳೇಭಾವಿ ಗ್ರಾಮದಲ್ಲಿ ಅವಳಿ ಕೊಲೆಗಳು ಸಂಭವಿಸಿದೆ. ಈ ಪ್ರಕರಣ ತಿಳಿಕೊಳ್ಳುವ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಂದು ಬೈಕ್ ಪಾರ್ಕಿನ ಕಾರಣಕ್ಕೆ ನಡೆದಿರು ಗಲಾಟೆಯಾಗಿ ಚಾಕು ಇರಿತ ಮಾಡಲಾಗಿದೆ. ಬೆಳಗಾವಿಯಲ್ಲಿ ಕುಕೃತ್ಯಗಳು ಹೆಚ್ಚಾಗಿ ಕಂಡು ಬರುತ್ತಿದೆ.
ಸುಳೇಭಾವಿ ಪ್ರಕರಣದಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ಇಬ್ಬರು ಕಾನ್ಸ್ಟೇಬಲ್ಗಳನ್ನು ಸಹ ಕರ್ತವ್ಯ ಲೋಪದಡಿಯಲ್ಲಿ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಸುಳೇಭಾವಿ ಜೋಡಿ ಕೊಲೆ ಪ್ರಕರಣ: ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಅಮಾನತು